5G Services Launch: ದೇಶದ ಈ 13 ನಗರಗಳಿಗೆ ಸಿಗಲಿದೆ ಮೊದಲು 5G ಸೇವೆ, ನಿಮ್ಮ ನಗರ ಈ ಪಟ್ಟಿಯಲ್ಲಿದೇಯಾ?

5G India: ದೇಶಾದ್ಯಂತ 5ಜಿ ಸೇವೆ ಬಿಡುಗಡೆಗೆ ಜನರು ಕಾತರದಿಂದ ಕಾಯುತ್ತಿದ್ದರು ಮತ್ತು ಅಂದುಕೊಂಡಂತೆ ದೇಶಾದ್ಯಂತ ಇಂದು 5ಜಿ ಸೇವೆ ಆರಂಭಗೊಂಡಿದೆ. 1 ಅಕ್ಟೋಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಹಾಗಾದರೆ ಬನ್ನಿ ಯಾವ 13 ನಗರಗಳ ಜನರಿಗೆ 5ಜಿ ಸೇವೆ ಆನಂದಿಸುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

Written by - Nitin Tabib | Last Updated : Oct 1, 2022, 12:56 PM IST
  • ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂದರೆ ಅಕ್ಟೋಬರ್ 1, 2022 ರಂದು
  • ಭಾರತದಲ್ಲಿ 5G ಸೇವೆಗಳನ್ನು ಆರಂಭಿಸಿದ್ದಾರೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಈ ಪ್ರದರ್ಶನದಲ್ಲಿ,
  • ಪ್ರಧಾನಿ ಮೋದಿ ಅವರು ಎಲ್ಲಾ ಟೆಲಿಕಾಂ ಕಂಪನಿಗಳ 5G ಡೆಮೊವನ್ನು ಸಹ ಅನುಭವಿಸಿದ್ದಾರೆ ಮತ್ತು ಮಕ್ಕಳೊಂದಿಗೆ ಸಂವಹನ ನಡೆಸುತ್ತಿದ್ದಾರೆ.
5G Services Launch: ದೇಶದ ಈ 13 ನಗರಗಳಿಗೆ ಸಿಗಲಿದೆ ಮೊದಲು 5G ಸೇವೆ, ನಿಮ್ಮ ನಗರ ಈ ಪಟ್ಟಿಯಲ್ಲಿದೇಯಾ? title=
5g service cities

First Cities Getting 5G In India: ದೇಶಾದ್ಯಂತ 5ಜಿ ಸೇವೆ ಬಿಡುಗಡೆಗೆ ಸಂಬಂಧಿಸಿದಂತೆ ಸಾಕಷ್ಟು ದಿನಗಳಿಂದ ಚರ್ಚೆಗಳು ಕೇಳಿ ಬರುತ್ತಿದ್ದವು. ಆದರೆ ಅಕ್ಟೋಬರ್ 1, 2022 ರಂದು ಜನರ ಈ ನಿರೀಕ್ಷೆಗಳಿಗೆ ತೆರೆಬಿದ್ದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದೇಶಾದ್ಯಂತ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. 5ಜಿ ಸೇವೆಯ ಬೆಲೆ ಎಷ್ಟು ಇರಲಿದೆ ಮತ್ತು ದೇಶದ ಯಾವ ಯಾವ ನಗರಗಳಲ್ಲಿ ಈ ಸೇವೆಯನ್ನು ಮೊದಲು ರೊಲ್ ಔಟ್ ಮಾಡಲಾಗುವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಭಾರತದಲ್ಲಿ ಬಿಡುಗಡೆಯಾಗಿದೆ 5ಜಿ ಸೇವೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂದರೆ ಅಕ್ಟೋಬರ್ 1, 2022 ರಂದು ಭಾರತದಲ್ಲಿ 5G ಸೇವೆಗಳನ್ನು ಆರಂಭಿಸಿದ್ದಾರೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಈ ಪ್ರದರ್ಶನದಲ್ಲಿ, ಪ್ರಧಾನಿ ಮೋದಿ ಅವರು ಎಲ್ಲಾ ಟೆಲಿಕಾಂ ಕಂಪನಿಗಳ 5G ಡೆಮೊವನ್ನು ಸಹ ಅನುಭವಿಸಿದ್ದಾರೆ ಮತ್ತು ಮಕ್ಕಳೊಂದಿಗೆ ಸಂವಹನ ನಡೆಸುತ್ತಿದ್ದಾರೆ.

ಇದನ್ನೂ ಓದಿ-5G Service Launch: ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ನಗರಗಳಿಗೆ ಎಲ್ಲಕ್ಕಿಂತ ಮೊದಲು 5ಜಿ ಸೇವೆ ಸಿಗಲಿದೆ
ಭಾರತದಲ್ಲಿ 5G ರೋಲ್‌ಔಟ್‌ನ ಮೊದಲ ಹಂತದಲ್ಲಿ ಯಾವ ನಗರಗಳನ್ನು ಸೇರಿಸಲಾಗಿದೆ, ಅಂದರೆ, ಯಾವ ನಗರಗಳಿಗೆ ಮೊದಲು 5G ಸೇವೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. ಅಹಮದಾಬಾದ್, ಗಾಂಧಿನಗರ, ಗುರುಗ್ರಾಮ್, ಬೆಂಗಳೂರು, ಚಂಡೀಗಢ, ಚೆನ್ನೈ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆ ಮೊದಲ ಹಂತದಲ್ಲಿ ಈ ಹದಿಮೂರು ನಗರಗಳಿಗೆ 5ಜಿ ಸೇವೆ ಸಿಗಲಿದೆ. ಈ ನಗರಗಳಲ್ಲಿ ವಾಸಿಸುವ ಜನರಿಗೆ 5G ಸೇವೆಯನ್ನು ಅನುಭವಿಸುವ ಮೊದಲ ಅವಕಾಶ ಸಿಗಲಿದೆ. ನಂತರದ ಹಂತಗಳಲ್ಲಿ ದೇಶಾದ್ಯಂತದ ಎಲ್ಲಾ ನಗರಗಳಲ್ಲಿ ಈ ಸೇವೆ ಆರಂಭಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಶಾಪಿಂಗ್ ಸೈಟ್ ಗಳಿವು .!

ಈ ಸಮಾರಂಭದಲ್ಲಿಯೇ, ಡೆಮೊ ನಂತರ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ, ಜಿಯೋ ನಂತಹ, ಭಾರತದಲ್ಲಿ 5G ಸೇವೆಯನ್ನು ಯಾವಾಗ ಆರಂಭಿಸಲಿವೆ ಮತ್ತು ಅವು ಯಾವ ಶುಲ್ಕದ ಮೇಲೆ ಈ ಸೇವೆಯನ್ನು ಆರಂಭಿಸಲಿವೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News