5G Service Launch: ದೇಶಾದ್ಯಂತದ ಒಟ್ಟು 13 ನಗರಗಳಲ್ಲಿ ಇಂದು (ಶನಿವಾರ) 5G ಸೇವೆಯನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ ಭಾರತದ 13 ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಆರಂಭವಾಗಲಿದೆ. ಏತನ್ಮಧ್ಯೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಭಾರತದಾದ್ಯಂತ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಉದ್ಯಮಿ ಮುಖೇಶ್ ಅಂಬಾನಿ ಹೇಳಿದ್ದಾರೆ.
ಹೊಸ ಯುಗದ ಆರಂಭ
ಭಾರತದ ಟೆಲಿಕಾಂ ಕ್ಷೇತ್ರದ ಪಾಲಿಗೆ ಇದೊಂದು ಮಹತ್ವದ ದಿನ ಎಂದು ಭಾರ್ತಿ ಎಂಟರ್‌ಪ್ರೈಸಸ್ ಸಂಸ್ಥಾಪಕ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಹೊಸ ಯುಗ ಆರಂಭವಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷದಲ್ಲಿ ಈ ಆರಂಭ ನಡೆಯುತ್ತಿದ್ದು, ದೇಶದಲ್ಲಿ ಹೊಸ ಜಾಗೃತಿ, ಶಕ್ತಿ ಆರಂಭವಾಗಲಿದೆ. ಇದು ಜನರಿಗೆ ಅನೇಕ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ಹೇಳಿದ್ದಾರೆ.
It's an important day. A new era is about to begin. This beginning is taking place in 75th yr of independence & will begin a new awareness,energy in the country. It'll open several new opportunities for people: Sunil Bharti Mittal, Bharti Enterprises founder-chairman#5GServices pic.twitter.com/h8KMPkwdoa
— ANI (@ANI) October 1, 2022
ಇದನ್ನೂ ಓದಿ-ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಶಾಪಿಂಗ್ ಸೈಟ್ ಗಳಿವು .!
ಟೆಲಿಗ್ರಾಂ ಉದ್ಯಮದಲ್ಲಿ ಕ್ರಾಂತಿಯಾಗಲಿದೆ
ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ, ಟೆಲಿಗ್ರಾಂ ಉದ್ಯಮವು 1.3 ಬಿಲಿಯನ್ ಭಾರತೀಯರು ಮತ್ತು ಸಾವಿರಾರು ಉದ್ಯಮಗಳ ಡಿಜಿಟಲ್ ಕನಸುಗಳನ್ನು ಮತ್ತಷ್ಟು ಹೊತ್ತಿಸಲಿದೆ ಎಂದಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಕೊಡುಗೆಯೊಂದಿಗೆ ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಇದು ವೇದಿಕೆಯನ್ನು ಸಿದ್ಧಪಡಿಸಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
Delhi| Telecom industry will further ignite digital dreams of 1.3 billion Indians & thousands of enterprises. It'll set stage for country to become 5 trillion dollar economy in next 3 years with a trillion dollar contribution: Kumar Mangalam Birla, chairman of Aditya Birla Group pic.twitter.com/XmPttEWq0Q
— ANI (@ANI) October 1, 2022
ಇದನ್ನೂ ಓದಿ-ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಬ್ಲಾಕ್‌ಚೇನ್ ಮತ್ತು ಮೆಟಾವರ್ಸ್‌ನಂತಹ 21 ನೇ ಶತಮಾನದ ಇತರ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ಸಹಾಯ ಮಾಡುವ ಮೂಲಭೂತ ತಂತ್ರಜ್ಞಾನವೆಂದರೆ ಅದು 5G ತಂತ್ರಜ್ಞಾನ ಎಂದು ನಾನು ಭಾವಿಸುತ್ತೇನೆ ಎಂದು ಮುಕೇಶ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.