ನವದೆಹಲಿ: Gmail App New Feature - ವಿಶ್ವದ ಅತ್ಯಂತ ಪ್ರಚಲಿತ ಇ-ಮೇಲ್ ಆಪ್ ಜಿಮೇಲ್ (Gmail) ತನ್ನ ಅಂಡ್ರಾಯಿಡ್ ಬಳಕೆದಾರರಿಗೆ ನೂತನ ವೈಶಿಷ್ಟ್ಯವೊಂದನ್ನು ಜಾರಿಗೊಳಿಸಿದೆ. ಜಿಮೇಲ್ ನಲ್ಲಿ ನೂತನ Copy And Remove ಬಟನ್ ಜೋಡಿಸಿದೆ. ಈ ಬಟನ್ ನಿಮಗೆ ಇ-ಮೇಲ್ ಕಂಪೋಸ್ ಮಾಡಲು ಬಳಕೆಯಾಗಲಿದೆ. ಅಂದರೆ ಇದನ್ನು ಬಳಸಿ ನೀವು ಸುಲಭವಾಗಿ ಇ-ಮೇಲ್ ಅನ್ನು ಕಾಪಿ ಅಥವಾ ಪೇಸ್ಟ್ ಮಾಡಬಹುದು. ಇದಲ್ಲದೆ ಒಂದು ವೇಳೆ ನೀವು ಬಯಸಿದರೆ ಯಾವುದೇ ಇ-ಮೇಲ್ ಅಡ್ರೆಸ್ಸ್ ಅನ್ನು ಡಿಲೀಟ್ ಕೂಡ ಮಾಡಬಹುದು. ಆದರೆ, ಕಂಪನಿ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಪ್ರಸ್ತುತ ನೀವು ನಿಮ್ಮ ಮೊಬೈಲ್ ಜಿಮೇಲ್ ಆಪ್ ತೆರೆದರೆ ಈ ವೈಶಿಷ್ಟ್ಯ ನಿಮಗೆ ಕಾಣಿಸಿಕೊಳ್ಳಲಿದೆ.


COMMERCIAL BREAK
SCROLL TO CONTINUE READING

ಈ ನೂತನ ವೈಶಿಷ್ಟ್ಯ ಹೇಗೆ ಬಳಸಬೇಕು?
ಈ ನೂತನ ವೈಶಿಷ್ಟ್ಯ ವನ್ನು ಎಲ್ಲಕ್ಕಿಂತ ಮೊದಲು ಟೆಕ್ನಾಲಾಜಿ ವೆಬ್ ಸೈಟ್ ಆಗಿರುವ Android Police ಮೊದಲು ಗುರುತಿಸಿದೆ. ಹೊಸ ಇ-ಮೇಲ್ ಕಂಪೋಸ್ ಮಾಡುವಾಗ ನೀವು ಈ ನೂತನ ವೈಶಿಷ್ಟ್ಯವನ್ನು ಬಳಸಬಹುದು. ಈ ವೈಶಿಷ್ಟ್ಯ ಬಳಸಲು ಮೊದಲು ನೀವು ನಿಮ್ಮ ಇ-ಮೇಲ್ ನ To ಬಾರ್ ನಲ್ಲಿ ಯಾರಾದರೊಬ್ಬರ ಇ-ಮೇಲ್ ಐಡಿ ಟೈಪ್ ಮಾಡಿ, ಬಳಿಕ ಆ ಐಡಿ ಮೇಲೆ ಟ್ಯಾಪ್ ಮಾಡಿದಾಗ ನಿಮಗೆ Copy ಅಥವಾ Remove ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿವೆ. ಮೊದಲು ಇದೆ ಕೆಲಸ ಮಾಡಲು ನಿಮಗೆ ಲಾಂಗ್ ಪ್ರೆಸ್ ಮಾಡಬೇಕಾದ ಅವಶ್ಯಕತೆ ಇತ್ತು. ಈ ನೂತನ ಅಪ್ಡೇಟ್ ಅನ್ನು ಜಿಮೇಲ್ ನ ಎಲ್ಲಾ ಬಳಕೆದಾರರಿಗೆ ಜಾರಿಗೊಳಿಸಲಾಗಿದೆ.


ಇದನ್ನೂ ಓದಿ-Google Alert: Gmail ಬಳಕೆದಾರರಿಗೆ Google Warning, ಹೊಸ ನಿಯಮ ಒಪ್ಪದಿದ್ದರೆ, ಈ ವೈಶಿಷ್ಟ್ಯಗಳು ನಿಮಗೆ ಸಿಗಲ್ಲ


ಜೀಮೇಲ್ ತನ್ನ ಬಳಕೆದಾರರಿಗೆ ನಿತ್ಯ ನೂತನ ಅನುಭವಗಳನ್ನು ನೀಡಲು ಕಾಲ-ಕಾಲಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದಕ್ಕೂ ಮೊದಲು ಗೂಗಲ್ ನವೆಂಬರ್ 2020ರಲ್ಲಿ ಜಿಮೇಲ್ ನಲ್ಲಿ ತನ್ನ ನೂತನ Contacts ಟ್ಯಾಬ್ ಜೋಡಿಸಿತ್ತು. ಈ ವೈಶಿಷ್ಟ್ಯ ಬಳಕೆದಾರರಿಗೆ ಯಾವುದೇ ಇತರ ಬಳಕೆದಾರರ ಮಾಹಿತಿ ಪಡೆಯಲು ಅನುವು ಕೊಡುತ್ತಿದೆ. ಈ ವೈಶಿಷ್ಟ್ಯ ಬಳಸಿ ನೀವು ಬಳಕೆದಾರರ ಫೋನ್ ನಂಬರ್, ಇ-ಮೇಲ್ ಅಡ್ರೆಸ್ಸ್, ಟೀಂ, ಮ್ಯಾನೇಜರ್ ಹಾಗೂ ಆಫೀಸ್ ಲೋಕೇಶನ್ ಗಳಂತಹ ಮಾಹಿತಿ ಪಡೆಯಬಹುದು.


ಇದನ್ನೂ ಓದಿ-GMAIL ನ ಈ Top Secret Feature ಗಳು ನಿಮಗೂ ಗೊತ್ತಿರಲಿಕ್ಕಿಲ್ಲ


ಇದಲ್ಲದೆ ಜೀಮೇಲ್(Gmail) ನಲ್ಲಿ  Undo Send button, Schedule button, confidential mode ಗಳಂತಹ ಇತರೆ ವೈಶಿಷ್ಟ್ಯಗಳು ಕೂಡ ನಿಮಗೆ ಸಿಗಲಿವೆ. ಅಂಡೂ ಬಟನ್ ಮೂಲಕ ಬಳಕೆದಾರರು ಇ-ಮೇಲ್ ಕಳುಹಿಸಿದ ಬಳಿಕವೂ ಅದನ್ನು ಪುನಃ ವಾಪಸ್ ಪಡೆಯಬಹುದು. ಕಾನ್ಫಿಡೆನ್ಸಿಯಲ್ ಮೋಡ್ ಆನ್ ಆದ ಮೇಲೆ ಕಳುಹಿಸಿದ ಇ-ಮೇಲ್ ಅನ್ನು ಮುಂದಿನ ವ್ಯಕ್ತಿ ಕಾಪಿ, ಫಾರ್ವರ್ಡ್ ಅಥವಾ ಪ್ರಿಂಟ್ ಮಾಡಲು ಸಾಧ್ಯವಿಲ್ಲ. ಇದಲ್ಲದೆ ನೀವು ಕಳುಹಿಸಲಾಗುವ ನಿಮ್ಮ ಇ-ಮೇಲ್ ಗೆ ಎಕ್ಸ್ಪೈರಿಯನ್ನು ಕೂಡ ನಿರ್ಧರಿಸಬಹುದು.


ಇದನ್ನೂ ಓದಿ-Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.