IMC 2022: 5ಜಿ ಎಮರ್ಜೆನ್ಸಿ ವ್ಯಾನ್ ನಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ, ಹೇಗೆ ಇಲ್ಲಿ ತಿಳಿದುಕೊಳ್ಳಿ
IMC 2022: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ 5ಜಿ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಕಾರ್ಯಕ್ರಮದ ಮೂಲಕ ಅವರು ಈ ಸೇವೆಯನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 5ಜಿ ಎಮರ್ಜೆನ್ಸಿ ವ್ಯಾನ್ ಡೆಮೋ ಕೂಡ ವೀಕ್ಷಿಸಿದ್ದಾರೆ. ಏನಿದು 5ಜಿ ಮೊಬೈಲ್ ವ್ಯಾನ್ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇದು ಯಾವ ಕ್ರಾಂತಿಕಾರಿ ಬದಲಾವಣೆ ತರಲಿದೆ ತಿಳಿದುಕೊಳ್ಳೋಣ ಬನ್ನಿ,
India Mobile Congress 2022: ಇಂದಿನಿಂದ ದೇಶಾದ್ಯಂತ 5ಜಿ ಸೇವೆ ಆರಂಭವಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿರುವ ಭಾರತೀಯ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗಳಿಗೆ ಚಾಲನೆ ನೀಡಿದ್ದಾರೆ. 5G ತಂತ್ರಜ್ಞಾನದ ಸಹಾಯದಿಂದ, ತಡೆರಹಿತ ಕವರೇಜ್, ಹೆಚ್ಚಿನ ಡೇಟಾ ದರಗಳು ಮತ್ತು ಅತ್ಯಂತ ವಿಶ್ವಾಸಾರ್ಹ ಸಂವಹನ ಸಾಧ್ಯವಾಗಲಿದೆ. ದೇಶದಲ್ಲಿ 5G ಸೇವೆಗಳನ್ನು ಪರಿಚಯಿಸುವುದರೊಂದಿಗೆ, ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ. 5ಜಿ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತಷ್ಟು ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ 5G ಪ್ರಮುಖ ಕೊಡುಗೆ ನೀಡಲಿದೆ.
ಇದನ್ನೂ ಓದಿ-5G Services Launch: ದೇಶದ ಈ 13 ನಗರಗಳಿಗೆ ಸಿಗಲಿದೆ ಮೊದಲು 5G ಸೇವೆ, ನಿಮ್ಮ ನಗರ ಈ ಪಟ್ಟಿಯಲ್ಲಿದೇಯಾ?
ಇಂದು ಭಾರತೀಯ ಮೊಬೈಲ್ ಕಾಂಗ್ರೆಸ್ ನಲ್ಲಿ 5ಜಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್ ಮೂಲಕ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೇಗೆ ಒದಗಿಸಬಹುದು ಎಂಬುದನ್ನು ತೋರಿಸಲಾಗಿದೆ. 5ಜಿ ನೆರವಿನಿಂದ ಹಳ್ಳಿಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಆದ್ಯತೆಯ ಚಿಕಿತ್ಸೆ ಒದಗಿಸುವುದರ ಜೊತೆಗೆ ಟೆಲಿಮೆಡಿಸಿನ್ ಮೂಲಕ ದೂರದಲ್ಲಿರುವ ವೈದ್ಯರು ಸಾಮಾನ್ಯ ರೋಗಿಗಳ ಚಿಕಿತ್ಸೆಯನ್ನು ರಿಯಲ್ ಟೈಮ್ ಆಧಾರದ ಮೇಲೆ ನಡೆಸಿ ಉಪಚರಿಸಬಹುದು.
ಇದನ್ನೂ ಓದಿ-5G Service Launch: ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಮೊಬೈಲ್ ವ್ಯಾನ್‌ನಲ್ಲಿ ಚಿಕಿತ್ಸೆ
ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆಯನ್ನು ಹೊಂದಿರುವ ಮೊಬೈಲ್ ವ್ಯಾನ್ ಕುರಿತು ಮಾಹಿತಿ ನೀಡಲಾಗಿದೆ. ದೂರದ ಹಳ್ಳಿಗಳ ವಾಸಿಸುವ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಈ ಮೊಬೈಲ್ ವ್ಯಾನ್ ಅನ್ನು ಬಳಸಬಹುದು. ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ಈ ಮೊಬೈಲ್ ವ್ಯಾನ್‌ನಿಂದ ದೂರದ ಇರುವ ವೈದ್ಯರು ಸಂಪರ್ಕ ಹೊಂದುತ್ತಾರೆ ಮತ್ತು ರೋಗಿಯ ಸ್ಥಿತಿಯ ಮೇಲೆ ನೇರ ನಿಗಾ ವಹಿಸುತ್ತಾರೆ. ಅವರು ನೈಜ ಸಮಯದಲ್ಲಿ ರೋಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ವ್ಯಾನ್‌ನಲ್ಲಿರುವ ಸಿಬ್ಬಂದಿಗೆ ಸಲಹೆ ನೀಡುವ ಮೂಲಕ ರೋಗಿಗೆ ಚಿಕಿತ್ಸೆ ನೀಡಲು ಇದರಿಂದ ಸಾಧ್ಯವಾಗಲಿದೆ. ಈ ಮೊಬೈಲ್ ವ್ಯಾನ್ ಬೆಲೆ 60 ಲಕ್ಷ ರೂ.ವರೆಗೆ ಇರುವ ಸಾಧ್ಯತೆ ಇದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.