Kinetic Green e-Luna: ಪ್ರಸ್ತುತ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಒಲವು ಹೆಚ್ಚಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಕೈನೆಟಿಕ್ ಗ್ರೀನ್ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ ಶಕ್ತಿಶಾಲಿ ಮೊಪೆಡ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಮತ್ತೊಮ್ಮೆ ತನ್ನ ಜನಪ್ರಿಯ ಮತ್ತು ಲೆಜೆಂಡ್ ಬೈಕ್ ಲೂನಾವನ್ನು ಬಿಡುಗಡೆ ಮಾಡಿದೆ. ಈ ಬಾರಿ ಕಂಪನಿಯು ಈ ಬೈಕ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಹೌದು, ಕೈನೆಟಿಕ್ ಗ್ರೀನ್ ಭಾರತೀಯ ಮಾರುಕಟ್ಟೆಯಲ್ಲಿ ಇ-ಲೂನಾವನ್ನು ಬಿಡುಗಡೆ ಮಾಡಿದೆ. ಹೊಸ ಲೂನಾದಲ್ಲಿ ಕಂಪನಿಯು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ನೀಡಿದೆ. ಇದಲ್ಲದೇ ಈ ಬೈಕ್ ಕೇವಲ 10 ಪೈಸೆಯಲ್ಲಿ ಒಂದು ಕಿಲೋಮೀಟರ್ ಕ್ರಮಿಸಬಲ್ಲದು. ಈ ಬೈಕ್ ಖರೀದಿಸಿದರೆ ಪೆಟ್ರೋಲ್ ವೆಚ್ಚದಲ್ಲಿ ಪ್ರತಿ ತಿಂಗಳು 4721 ರೂಪಾಯಿ ಉಳಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಲೇಖನದಲ್ಲಿ ಕೈನೆಟಿಕ್ ಗ್ರೀನ್ ಇ-ಲೂನಾ  ಮೊಪೆಡ್‌ನಲ್ಲಿ ಯಾವ ವಿಶೇಷತೆಗಳಿವೆ ಮತ್ತು ಹಳೆಯ ಲೂನಾಕ್ಕಿಂತ ಇದು ಎಷ್ಟು ಭಿನ್ನವಾಗಿದೆ ಎಂಬುದನ್ನು ತಿಳಿಯೋಣ. 


ಇ-ಲೂನಾದ ಮೈಲೇಜ್: 
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ,  ಈ ಬೈಕ್ ಒಂದೇ ಚಾರ್ಜ್‌ನಲ್ಲಿ 110 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 50 ಕಿಮೀ ಆಗಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆ ತೆಗೆದುಕೊಳ್ಳುತ್ತದೆ.  ಈ  ಬೈಕ್‌ನ ತೂಕ 96 ಕೆಜಿ.  ಆಗಿದ್ದು, ಈ ಬೈಕ್‌ನಲ್ಲಿ  ಗ್ರಾಹಕರು 150 ಕೆಜಿಯಷ್ಟು ಲಗೇಜ್ ಅನ್ನು ಲೋಡ್ ಮಾಡಬಹುದು.  ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Convertible Scooter: ವಿಶಿಷ್ಠ ಶೈಲೀಯ ತ್ರಿಚಕ್ರ ವಾಹನ ಬಿಡುಗಡೆ ಮಾಡಿದ ಹೀರೋ, ನಿಮಿಷಾರ್ಥದಲ್ಲಿ ಸ್ಕೂಟರ್ ಆಗಿ ಬದಲಾಗುತ್ತೆ!


ಇ-ಲೂನಾ ಬೆಲೆ ಮತ್ತು ಬ್ಯಾಟರಿ ಸಾಮರ್ಥ್ಯ: 
ಕೈನೆಟಿಕ್ ಗ್ರೀನ್  ಕಂಪನಿಯು ಈ ಬೈಕ್ ಅನ್ನು 5 ಬಣ್ಣಗಳಲ್ಲಿ ಪರಿಚಯಿಸಿದೆ. ಗ್ರಾಹಕರು ಹಸಿರು, ಕಪ್ಪು, ಕೆಂಪು, ಹಳದಿ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಇ-ಲೂನಾವನ್ನು ಖರೀದಿಸಬಹುದಾಗಿದೆ. ಮೊದಲೇ ತಿಳಿಸಿದಂತೆ ಇ-ಲೂನಾ ಫುಲ್ ಚಾರ್ಜ್‌ನಲ್ಲಿ 110 ಕಿ.ಮೀ ಮೈಲೇಜ್ ನೀಡುತ್ತದೆ.  ಬೈಕ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 69,990 ರೂ.  ಆಗಿರಲಿದೆ. 


ಕೈನೆಟಿಕ್ ಗ್ರೀನ್ ಇ-ಲೂನಾದ ಬ್ಯಾಟರಿ ಪ್ಯಾಕ್ ಅನ್ನು ಬಗ್ಗೆ ಹೇಳುವುದಾದರೆ, ಇದರಲ್ಲಿ  ಕಂಪನಿಯು 2kwh ಲಿಥಿಯಂ ಐಯಾನ್ ಬ್ಯಾಟರಿ ಮತ್ತು 1.2kw ಮೋಟಾರ್ ಅನ್ನು ಒದಗಿಸಿದೆ. ಮುಂಬರುವ ಸಮಯದಲ್ಲಿ, e-Luna 3 kwh ಬ್ಯಾಟರಿ ಪ್ಯಾಕ್ ಅನ್ನು ಸಹ ಪಡೆಯುತ್ತದೆ ಎಂದು ಕಂಪನಿ ತಿಳಿಸಿದೆ. ಇದು 150 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 


ಹೆಮ್ಮೆಯ ವಿಷಯವೆಂದರೆ ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ. ನೀವು ಅದನ್ನು ಕಂಪನಿಯ ವೆಬ್‌ಸೈಟ್‌ನಿಂದ ಕೇವಲ 500 ರೂ.ಗೆ ಬುಕ್ ಮಾಡಬಹುದು. ಶೀಘ್ರದಲ್ಲೇ ಕಂಪನಿಯು ತನ್ನ ವಿತರಣೆಯನ್ನು ಪ್ರಾರಂಭಿಸುತ್ತದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಿಂದ ನೀವು ಸುಲಭವಾಗಿ ಇ-ಲೂನಾವನ್ನು ಖರೀದಿಸಬಹುದು ಎಂಬುದು ಇನ್ನೂ ವಿಶೇಷ. 


ಇದನ್ನೂ ಓದಿ- UPI ATM: ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಸುಲಭ ಪ್ರಕ್ರಿಯೆ


ಇ-ಲೂನಾದಲ್ಲಿ ಲಭ್ಯವಿರುವ ವಿಶೇಷ ವೈಶಿಷ್ಟ್ಯಗಳೆಂದರೆ: 
* ಸ್ಟೀಲ್ ಚಾಸಿಸ್
* ಹೈ ಫೋಕಲ್ ಹೆಡ್‌ಲೈಟ್
* ಡಿಜಿಟಲ್ ಮೀಟರ್
* ಸೈಡ್ ಸ್ಟ್ಯಾಂಡ್ ಸೆನ್ಸಾರ್
* ದೊಡ್ಡದಾದ ಕ್ಯಾರೇಯಿಂಗ್ ಸ್ಪೇಸ್ ಸೈಡ್
* ಗಾರ್ಡ್ ಸೇಫ್ಟಿ ಲಾಕ್ 
* ಕಾಂಬಿ ಬ್ರೇಕಿಂಗ್ ಸಿಸ್ಟಮ್ 
* ಬ್ಯಾಗ್ ಹುಕ್ 
* ಗ್ರಾಬ್ ರೈಲ್ 
* ಡಿಟ್ಯಾಚೇಬಲ್ ರಿಯರ್ ಸೀಟ್ 
* ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ 
* 16-ಇಂಚಿನ ಚಕ್ರಗಳು 
* ಫ್ರಂಟ್ ಲಗ್ ಗಾರ್ಡ್ 
* USB ಚಾರ್ಜಿಂಗ್ ಪಾಯಿಂಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.