ಇವರು ಹೆಲ್ಮೆಟ್ ಧರಿಸದೆಯೇ ಚಲಾಯಿಸಬಹುದು ವಾಹನ! ಟ್ರಾಫಿಕ್ ಪೋಲಿಸ್ ತಪ್ಪಿಯೂ ನಿಲ್ಲಿಸುವುದಿಲ್ಲ

Traffic Rules : ಸಂಚಾರಿ ನಿಯಮಗಳಲ್ಲಿ ಬಹಳ ಮುಖ್ಯವಾದದ್ದು ಹೆಲ್ಮೆಟ್ ಧರಿಸುವುದು.ಆದರೆ, ಇದೀಗ ಕೆಲವರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. 

Written by - Ranjitha R K | Last Updated : Jul 24, 2024, 11:52 AM IST
  • ಜನರ ಸುರಕ್ಷತೆಗಾಗಿ ಸರ್ಕಾರವು ಸಂಚಾರ ನಿಯಮಗಳನ್ನು ಮಾಡಿದೆ
  • ಈ ನಿಯಮಗಳನ್ನು ಮೀರಿ ನಡೆದರೆ ದಂಡ ತೆರಬೇಕಾಗುತ್ತದೆ
  • ಸಂಚಾರಿ ನಿಯಮಗಳಲ್ಲಿ ಹೆಲ್ಮೆಟ್ ಧರಿಸುವುದು ಕೂಡಾ ಒಂದು
ಇವರು ಹೆಲ್ಮೆಟ್ ಧರಿಸದೆಯೇ ಚಲಾಯಿಸಬಹುದು ವಾಹನ! ಟ್ರಾಫಿಕ್ ಪೋಲಿಸ್ ತಪ್ಪಿಯೂ ನಿಲ್ಲಿಸುವುದಿಲ್ಲ  title=

Traffic Rules In India : ಜನರ ಸುರಕ್ಷತೆಗಾಗಿ ಸರ್ಕಾರವು ಸಂಚಾರ ನಿಯಮಗಳನ್ನು ಮಾಡಿದೆ.ಈ ನಿಯಮಗಳನ್ನು ಮೀರಿ ನಡೆದರೆ ದಂಡ ತೆರಬೇಕಾಗುತ್ತದೆ.ಸಂಚಾರಿ ನಿಯಮಗಳಲ್ಲಿ ಹೆಲ್ಮೆಟ್ ಧರಿಸುವುದು ಕೂಡಾ ಒಂದು. ಹೆಲ್ಮೆಟ್ ಧರಿಸದೇ ಇದ್ದರೆ 5,000 ರೂ.ವರೆಗೆ ದಂಡ  ಪಾವತಿಸಬೇಕಾಗುತ್ತದೆ. ಆದರೆ ಇದೀಗ ಒಂದು ವರ್ಗಕ್ಕೆ ಮಾತ್ರ ಹೆಲ್ಮೆ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ.ಲ್ಮೆಟ್ ಇಲ್ಲದೆ ವಾಹನ ಚಲಾಯಿಸಲು ಇವರಿಗೆ ಅವಕಾಶ ನೀಡಲಾಗಿದೆ. ಇವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೂ ಟ್ರಾಫಿಕ್ ಪೋಲಿಸ್ ಇವರನ್ನು ತಡೆದು ನಿಲ್ಲಿಸುವುದಿಲ್ಲ. 

ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಲು  ಅವಕಾಶ : 
ಸಿಖ್ ಸಮುದಾಯದ ಜನರಿಗೆ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಲು ಅವಕಾಶ ನೀಡಲಾಗಿದೆ.ಈ ಸಮುದಾಯದ ಜನರು ತಲೆಯ ಮೇಲೆ ಪಗಡಿ  ಧರಿಸುತ್ತಾರೆ. ಹೀಗಾಗಿ ಪಗಡಿ ಮೇಲೆ ಹೆಲ್ಮೆಟ್ ಧರಿಸುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅಪಘಾತವಾದರೆ ತಲೆಗೆ ಏಟು ಬೀಳದಿರಲಿ ಎನ್ನುವ ಕಾರಣಕ್ಕಾಗಿ ತಲೆಯನ್ನು ರಕ್ಷಿಸಲು ಹೆಲ್ಮೆಟ್ ಅನ್ನು ಬಳಸಲಾಗುತ್ತದೆ.ಆದರೆ ಈ ಸಮುದಾಯದ ಜನರು ತಲೆಯ ಮೇಲೆ ಪಗಡಿ ಕಟ್ಟಿರುತ್ತಾರೆ. 

ಇದನ್ನೂ ಓದಿ :  ವೈಜ್ಞಾನಿಕ ಕ್ರಾಂತಿ ಮಾಡಿದ ಆಲ್ಬರ್ಟ್ ಐನ್‌ಸ್ಟೈನ್ ಅವರ ಐದು ಅವಿಷ್ಕಾರಗಳು..!

ಇವರ ತಲೆಯ ಮೇಲಿರುವ ಪಗಡಿಯೇ ತಲೆಯನ್ನು ಗಂಭೀರವಾದ ಗಾಯಗಳಿಂದ ರಕ್ಷಿಸುತ್ತದೆ.ಈ ಕಾರಣಕ್ಕಾಗಿ ಹೆಲ್ಮೆಟ್ ಧರಿಸದಿದ್ದರೂ ಪರವಾಗಿಲ್ಲ ಎನ್ನುವ ವಿನಾಯಿತಿಯನು ಸಿಖ್ ಸಮುದಾಯಕ್ಕೆ ನೀಡಲಾಗಿದೆ. ಇವುಗಳ ಹೊರತಾಗಿ,ಯಾರಾದರೂ ಅನಾರೋಗ್ಯದ ಕಾರಣದಿಂದ ಹೆಲ್ಮೆಟ್ ಧರಿಸದೇ ಇದ್ದರೆ,ಅವರಿಗೂ ವಿನಾಯಿತಿ ಇರುತ್ತದೆ.  ಆದರೆ ಇಲ್ಲಿ ಅನಾರೋಗ್ಯದ ಪುರಾವೆ ತೋರಿಸಬೇಕು. 

ಹೆಲ್ಮೆಟ್‌ಗಳ ನಿಯಮಗಳೇನು? : 
ನಿಯಮದ ಪ್ರಕಾರ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ಸೆಕ್ಷನ್ 129 ರ ಪ್ರಕಾರ,ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದರೆ, 5,000 ರೂ.ವರೆಗೆ ದಂಡ ವಿಧಿಸಬಹುದು.ಇನ್ನು ದ್ವಿಚಕ್ರ ವಾಹನದಲ್ಲಿ ಮಗು ಇದ್ದು, ಆ ಮಗುವಿನ ವಯಸ್ಸು 4 ವರ್ಷಕ್ಕಿಂತ ಹೆಚ್ಚಿದ್ದರೆ,  ಹೆಲ್ಮೆಟ್ ಧರಿಸುವುದು ಅವಶ್ಯಕ.ಇದಲ್ಲದೇ ಹಿಂಬದಿ ಪ್ರಯಾಣಿಕರು ಕೂಡಾ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಲೇ ಬೇಕು. 

ಇದನ್ನೂ ಓದಿ :  ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News