Google Alert - ನವದೆಹಲಿ: ಸರ್ಚ್ ಇಂಜಿನ್ ದೈತ್ಯ google ತನ್ನ Gmail ಬಳಕೆದಾರರಿಗೆ ವಾರ್ನಿಂಗ್ ನೀಡಿದೆ. ಕಂಪನಿ ಬಿಡುಗಡೆಗೊಳಿಸಿರುವ ನೂತನ ನಿಯಮ-ನಿಬಂಧನೆಗಳನ್ನು ಒಪ್ಪಿಕೊಳ್ಳಲೇಬೇಕು ಎಂದು Gmail ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿದೆ. ಹೊಸ ನಿಯಮಗಳನ್ನು ಒಪ್ಪದಿದ್ದರೆ ನಿಮ್ಮ ಖಾತೆಯಲ್ಲಿ ಪ್ರಮುಖ ವೈಶಿಷ್ಟ್ಯಗಳು ಸ್ಥಗಿತಗೊಳ್ಳಲಿವೆ. ಅಂದರೆ, ಬಳಕೆದಾರರು ಈ ವೈಶಿಷ್ಟ್ಯಗಳಿಂದ ವಂಚಿತರಾಗಲಿದ್ದಾರೆ. express.co.uk ಪ್ರಕಟಿಸಿರುವ ವರದಿಯೊಂದರಲ್ಲಿ ಈ ಮಾಹಿತಿ ನೀಡಲಾಗಿದೆ.
ಇದನ್ನು ಓದಿ- GMAIL ನ ಈ Top Secret Feature ಗಳು ನಿಮಗೂ ಗೊತ್ತಿರಲಿಕ್ಕಿಲ್ಲ
Gmail ಈ ವೈಶಿಷ್ಟ್ಯಗಳು ಬ್ಲಾಕ್ ಆಗಬಹುದು
ವರದಿಗಳ ಪ್ರಕಾರ ಗೂಗಲ್ ನ ಈ ವಾರ್ನಿಂಗ್ ಜನವರಿ 25 ರ ಡೆಡ್ ಲೈನ್ ಗೂ ಮೊದಲು ನೀಡಲಾಗಿದೆ. ಅಂತಿಮ ಗಡುವು ಮುಕ್ತಾಯಕ್ಕು ಮೊದಲು ಈ ಹೊಸ ನಿಯಮಗಳನ್ನು ಬಳಕೆದಾರರು ಒಪ್ಪಿಕೊಳ್ಳಬೇಕಾಗಿದೆ. ಒಂದು ವೇಳೆ ಒಪ್ಪಿಕೊಳ್ಳದೆ ಹೋದಲ್ಲಿ ಸ್ಮಾರ್ಟ್ ಕಂಪೋಸ್, ಅಸಿಸ್ಟೆಂಟ್ ರಿಮೈಂಡರ್ಸ್ ಹಾಗೂ ಆಟೋಮ್ಯಾಟಿಕ್ ಇ-ಮೇಲ್ ಫಿಲ್ಟರಿಂಗ್ ಗಳಂತಹ ವೈಶಿಷ್ಟ್ಯಗಳು ಬ್ಲಾಕ್ ಆಗಲಿವೆ. ಈ ಕುರಿತು ಹೇಳಿಕೆ ನೀಡಿರುವ Google ಜಿಮೇಲ್ ನಲ್ಲಿನ ಸ್ಮಾಲ್ ಪ್ರಿಂಟ್ ಅನ್ನು ಅಪ್ಡೇಟ್ ಮಾಡಲಾಗಿದೆ ಎಂದು ಹೇಳಿದೆ. ಬಳಕೆದಾರರಿಗೆ ಅವರ ವೈಯಕ್ತಿಕ ಡೇಟಾವರೆಗಿನ ಎಲ್ಲದರ ಕಂಟ್ರೋಲ್ ನೀಡುವುದರ ಜೊತೆಗೆ ಕಪ್ಲೈನ್ಸ್ ಗೆ ಸಂಬಂಧಿಸಿದ ಅವಶ್ಯಕತೆಗಳನ್ನು ಪೂರೈಸುವುದಾಗಿದೆ ಎಂದು ಅದು ಹೇಳಿದೆ.
ಇದನ್ನು ಓದಿ- Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!
ಈ ಮೊದಲು ಕೂಡ ಈ ವಾರ್ನಿಂಗ್ ನೀಡಿದೆ Google
ಗೂಗಲ್ ನ ಈ ಅಪ್ಡೇಟ್ ಆಪ್ ಬಳಕೆದಾರರಿಗೆ ಈ ವೈಶಿಷ್ಟ್ಯಗಳನ್ನು ಬಳಸಲು ಕಂಪನಿಯ ಜೊತೆಗೆ ಕೆಲ ದತ್ತಾಂಶಗಳನ್ನು ನೀಡಲು ಅನುಮತಿಸುತ್ತಾರೆಯೇ ಎಂಬ ಆಯ್ಕೆ ಒದಗಿಸುತ್ತದೆ. ಈ ಕುರಿತು ಬರೆದುಕೊಂಡಿರುವ ಗೂಗಲ್ "ನೀವು ಜನವರಿ 25, 2021 ರ ನಂತರ ಈ ವೈಶಿಷ್ಟ್ಯಗಳನ್ನು ಬಳಸುವುದನ್ನು ಮುಂದುವರಿಸಲು ಬಯಸಿದರೆ, ಈ ವಿಶೇಷ ವೈಶಿಷ್ಟ್ಯಗಳನ್ನು ಚಾಲನೆಯಲ್ಲಿಡಲು ನೀವು Google ಸೆಟ್ಟಿಂಗ್‌ಗಳಲ್ಲಿ ಆಯ್ಕೆ ಮಾಡಬೇಕಾಗುತ್ತದೆ" ಎಂದಿದೆ. ಈ ಮೊದಲು, ಬಳಕೆದಾರರು ಹೊಸ ನಿಯಮಗಳನ್ನು ಪಾಲಿಸದಿದ್ದರೆ ಅವರ ಜಿಮೇಲ್, ಗೂಗಲ್ ಫೋಟೋಗಳು ಮತ್ತು ಗೂಗಲ್ ಡ್ರೈವ್ ಡಿಲೀಟ್ ಆಗುವ ಸಾಧ್ಯತೆ ಇದೆ ಎಂದು ಗೂಗಲ್ ಹೇಳಿತ್ತು.
ಇದನ್ನು ಓದಿ-ಗೂಗಲ್ ಫೋಟೋ ಬಳಕೆ ಇನ್ನು ಮುಂದೆ ಉಚಿತವಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.