ಈ 10 ಕ್ಷೇತ್ರಗಳಲ್ಲಿ ದುಡಿಯುವವರಿಗೆ ಮುಳ್ಳಾಗಲಿದೆ AI!ಎದುರಾಗಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ !

ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೆಲವೊಂದು ಕ್ಷೇತ್ರದ ಉದೋಗಗಳ ಮೇಲೆ ಅಪಾಯದ ಅಲೆ ಎದ್ದಿದೆ. ಬೃಹತ್ ಪ್ರಮಾಣದ ಡೇಟಾ, ಕ್ಲೌಡ್ ಕಂಪ್ಯೂಟಿಂಗ್ ಮತ್ತು AI ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಯೋಜಿಸಿರುವ 803 ಕಂಪನಿಗಳನ್ನು ಒಳಗೊಂಡ ಸಮೀಕ್ಷೆಯನ್ನು ಆಧರಿಸಿ ಈ ಡೇಟಾ  ಬಿಡುಗಡೆ ಮಾಡಲಾಗಿದೆ. 

Written by - Ranjitha R K | Last Updated : May 4, 2023, 11:27 AM IST
  • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಹಳಷ್ಟು ಜನರಿಗೆ ಸಹಾಯ ಮಾಡುತ್ತಿದೆ
  • ಇದು ಉದ್ಯೋಗಗಳನ್ನು ಕಸಿದುಕೊಳ್ಳುವತ್ತ ಕೂಡಾ ಹೆಜ್ಜೆ ಹಾಕುತ್ತಿದೆ
  • ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆ ಮಾಡಿದೆ ವರದಿ
ಈ 10 ಕ್ಷೇತ್ರಗಳಲ್ಲಿ ದುಡಿಯುವವರಿಗೆ ಮುಳ್ಳಾಗಲಿದೆ  AI!ಎದುರಾಗಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ !  title=

ಬೆಂಗಳೂರು : ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಹಳಷ್ಟು ಜನರಿಗೆ ಸಹಾಯ ಮಾಡುತ್ತಿದೆ ಎನ್ನುವುದು ಸುಳ್ಳಲ್ಲ. ಆದರೆ ನಿಧಾನವಾಗಿ ಇದು ಉದ್ಯೋಗಗಳನ್ನು ಕೂಡಾ ಕಸಿದುಕೊಳ್ಳುವತ್ತ  ಹೆಜ್ಜೆ ಹಾಕುತ್ತಿದೆ ಅನ್ನುವುದು ಕೂಡಾ ಅಷ್ಟೇ ಸತ್ಯ. ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, AI ಮತ್ತು ಇತರ ತಂತ್ರಜ್ಞಾನಗಳು ಬ್ಯಾಂಕ್ ಟೆಲ್ಲರ್‌ಗಳು, ಕ್ಯಾಷಿಯರ್‌ಗಳು ಮತ್ತು ಡೇಟಾ ಎಂಟ್ರಿ ಕ್ಲರ್ಕ್‌ಗಳಂತಹ ಉದ್ಯೋಗಗಳ ನೌಕರಿಗೆ ಅಪಾಯ ತಂದೊಡ್ಡಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಉದ್ಯೋಗಗಳು ಅಲಭ್ಯವಾಗಬಹುದು ಎಂದು ಕೂಡಾ ಅಂದಾಜಿಸಲಾಗಿದೆ. ಬೃಹತ್ ಪ್ರಮಾಣದ ಡೇಟಾ, ಕ್ಲೌಡ್ ಕಂಪ್ಯೂಟಿಂಗ್ ಮತ್ತು AI ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಯೋಜಿಸಿರುವ 803 ಕಂಪನಿಗಳನ್ನು ಒಳಗೊಂಡ ಸಮೀಕ್ಷೆಯನ್ನು ಆಧರಿಸಿ ಈ ಡೇಟಾ  ಬಿಡುಗಡೆ ಮಾಡಲಾಗಿದೆ. 

ಬ್ಯಾಂಕಿಂಗ್ ಮೇಲೆ ಬೀರಲಿದೆ ಹೆಚ್ಚು ಪರಿಣಾಮ  :
ಆನ್‌ಲೈನ್ ಬ್ಯಾಂಕಿಂಗ್ ಇತ್ತೀಚಿಗೆ ಜನಪ್ರಿಯವಾಗಿದೆ. ಬಹುತೇಕ ಮಂದಿ ಆನ್‌ಲೈನ್ ಮೂಲಕವೇ ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಗಿಸಿಕೊಳ್ಳುತ್ತಾರೆ. ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಅದೆಷ್ಟೋ ಭೌತಿಕ ಬ್ಯಾಂಕ್ ಶಾಖೆಗಳ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ಬ್ಯಾಂಕ್ ಶಾಖೆಗಳು ಮುಚ್ಚುವ ಭೀತಿ ಎದುರಾಗಿದೆ. ಬ್ಯಾಂಕ್ ಟೆಲ್ಲರ್ ಮತ್ತು ಸಂಬಂಧಿತ ಕ್ಲರ್ಕ್ ಉದ್ಯೋಗಗಳೇ ಇಲ್ಲವಾಗುವ ಆತಂಕ ಎದುರಾಗಿದೆ. ಈ ದಶಕದ ಅಂತ್ಯದ ಮೊದಲು ಇಂಥಹ ಉದ್ಯೋಗಗಳು ಸುಮಾರು 40 ಪ್ರತಿಶತದಷ್ಟು ಕಡಿಮೆಯಾಗಬಹುದು ಎಂದು ವರದಿಯಲ್ಲಿ  ಸೂಚಿಸಲಾಗಿದೆ.

ಇದನ್ನೂ ಓದಿ : ಇನ್ನು ತಪ್ಪಿಯೂ ನಿಮ್ಮ WhatsApp ಮೇಲೆ ಯಾರೂ ಕಣ್ಣಿಡುವುದು ಸಾಧ್ಯವಾಗುವುದಿಲ್ಲ! ಬಂದಿದೆ ಮೂರು ಹೊಸ ವೈಶಿಷ್ಟ್ಯ

ಏನು ಹೇಳುತ್ತದೆ ವರದಿ : 
ದಿ ಫ್ಯೂಚರ್ ಆಫ್ ಜಾಬ್ಸ್ 2023 ವರದಿಯ ಪ್ರಕಾರ, ಡೇಟಾ ಕ್ಲರ್ಕ್‌ಗಳ ಮೇಲೆ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚಿದೆ. ಐದು ವರ್ಷಗಳಲ್ಲಿ 8 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಾದ ನಂತರ ನಿರ್ವಾಹಕ ಮತ್ತು ಕಾರ್ಯನಿರ್ವಾಹಕ ಸಹಾಯಕರು ಮತ್ತು ಲೆಕ್ಕಪತ್ರ ನಿರ್ವಹಣೆ, ಬುಕ್‌ಕೀಪಿಂಗ್ ಮತ್ತು ಪೆಟ್ರೋಲ್ ಕ್ಲರ್ಕ್‌ಗಳ ಮೇಲೆ ತೂಗು ಗತ್ತಿ ನೇತಾಡುತ್ತಿದೆ ಎನ್ನಲಾಗಿದೆ. 

ಈ ಉದ್ಯೋಗಕ್ಕೆ ಹೆಚ್ಚುವುದು ಬೇಡಿಕೆ : 
'ಸೆಲ್ಫ್ ಡ್ರೈವಿಂಗ್ ಮತ್ತು ಎಲೆಕ್ಟ್ರಿಕ್ ವಾಹನ ತಜ್ಞರ ಬೇಡಿಕೆ ವೇಗವಾಗಿ  ಹೆಚ್ಚುತ್ತಿದೆ. 2023 ರಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಬೇಡಿಕೆಯ ಉದ್ಯೋಗಗಳ ಪಟ್ಟಿಯಲ್ಲಿ ಎಲೆಕ್ಟ್ರಿಕ್ ವಾಹನ ತಜ್ಞರು ಅಗ್ರಸ್ಥಾನದಲ್ಲಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಬೇಡಿಕೆ 40% ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ.  AI ಮತ್ತು  ಮೆಷಿನ್ ಲರ್ನಿಂಗ್ ಪರಿಣಿತರಿಗೆ ಬೇಡಿಕೆ ಹೆಚ್ಚಬಹುದು. ನಂತರ ಪರಿಸರ ಸಂರಕ್ಷಣಾ ತಜ್ಞರಿಗೆ ಸುಮಾರು 35% ರಷ್ಟು ಬೇಡಿಕೆ ಹೆಚ್ಚಾಗುವ  ನಿರೀಕ್ಷೆಯಿದೆ.

ಇದನ್ನೂ ಓದಿ :  ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News