ನವದೆಹಲಿ: YouTube, Gmail Down: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಯೂಟ್ಯೂಬ್ (Youtube) ಮತ್ತು ಜಿಮೇಲ್ (Gmail) ಸ್ಥಗಿತಗೊಂಡಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ನಂತರ ಯೂಟ್ಯೂಬ್, ಜಿಮೇಲ್ ಸೇವೆಗಳನ್ನು ಇದೀಗ ಜಾಗತಿಕವಾಗಿ ಮರುಸ್ಥಾಪಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ, ಬಳಕೆದಾರರು ಯೂಟ್ಯೂಬ್, ಯೂಟ್ಯೂಬ್ ಟಿವಿ ಮತ್ತು ಯೂಟ್ಯೂಬ್ ಸಂಗೀತವನ್ನು ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ . ಇದಲ್ಲದೆ, Gmail ಬಳಕೆದಾರರು ಸಹ ಲಾಗ್ ಇನ್ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಯುಟ್ಯೂಬ್ ಕೂಡ ತಾಂತ್ರಿಕ ನ್ಯೂನಟೆಗಳಿಂದಾಗಿ ವಿಡಿಯೋ ಪ್ಲಾಟ್ ಫಾರ್ಮ್ ಡೌನ್ ಆಗಿತ್ತು ಎಂದು ದೃಢಪಡಿಸಿದೆ. ಜನಪ್ರೀಯ ವಿಡಿಯೋ ಪ್ಲಾಟ್ ಫಾರ್ಮ್ ಡೌನ್ ಆಗುತ್ತಲೇ ಸಾಮಾಜಿಕ ಮಾಧ್ಯಮಗಳಲ್ಲಿ #YouTubeDown ಟ್ರೆಂಡ್ ಆರಂಭಿಸಿದೆ.
YouTube ಹೇಳಿದ್ದೇನು?
ಈ ಕುರಿತು YouTube ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಾಮಾಜಿಕ ವಿಡಿಯೋ ತಾಣ, "ಸಾಕಷ್ಟು ಪ್ರಮಾಣದಲ್ಲಿ ಜನರು ಯುಟ್ಯೂಬ್ ಬಳಕೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನಮ್ಮ ತಂಡ ಸದಸ್ಯರು ಜಾಗರೂಕರಾಗಿದ್ದು, ಸಮಸ್ಯೆ ನಿವಾರಣೆಗೆ ಕಾರ್ಯತತ್ಪರರಾಗಿದ್ದಾರೆ. ಹೆಚ್ಚಿನ ವರದಿ ನಮ್ಮ ಬಳಿ ಬಂದಾಗ ಕೂಡಲೇ ನಾವು ನಿಮ್ಮ ಮುಂದೆ ಮತ್ತೆ ಹಾಜರಾಗಲಿದ್ದೇವೆ" ಎಂದಿತ್ತು.
Googleನ ಯಾವ ಯಾವ ಸೇವೆಗಳು ಪ್ರಭಾವಿತಗೊಂಡಿವೆ?
ಈ ಕುರಿತು ಪಟ್ಟಿ ಬಿಡುಗಡೆ ಮಾಡಿರುವ ಗೂಗಲ್ ಈ ಕ್ರ್ಯಾಶ್ ನಿಂದ ಯಾವ ಯಾವ ಸೇವೆಗಳ ಮೇಲೆ ಪ್ರಭಾವ ಉಂಟಾಗಿದೆ ಎಂಬುದನ್ನು ತಿಳಿಸಿದೆ. ಇದರಲ್ಲಿ Gmail, Google Drive, Google Docs, Google Chat, Googal Meet, Google Voice ಗಳಂತಹ ಸೇವೆಗಳು ಶಾಮೀಲಾಗಿವೆ.
ಇದಲ್ಲದೆ Google Calender, Google Sheets, Google Slides, Google Groups, Classic Hangouts, Currents, Google Forms, Google Cloud Search, Google Copy ಹಾಗೂ Google Task ಸೇವೆಗಳೂ ಕೂಡ ಪ್ರಭಾವಿತಗೊಂಡಿವೆ. ಜೊತೆಗೆ ಅಡ್ಮಿನ್ ಕನ್ಸೋಲ್, ಗೂಗಲ್ ಅನಲಿಟಿಕ್ಸ್, ಆಪ್ ಮೇಕರ್, ಗೂಗಲ್ ಮ್ಯಾಪ್ಸ, ಬ್ಲಾಗರ್, ಗೂಗಲ್ ಸಿಂಕ್ ಫಾರ್ ಮೊಬೈಲ್ ಹಾಗೂ ಕ್ಲಾಸ್ ರೂಂ ಮೇಲೂ ಕೂಡ ಈ ಕ್ರ್ಯಾಶ್ ನಿಂದ ಪ್ರಭಾವ ಉಂಟಾಗಿದೆ.
ಬಳಕೆದಾರರಿಗೆ ಉತ್ತರ ನೀಡಿದ ಜಿಮೇಲ್
ಜಿಮೇಲ್ ಡೌನ್ ಆದ ಕುರಿತು ದೂರು ಬಂದ ಬಳಿಕ ಟ್ವಿಟ್ಟರ್ ಮೇಲೆ ಬಳಕೆದಾರರನ್ನು ಪ್ರಶ್ನಿಸಿದ ಜಿಮೇಲ್ "ನೀವು ಅಧಿಕ ಮಾಹಿತಿ ನೀಡಬಹುದೇ? ನಿಮ್ಮ ಜಿಮೇಲ್ ಖಾತೆಯಲ್ಲಿ ಏನಾಗುತ್ತಿದೆ ಎಂಬುದನ್ನು ವಿವರಿಸುವಿರಾ? ಮತ್ತು ನೀವು ನಿಮ್ಮ ಜಿಮೇಲ್ ಅನ್ನು ಹೇಗೆ ತೆರೆಯುತ್ತಿರುವಿರಿ (ಅಂಡ್ರಾಯಿಡ್, ಐಓಎಸ್ ಅಥವಾ ಬ್ರೌಸರ್ ಮೇಲೆ)? ನಾವು ನಿಮಗೆ ಸಹಾಯ ಮಾಡಲು ಸಂಪೂರ್ಣ ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದೆ
We are aware that many of you are having issues accessing YouTube right now – our team is aware and looking into it. We'll update you here as soon as we have more news.
— TeamYouTube (@TeamYouTube) December 14, 2020
Memes ಗಳ ಸುರಿಮಳೆ
ಟ್ವಿಟರ್‌ನಲ್ಲಿ ಯೂಟ್ಯೂಬ್ ಚಾಲನೆಯಲ್ಲಿಲ್ಲ ಎಂಬ ಬಗ್ಗೆ ಬಳಕೆದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ಈ ಬಗ್ಗೆ ಮೇಮ್‌ಗಳನ್ನು ಸಹ ತೀವ್ರವಾಗಿ ಹಂಚಿಕೊಳ್ಳಲಾಗುತ್ತಿದೆ. ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದರೆ, ಅಗತ್ಯವಾದ ಮಾಹಿತಿ ಸಿಗುತ್ತಿಲ್ಲವಾದ್ದರಿಂದ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
DownDetector ಪ್ರಕಾರ ವಿಶ್ವಾದ್ಯಂತ ಗೂಗಲ್ ಬಳಕೆದಾರರ ಮೇಲೆ ಇದು ಪ್ರಭಾವ ಬೀರಿದೆ. ತಾವು ಅನುಭವಿಸುತ್ತಿರುವ ತೊಂದರೆಗಳ ಕುರಿತು YouTubeಗೆ ವರದಿ ಮಾಡಿರುವ ಬಳಕೆದಾರರಲ್ಲಿ ಶೇ.54 ರಷ್ಟು ಬಳಕೆದಾರರು ತಾವು ವೆಬ್ ಸೈಟ್ ಎಕ್ಸಸ್ ಮಾಡಲು ವಿಫಲರಾಗಿರುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಶೇ.42ರಷ್ಟು ಬಳಕೆದಾರರು ತಮಗೆ YouTubeನಲ್ಲಿ ವಿಡಿಯೋ ವಿಕ್ಷೀಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಶೇ.3 ರಷ್ಟು ಬಳಕೆದಾರರು ತಾವು ಲಾಗಿನ್ ಮಾಡಲು ತೊಂದರೆ ಎದುರಾಗುತ್ತಿದೆ ಎಂದಿದ್ದಾರೆ.
ಇದನ್ನು ಓದಿ- YouTube ವಿಡಿಯೋ ಗ್ಯಾಲರಿಯಲ್ಲಿ ಸೇವ್ ಮಾಡಬೇಕೆ? ಇಲ್ಲಿದೆ ಸಿಂಪಲ್ ಟ್ರಿಕ್
@gmail I need some help. For some reason my "Inbox" seems to be stuck & I have to go to "All Mail" to see my new mail. The last email in my inbox is from 12/14/19 except for ones I've stared or marked as important they move to the inbox. Looked around, can't figure this out.
— PICKD4PREZ🤘 (@pickd4prez) December 14, 2020