ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !
BSNL tower near you:BSNLಗೆ ಪೋರ್ಟ್ ಆಗುವ ಮುನ್ನ ನಿಮ್ಮ ಸುತ್ತ ಮುತ್ತ ಅಥವಾ ಸಮೀಪದಲ್ಲಿ ಬಿಎಸ್ಎನ್ಎಲ್ ಟವರ್ ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
BSNL tower near you : ಅನೇಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿದ ನಂತರ,ಜನರು ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ನತ್ತ ಮುಖ ಮಾಡಿದ್ದಾರೆ. ಏಕೆಂದರೆ,BSNLನ ರೀಚಾರ್ಜ್ ಯೋಜನೆಗಳು ಇನ್ನು ಕೂಡಾ ಅಗ್ಗವಾಗಿವೆ. BSNL ಕೂಡಾ ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ.ಈಗ ಅದು ತನ್ನ 4G ಸೇವೆಯನ್ನು ಅತ್ಯಂತ ವೇಗವಾಗಿ ನಿಯೋಜಿಸುತ್ತಿದೆ.ಇತ್ತೀಚೆಗೆ,ಜುಲೈ 21 ರಂದು, BSNL ತನ್ನ 4G ಸ್ಯಾಚುರೇಶನ್ ಯೋಜನೆಯಡಿಯಲ್ಲಿ 1000 ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದೆ.ಇದಲ್ಲದೇ, BSNL ಒದಗಿಸುವ 4G ಸೇವೆಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಕಾರ್ಯಕ್ಷಮತೆಯ ಮಾನಿಟರಿಂಗ್ ಘಟಕವನ್ನು ರಚಿಸುತ್ತದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಅಗ್ಗದ ದರದಲ್ಲಿ ವೇಗವಾದ ಇಂಟರ್ನೆಟ್ ಸ್ಪೀಡ್ ಪಡೆಯಲು ಆನಂದಿಸಲು BSNLಗೆ ಬದಲಾಯಿಸುವ ಬಗ್ಗೆ ಯೋಚನೆ ನಡೆಯುತ್ತಿದೆ.ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುವ ಮೊದಲು ನೀವು ವಾಸಿಸುತ್ತಿರುವ ಕಡೆ BSNL ಟವರ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ : ಇವರು ಹೆಲ್ಮೆಟ್ ಧರಿಸದೆಯೇ ಚಲಾಯಿಸಬಹುದು ವಾಹನ! ಟ್ರಾಫಿಕ್ ಪೋಲಿಸ್ ತಪ್ಪಿಯೂ ನಿಲ್ಲಿಸುವುದಿಲ್ಲ
BSNL ಟವರ್ ಹತ್ತಿರದಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ? :
ಹಂತ 1:ಮೊದಲು ಈ ಸರ್ಕಾರಿ ವೆಬ್‌ಸೈಟ್‌ಗೆ ಹೋಗಿ: https://tarangsanchar.gov.in/
ಹಂತ 2:ಪುಟವನ್ನು ಕೆಳಗೆ ಸ್ಕ್ರಾಲ್ ಮಾಡಿ My Location ಬಟನ್ ಕ್ಲಿಕ್ ಮಾಡಿ.
ಹಂತ 3: ಮುಂದಿನ ಪುಟದಲ್ಲಿ, ನಿಮ್ಮ ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ.
ಹಂತ 4: Send me a mail with OTP ಮೇಲೆ ಕ್ಲಿಕ್ ಮಾಡಿ .
ಹಂತ 5: ಮೇಲ್ ನಲ್ಲಿ ಬಂದಿರುವ OTP ಹಾಕಿ.
ಹಂತ 6: ಮುಂದಿನ ಪುಟದಲ್ಲಿ ನಿಮಗೆ ಮ್ಯಾಪ್ ಕಾಣಿಸುತ್ತದೆ. ಸುತ್ತಲಿನ ಎಲ್ಲಾ ಮೊಬೈಲ್ ಟವರ್‌ಗಳು ಇಲ್ಲಿ ಕಾಣಿಸುತ್ತವೆ.
ಹಂತ 7: ಯಾವ ಟವರ್ ಮೇಲಾದರೂ ಕ್ಲಿಕ್ ಮಾಡಿ. ಅಲ್ಲಿ ಸಿಗ್ನಲ್ ಪ್ರಕಾರ (2G/3G/4G ಅಥವಾ 5G)ಮತ್ತು ಅದು ಯಾವ ಕಂಪನಿಯ ಟವರ್ ಎಂಬುದರ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ : ವೈಜ್ಞಾನಿಕ ಕ್ರಾಂತಿ ಮಾಡಿದ ಆಲ್ಬರ್ಟ್ ಐನ್‌ಸ್ಟೈನ್ ಅವರ ಐದು ಅವಿಷ್ಕಾರಗಳು..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.