iPhone SE 3: ಕಡಿಮೆ ಬೆಲೆಯಲ್ಲಿ ಆಪಲ್‌ನ 5G ಐಫೋನ್ ಖರೀದಿಸಲು ಅವಕಾಶ, ಇಲ್ಲಿದೆ ಬಂಪರ್ ಡಿಸ್ಕೌಂಟ್

Apple ಇತ್ತೀಚೆಗೆ ತನ್ನ ಹೊಸ iPhone, iPhone SE 3 (2022) ಅನ್ನು ಬಿಡುಗಡೆ ಮಾಡಿತು, ಈ ಫೋನ್ ಗಾಗಿ ಪ್ರೀ ಆರ್ಡರ್‌ ಮಾಡಲಾಗುತ್ತಿತ್ತು. ಈ ಐಫೋನ್ ಅನ್ನು ಮಾರ್ಚ್ 18, 2022 ರಿಂದ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಇಂದು ನಾವು ನಿಮಗೆ ಆಪಲ್‌ನ ಈ ಅಗ್ಗದ 5G ಐಫೋನ್ ಅನ್ನು ಇನ್ನಷ್ಟು ಅಗ್ಗವಾಗಿ ಖರೀದಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Yashaswini V | Last Updated : Mar 19, 2022, 08:15 AM IST
  • iPhone SE 3 ಅನ್ನು ಕಡಿಮೆ ದರದಲ್ಲಿ ಖರೀದಿಸಲು ಸುವರ್ಣಾವಕಾಶ
  • ಈ ಐಫೋನ್ ಅನ್ನು ಮಾರ್ಚ್ 18, 2022 ರಿಂದ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ
  • ಈ ಐಫೋನ್ ಮೇಲೆ Amazon ಮತ್ತು Apple Store ನಲ್ಲಿ ಆಕರ್ಷಕ ಕೊಡುಗೆಗಳನ್ನು ಪಡೆಯಿರಿ
iPhone SE 3:  ಕಡಿಮೆ ಬೆಲೆಯಲ್ಲಿ ಆಪಲ್‌ನ 5G ಐಫೋನ್ ಖರೀದಿಸಲು ಅವಕಾಶ, ಇಲ್ಲಿದೆ ಬಂಪರ್ ಡಿಸ್ಕೌಂಟ್  title=
iPhone Offers

iPhone SE 3: ಕೆಲವು ದಿನಗಳ ಹಿಂದೆ, ವಿಶ್ವದ ಅತಿದೊಡ್ಡ ಮತ್ತು ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಆದ Apple ಕಂಪನಿಯು ತನ್ನ ಅಗ್ಗದ 5G ಐಫೋನ್, iPhone SE 3 ಅನ್ನು ಬಿಡುಗಡೆ ಮಾಡಿತು. ಈ ಸ್ಮಾರ್ಟ್‌ಫೋನ್  ಗಾಗಿ ಪ್ರೀ ಆರ್ಡರ್‌ ಮಾಡಲಾಗುತ್ತಿತ್ತು. ಇದೀಗ ಈ ಐಫೋನ್ ಅನ್ನು ಮಾರ್ಚ್ 18, 2022 ರಿಂದ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಇಂದು ನಾವು ನಿಮಗೆ ಆಪಲ್‌ನ ಈ  5G ಐಫೋನ್ ಅನ್ನು ಕಡಿಮೆ ದರದಲ್ಲಿ ಎಲ್ಲಿಂದ ಖರೀದಿಸಬಹುದು ಎಂಬ ಬಗ್ಗೆ ತಿಳಿಸಲಿದ್ದೇವೆ. 

iPhone SE 3 (2022) ಮಾರಾಟ ಪ್ರಾರಂಭ:
ಆಪಲ್ ಸಿಇಒ, ಟಿಮ್ ಕುಕ್ ಅವರು ಬಿಡುಗಡೆ ಸಮಾರಂಭದಲ್ಲಿ ಹೇಳಿದಂತೆ, ಐಫೋನ್ SE 3 (iPhone SE 3) (2022) ಅನ್ನು ಮಾರ್ಚ್ 18 ರಿಂದ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ನೀವು ಕಂಪನಿಯ ಆನ್‌ಲೈನ್ ಸ್ಟೋರ್, Apple ಸ್ಟೋರ್‌ನಿಂದ ಈ ಇತ್ತೀಚಿನ ಐಫೋನ್ ಅನ್ನು ಖರೀದಿಸಬಹುದು, ಹಾಗೆಯೇ, ಇದನ್ನು ಭಾರತದಲ್ಲಿನ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ Amazon ನಿಂದ ಖರೀದಿಸಬಹುದು.

ಇದನ್ನೂ ಓದಿ- Smartphone ಕವರ್ ಬದಲಾಯಿಸುವುದರಿಂದ ಹೆಚ್ಚಾಗುತ್ತದೆ Signal! ಫುಲ್ ನೆಟ್ವರ್ಕ್ ಗಾಗಿ ಇಲ್ಲಿವೆ ಟ್ರಿಕ್ಸ್

ಕಡಿಮೆ ಬೆಲೆಯಲ್ಲಿ  Apple ನ 5G ಐಫೋನ್ ಖರೀದಿಸುವುದು ಹೇಗೆ?
ಆಪಲ್‌ನ ಈ ಐಫೋನ್ ಕಂಪನಿಯ ಅಗ್ಗದ 5G ಐಫೋನ್ ಎಂದು ಪರಿಗಣಿಸಲಾಗಿದೆ. iPhone SE 3 (2022) ಭಾರತದಲ್ಲಿ ರೂ. 43,900 ಬೆಲೆಗೆ ಬಿಡುಗಡೆಯಾಗಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು Amazon ನಿಂದ ಖರೀದಿಸಿದರೆ, ಈ ಡೀಲ್‌ನಲ್ಲಿ ನೀಡಲಾದ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ನೀವು 15,200 ರೂ.ವರೆಗೆ ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದ ಮೇಲೆ, iPhone SE 3 ನಿಮಗೆ ಕೇವಲ 28,700 ರೂ.ಗಳಿಗೆ ಲಭ್ಯವಾಗಲಿದೆ.

ಇದನ್ನೂ ಓದಿ- BSNL ಭರ್ಜರಿ ಪ್ಲಾನ್: 50 ಪೈಸೆಗೆ ದಿನಕ್ಕೆ 2GB ಡೇಟಾ

ಅಲ್ಲದೆ, ಇದರ ಪಾವತಿಯನ್ನು ಎಸ್‌ಬಿಐನ ಕ್ರೆಡಿಟ್ ಕಾರ್ಡ್ (SBI Credit Card), ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ಕೋಟಕ್ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾಡಿದರೆ, ನಿಮಗೆ ಎರಡು ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ, ಇದರಿಂದ ನೀವು ಈ ಐಫೋನ್ ಅನ್ನು ಕೇವಲ 26,700 ರೂ.ಗೆ ಖರೀದಿಸಬಹುದು. 

Amazon ಹೊರತುಪಡಿಸಿ, ನೀವು Apple ನ ಅಧಿಕೃತ ಅಂಗಡಿಯಿಂದ iPhone SE 3 (2022) ಅನ್ನು ಖರೀದಿಸಬಹುದು. ಅಲ್ಲಿಯೂ ನೀವು ವಿನಿಮಯ ಕೊಡುಗೆಗಳು ಮತ್ತು EMI ಆಯ್ಕೆಗಳನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News