ನವದೆಹಲಿ: Internet Speed Test Free - ಕೋವಿಡ್ ನಂತರ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ, ಇಂಟರ್ನೆಟ್ ಬಳಸುವ ಜನರ ಇಂಟರ್ನೆಟ್ ವೇಗ ಕಡಿಮೆಯಾದ ನಂತರ ತುಂಬಾ ಅಸಮಾಧಾನಗೊಲ್ಲುತ್ತಾರೆ. ಅಷ್ಟಕ್ಕೂ ಸಮಸ್ಯೆ ಏನೆಂದು ಅವರು ಕಸ್ಟಮರ್ ಕೇರ್ ಗೆ ಕರೆ ಮಾಡಿ ಕಂಡುಕೊಳ್ಳುತ್ತಾರೆ. ಆದರೆ ನೀವು ಗೂಗಲ್ ಮೂಲಕ ನಿಮ್ಮ ಇಂಟರ್ನೆಟ್ ವೇಗವನ್ನು ಪರಿಶೀಲಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ತಿಳಿದುಕೊಳ್ಳಲು ಹಲವು ವೆಬ್ ಸೈಟ್ ಗಳಿವೆ, ಈ ವೆಬ್ ಸೈಟುಗಳು ಇಂಟರ್ನೆಟ್ ವೇಗವನ್ನು ಹೇಳುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-iPhone SE 3: ಕಡಿಮೆ ಬೆಲೆಯಲ್ಲಿ ಆಪಲ್‌ನ 5G ಐಫೋನ್ ಖರೀದಿಸಲು ಅವಕಾಶ, ಇಲ್ಲಿದೆ ಬಂಪರ್ ಡಿಸ್ಕೌಂಟ್

ಇಂಟರ್ನೆಟ್ ಸ್ಪೀಡ್ ಟೆಸ್ಟ್ (Tech Tips) ಮಾಡಲು ಹಲವು ಆ್ಯಪ್‌ಗಳೂ ಇವೆ. ನೀವು Google ನಲ್ಲಿ ಹುಡುಕಾಟ ನಡೆಸುವ ಮೂಲಕವೂ ಕೂಡ ಇಂಟರ್ನೆಟ್ ವೇಗವನ್ನು ಸಹ ಪರೀಕ್ಷಿಸಬಹುದು. Google M-Lab ನೊಂದಿಗೆ ಪಾಲುದಾರಿಕೆ ಹೊಂದಿದೆ, ಅದರ ಸಹಾಯದಿಂದ ನೀವು ವೇಗ ಪರೀಕ್ಷೆ ಮಾಡಬಹುದು. ಇಂಟರ್ನೆಟ್ ವೇಗ ಪರೀಕ್ಷೆಯು ಉಚಿತವಾಗಿರುವುದಿಲ್ಲ. ನೀವು ಮೊಬೈಲ್ ಅಥವಾ ಇತರ ಯಾವುದೇ ಸಾಧನದಿಂದ ಪರಿಶೀಲಿಸುತ್ತಿದ್ದರೆ, ಡೇಟಾ ಶುಲ್ಕಗಳು ಅನ್ವಹಿಸುತ್ತದೆ. Google ಸಹಾಯದಿಂದ, ನೀವು ಇಂಟರ್ನೆಟ್ ಸ್ಪೀಡ್ ಪರೀಕ್ಷೆ ಹೇಗೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಇದನ್ನೂ ಓದಿ-Vodafone Ideaದ 299 ರೂ. ಯೋಜನೆಯಲ್ಲಿ ನಿತ್ಯ 1.5GB ಡೇಟಾ ಜೊತೆ ಸಿಗುತ್ತೆ ಹಲವು ಲಾಭ

ಈ ರೀತಿ ನೀವು ಇಂಟರ್ನೆಟ್ ವೇಗವನ್ನು ಪರಿಶೀಲಿಸಬಹುದು
1. ಮೊದಲನೆಯದಾಗಿ ನೀವು ನಿಮ್ಮ ಸಾಧನದಲ್ಲಿ google.com ಅನ್ನು ತೆರೆಯಬೇಕು.
2. ನಂತರ ನೀವು Google ನಲ್ಲಿ Run Speed Test ಅನ್ನು ಹುಡುಕಬೇಕು.
3. ತೆರೆದುಕೊಳ್ಳುವ ಪುಟದಲ್ಲಿ ನೀವು ಬಾಕ್ಸ್ ವೊಂದನ್ನು ನೋಡುವಿರಿ, ಅದರಲ್ಲಿ ನೀವು ನಿಮ್ಮ ಇಂಟರ್ನೆಟ್ ವೇಗವನ್ನು 30 ಸೆಕೆಂಡುಗಳಲ್ಲಿ ಪರಿಶೀಲಿಸಬಹುದು ಎಂದು ಬರೆಯಲಾಗಿರುತ್ತದೆ.


ಇದನ್ನೂ ಓದಿ-Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ

4. ಡೈಲಾಗ್‌ನ ಕೆಳಭಾಗದಲ್ಲಿರುವ Run Speed Test ಗುಂಡಿಯನ್ನು ನೀವು ಕ್ಲಿಕ್ ಮಾಡಬೇಕು.
5. ನಿಮ್ಮ ಮುಂದೆ ಒಂದು ಪಾಪ್-ಅಪ್ ತೆರೆದುಕೊಳ್ಳಲಿದೆ, ಅಲ್ಲಿ ನೀವು ಫಲಿತಾಂಶಗಳನ್ನು ಪಡೆಯುವಿರಿ.
6. ಇದು ವೇಗದ ಬಗ್ಗೆ ಮಾತ್ರ ಹೇಳುತ್ತದೆ, ಇದರ ಹೊರತಾಗಿ ಯಾವುದೇ ಫಲಿತಾಂಶ ಲಭ್ಯವಿರುವುದಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.