ನವದೆಹಲಿ: ಎಚ್ಚರ...! ಎಚ್ಚರ...! ನೀವು ಸಾಲ ಅಥವಾ ಹಣವನ್ನು ತೆಗೆದುಕೊಳ್ಳಲು ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಹಣಕಾಸು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದರೆ, ಜಾಗರೂಕರಾಗಿರಿ. ಚೀನೀ ಸರ್ವರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದ 5 ಹಣಕಾಸು ಅಪ್ಲಿಕೇಶನ್‌ಗಳನ್ನು ಗೂಗಲ್ ಆಪ್ ಸ್ಟೋರ್‌ನಲ್ಲಿ ನಿಷೇಧಿಸಿದೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಸಹ ಸರ್ಕಾರದಿಂದ ಅನುಮೋದನೆ ಪಡೆಯದ ಕಾರಣ ಕಾನೂನುಬಾಹಿರವಾಗಿವೆ.


COMMERCIAL BREAK
SCROLL TO CONTINUE READING

ಗೂಗಲ್ ಆಪ್ ಸ್ಟೋರ್‌ನಲ್ಲಿ ನಿಷೇಧಿಸಲಾಗಿರುವ ಐದು ಅಪ್ಲಿಕೇಶನ್‌ಗಳಿವು:
ಗೂಗಲ್ ಪ್ಲೇ ಸ್ಟೋರ್ Ok Cash, Go Cash, Flip Cash, ECash ಮತ್ತು SnapltLoan ಅನ್ನು ನಿಷೇಧಿಸಿದೆ. ಯಾವುದೇ ದೇಶದಲ್ಲಿ ಹಣಕಾಸು ಸಂಬಂಧಿತ ಆ್ಯಪ್‌ಗಳನ್ನು ಚಲಾಯಿಸಲು ಸ್ಥಳೀಯ ಸರ್ಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಗೂಗಲ್ (Google) ಹೇಳಿದೆ. ಆದರೆ ಈ ಐದು ಅಪ್ಲಿಕೇಶನ್‌ಗಳನ್ನು ಸರ್ಕಾರದ ಅನುಮೋದನೆಯಿಲ್ಲದೆ ಗೂಗಲ್ ಆಪ್ ಸ್ಟೋರ್‌ನಿಂದ ನಿರ್ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.


Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!


ಚೀನೀ ಸರ್ವರ್‌ಗಳನ್ನು ಬಳಸಲಾಗುತ್ತಿತ್ತು:
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ (Google Play Store)ನಲ್ಲಿನ ಈ ಐದು ಅಪ್ಲಿಕೇಶನ್‌ಗಳು ಚೈನೀಸ್ ಸಂಪರ್ಕವನ್ನು ಸಹ ಹೊಂದಿವೆ. ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಚೀನಾದ ಕಂಪನಿ ಅಲಿಬಾಬಾದ (Alibaba) ಕ್ಲೌಡ್ ಸರ್ವರ್‌ನಿಂದ ಚಾಲನೆ ಮಾಡಲಾಗಿದೆ. ಆದಾಗ್ಯೂ ಈ ಅಪ್ಲಿಕೇಶನ್‌ಗಳನ್ನು ಟ್ರೇಸ್ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.


ಇವುಗಳಿಂದಾಗುವ ಅಪಾಯವೇನು?
ವರದಿಯ ಪ್ರಕಾರ ಈ ಅಪ್ಲಿಕೇಶನ್‌ಗಳು ಸಾಲವನ್ನು ಪಾವತಿಸಲು ಬಳಕೆದಾರರನ್ನು ಬೆದರಿಸುತ್ತವೆ. ಆ್ಯಪ್ ಎಕ್ಸಿಕ್ಯೂಟಿವ್‌ನಿಂದ ಬೆದರಿಕೆ ಹಿನ್ನಲೆಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ್ಯಪ್‌ನ ಕಾರ್ಯನಿರ್ವಾಹಕ ಮಹಿಳೆ ಹಣವನ್ನು ಪಾವತಿಸದಿದ್ದರೆ ತನ್ನ ನಗ್ನ ಚಿತ್ರವನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಇಲ್ಲಿಯವರೆಗೆ ಸುಮಾರು 4 ಲಕ್ಷದಿಂದ 10 ಲಕ್ಷ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಗೂಗಲ್ ಫೋಟೋ ಬಳಕೆ ಇನ್ನು ಮುಂದೆ ಉಚಿತವಲ್ಲ


ಈ ಅಪಾಯದಿಂದ ಪಾರಾಗುವುದು ಹೇಗೆ?
ನೀವು Ok Cash, Go Cash, Flip Cash, ECash ಮತ್ತು SnapltLoan ನಂತಹ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ, ತಕ್ಷಣ ಅವುಗಳನ್ನು Uninstall ಮಾಡಿ. ನಿಮ್ಮ ಮೊಬೈಲ್‌ನಲ್ಲಿ ಇಂತಹ ಯಾವುದೇ ಅಪ್ಲಿಕೇಶನ್‌ಗಳು ಇದ್ದರೆ, ಅವುಗಳನ್ನು ಡಿಲೀಟ್ ಮಾಡುವುದಕ್ಕಿಂತ Uninstall ಮಾಡುವುದು ಉತ್ತಮ ಎಂದು ನೆನಪಿನಲ್ಲಿಡಿ.