Discount Offers On Tata Cars: ಮೇ ತಿಂಗಳಲ್ಲಿ, ಟಾಟಾ ಮೋಟಾರ್ಸ್ ತನ್ನ ಟಿಯಾಗೋ, ಟಿಗೊರ್,   ಆಲ್ಟ್ರೋಜ್‌ , ಹ್ಯಾರಿಯರ್‌ ಮತ್ತು ಸಫಾರಿ ಮೇಲೆ 35,000 ರೂ.ವರೆಗಿನ  ರಿಯಾಯಿತಿ ನೀಡುತ್ತಿದೆ. ಈ ಮಾದರಿಗಳ ಮೇಲೆ ನಗದು ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂಪದಲ್ಲಿ ಆಫರ್ ಗಳನ್ನು ನೀಡಲಾಗುತ್ತಿದೆ. ಈ ರಿಯಾಯಿತಿ ಮಾರಾಟ ಮೇ 31ರವರೆಗೆ ಮಾನ್ಯವಾಗಿರುತ್ತವೆ.


COMMERCIAL BREAK
SCROLL TO CONTINUE READING

ಈ ಕಾರುಗಳ ಮೇಲೆ ಸಿಗುತ್ತಿದೆ ರಿಯಾಯಿತಿ : 
Tata Tiago : ಟಾಟಾ ಟಿಯಾಗೊ ಮೇಲೆ  20,000 ರೂಪಾಯಿ ನಗದು ರಿಯಾಯಿತಿ,  10,000 ರೂಪಾಯಿ ವಿನಿಮಯ ಕೊಡುಗೆ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಈ ಕಾರಿನ ಮೇಲೆ ಒಟ್ಟು 35,000  ರೂಪಾಯಿ ರಿಯಾಯಿತಿ ಸಿಕ್ಕಂತಾಗುತ್ತದೆ. ಮೇ 31 ರೊಳಗೆ ಈ ಟಾಟಾ ಟಿಯಾಗೊ ಕಾರನ್ನು ಬುಕ್ ಮಾಡಿದ್ದಲ್ಲಿ 35 ಸಾವಿರದಷ್ಟು ಕಡಿಮೆ ಬೆಲೆಗೆ ಈ ಕಾರನ್ನು ಖರೀದಿಸಬಹುದಾಗಿದೆ.   


ಇದನ್ನೂ ಓದಿ : ಈ 10 ಕ್ಷೇತ್ರಗಳಲ್ಲಿ ದುಡಿಯುವವರಿಗೆ ಮುಳ್ಳಾಗಲಿದೆ AI!ಎದುರಾಗಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ !


Tata Tigor : ಟಾಟಾ ಟಿಗೋರ್ ಮೇಲೆ ಕೂಡಾ 20,000  ರೂಪಾಯಿ ನಗದು ರಿಯಾಯಿತಿ,  10,000 ರೂಪಾಯಿ ವಿನಿಮಯ ಕೊಡುಗೆ ಮತ್ತು 5,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. ಎಲ್ಲಾ ರಿಯಾಯಿತಿಗಳನ್ನು ಒಟ್ಟು ಸೇರಿಸಿದರೆ ಈಕಾರಿನ ಮೇಲೆ ಕೂಡಾ 35,000 ರೂಪಾಯಿ ರಿಯಾಯಿತಿ ಸಿಗುತ್ತದೆ. 


Tata Altroz: ಟಾಟಾ ಆಲ್ಟ್ರೋಜ್‌ ಮೇಲೆ  15,000 ರೂಪಾಯಿ  ನಗದು ರಿಯಾಯಿತಿ,. 10,000 ರೂಪಾಯಿ  ವಿನಿಮಯ ಕೊಡುಗೆ ಮತ್ತು 3,000 ರೂಪಾಯಿ  ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.  ಟಾಟಾ ಆಲ್ಟ್ರೋಜ್‌ ಮೇಲೆ ಒಟ್ಟು 28,000 ರೂಪಾಯಿಗಳ ರಿಯಾಯಿತಿ ಕೊಡುಗೆ  ಲಭ್ಯವಿದೆ. 


ಇದನ್ನೂ ಓದಿ : ಈ 10 ಕ್ಷೇತ್ರಗಳಲ್ಲಿ ದುಡಿಯುವವರಿಗೆ ಮುಳ್ಳಾಗಲಿದೆ AI!ಎದುರಾಗಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ !


Tata Harrier : ಟಾಟಾ ಹ್ಯಾರಿಯರ್‌ ಖರೀದಿ ಮೇಲೆ  ಯಾವುದೇ ನಗದು ರಿಯಾಯಿತಿ ನೀಡಲಾಗಿಲ್ಲ. ಆದರೆ 25,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಮತ್ತು 10,000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ. ಈ ಎರಡು ರಿಯಾಯಿತಿ ಸೇರಿಸಿ ಟಾಟಾ ಹ್ಯಾರಿಯರ್‌  35,000 ರೂಪಾಯಿ ಡಿಸ್ಕೌಂಟ್ ಲಭ್ಯವಿರಲಿದೆ. 


Tata Safari:ಟಾಟಾ ಸಫಾರಿಯಲ್ಲಿಯೂ ಕ್ಯಾಶ್ ಡಿಸ್ಕೌಂಟ್ ನೀಡುತ್ತಿಲ್ಲ. ಆದರೆ ಹ್ಯಾರಿಯರ್‌ನಂತೆ, ಇದರ ಮೇಲೆ 25,000 ರೂ ಪಾಯಿಗಳ  ಎಕ್ಸ್‌ಚೇಂಜ್ ಆಫರ್ ಮತ್ತು  10,000 ರೂ. ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ. ಅಂದರೆ ಈ ಕಾರಿನ ಮೇಲೆ ಒಟ್ಟು 35,000 ರೂ.ಗಳ ಆಫರ್ ನೀಡಲಾಗಿದೆ. 


ಇದನ್ನೂ ಓದಿ : ಸೂಪರ್ ಬೈಕ್ ಲಾಂಚ್ ಮಾಡಿದ Ducati India! ಎಂಜಿನ್, ಬೆಲೆ, ವೈಶಿಷ್ಟ್ಯ ಎಲ್ಲವೂ ಅದ್ಭುತ !


ಈ ರಿಯಾಯಿತಿ ಕೊಡುಗೆಗಳನ್ನು ಯಾವ ಮಾಡೆಲ್ ಮತ್ತು ಯಾವ ವೆರಿಯೇಂಟ್ ಎನ್ನುವುದರ ಆಧಾರದ ಮೇಲೆ ನೀಡಲಾಗುತ್ತದೆ.  ಒಂದೇ ಮಾದರಿಯ ವಿವಿಧ ರೂಪಾಂತರಗಳ ಮೇಲೆ ಬೇರೆ ಬೇರೆ ಆಫರ್ ಗಳು ಕೂಡಾ ಲಭ್ಯವಿರಬಹುದು. ಅದಕ್ಕಾಗಿಯೇ, ಕಾರನ್ನು ಖರೀದಿಸುವ ಮೊದಲು, ಡೀಲರ್‌ಶಿಪ್‌ನಿಂದ ಆಫರ್ ಗಳ ಬಗ್ಗೆ ತಿಳಿದುಕೊಳ್ಳಿ. ಆದರೆ ಕಾರಿನ ಮೇಲೆ ಆಫರ್ ಇದೆ ಎನ್ನುವ ಕಾರಣಕ್ಕೆ ಖರೀದಿಸುವ ಬದಲು ನಿಮ್ಮ ಅಗತ್ಯತೆಗಳು ಮತ್ತು ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಹೆಚ್ಚು ಸೂಕ್ತವಾಗಿರುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.