ಬೆಂಗಳೂರು : ಗೂಗಲ್ ಅತ್ಯಂತ ಹೆಚ್ಚು ಬಳಸುವ ಸರ್ಚ್ ಇಂಜಿನ್ ಆಗಿದೆ. ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಮೂಡಿದರೂ, ಏನೇ ಸಂದೇಹ ಬಂದರೂ ಮೊದಲು ಆ ಬಗ್ಗೆ  ಗೂಗಲ್‌ನಲ್ಲಿ ಸರ್ಚ್ ಮಾಡಿ ಉತ್ತರ ಕಂಡು ಕೊಳ್ಳುವುದು ಬಹುತೇಕರು ಮಾಡುವ ಕೆಲಸ. ಪ್ರತಿ ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ ಎಂಡು ಹೇಳಲಾಗುತ್ತದೆ. ಪ್ರತಿ ವರ್ಷ ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ವರದಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಹೊರಬಿದ್ದಿರುವ ವರದಿಯಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರೆ. ದೈನಂದಿನ ಜೀವನಕ್ಕೆ ಸಂಬಂಧಪಟ್ಟಂತೆ ಇಂಟರ್ನೆಟ್ ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕುತೂಹಲಕಾರಿಯಾಗಿದೆ.  


COMMERCIAL BREAK
SCROLL TO CONTINUE READING

ಹೆಚ್ಚು ಸರ್ಚ್ ಮಾಡುವುದು ವೃತ್ತಿ ಸಂಬಂಧಿತ ಮಾಹಿತಿ :
ವರದಿಯ ಪ್ರಕಾರ, ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೀಗಾಗಿ ಹುಡುಗಿಯರು ಇಂಟರ್ನೆಟ್ ನಲ್ಲಿ ಕೂಡಾ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನೇ ಹುಡುಕುತ್ತಿರುತ್ತಾರೆ. ಯಾವ ವೃತ್ತಿಯನ್ನು ಮಾಡಬೇಕು ಅಥವಾ ಯಾವ ಕೋರ್ಸ್ ಮಾಡಬೇಕು ಎನ್ನುವ ಬಗ್ಗೆ ಸರ್ಚ್ ಮಾಡುತ್ತಿರುತ್ತಾರೆ. 


ಇದನ್ನೂ ಓದಿ : Rocket ಸ್ಪೀಡ್ ನಲ್ಲಿ ಇಂಟರ್ನೆಟ್ ಚಲಾಯಿಸಿ, ಅನಿಯಮಿತ ಡೇಟಾ ಜೊತೆಗೆ ಹಲವಾರು OTT ಬೆನಿಫಿಟ್ಸ್ ಹೊಂದಿರುವ ಯೋಜನೆ ಇಲ್ಲಿದೆ


ಆನ್‌ಲೈನ್ ಶಾಪಿಂಗ್ ಮೇಲೆ ಹೆಚ್ಚು ಮೋಹ : 
ಇದಲ್ಲದೇ ಹುಡುಗಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೆಚ್ಚು ಭೇಟಿ ಕೊಡುತ್ತಾರೆ.  ಬಟ್ಟೆಗಳ ವಿನ್ಯಾಸಗಳು, ಹೊಸ ಸಂಗ್ರಹಗಳು, ಆಫರ್ ಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಸರ್ಚ್ ಮಾಡುತ್ತಿರುತ್ತಾರೆ. 


ಸೌಂದರ್ಯ ಸಲಹೆಗಳಿಗಾಗಿ ಇಂಟರ್ನೆಟ್ ನೆರವು : 
ಹುಡುಗಿಯರು ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಇಂಟರ್‌ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳು ಫ್ಯಾಷನ್, ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಹುಡುಕಲು ಇಷ್ಟಪಡುತ್ತಾರೆ.


ಮೆಹೆಂದಿ ಡಿಸೈನ್ : 
ಹುಡುಗಿಯರು ಮೆಹಂದಿ ಹಚ್ಚಲು ಇಷ್ಟಪಡುತ್ತಾರೆ. ಈ ವಿಷಯ ಸಂಶೋಧನೆಯಲ್ಲೂ ಬೆಳಕಿಗೆ ಬಂದಿದೆ. ಹುಡುಗಿಯರು ಹೆಚ್ಚಾಗಿ ಗೂಗಲ್‌ನಲ್ಲಿ  ಮೆಹೆಂದಿ ಡಿಸೈನ್ ಗಳನ್ನೂ ಹುಡುಕುತ್ತಿರುತ್ತಾರೆ.  


ಇದನ್ನೂ ಓದಿ : Jio ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್! ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳ ದರಗಳಲ್ಲಿ ಶೇ.20 ರಷ್ಟು ಹೆಚ್ಚಳ


ರೊಮ್ಯಾಂಟಿಕ್ ಸಂಗೀತವೂ ಇಷ್ಟ :
ಸಾಮಾನ್ಯವಾಗಿ ಎಲ್ಲರೂ ಸಂಗೀತ ಕೇಳಲು ಇಷ್ಟಪಡುತ್ತಾರೆ. ಆದರೆ ಹುಡುಗಿಯರು ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು. ಹುಡುಗಿಯರು ಅಂತರ್ಜಾಲದಲ್ಲಿ ಸಾಕಷ್ಟು ರೋಮ್ಯಾಂಟಿಕ್ ಹಾಡುಗಳನ್ನು ಹುಡುಕುತ್ತಾರೆ ಮತ್ತು ಕೇಳುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.