ಈ ಎಲ್ಲಾ ಬದಲಾವಣೆಗಳೊಂದಿಗೆ ಏಪ್ರಿಲ್ ವೇಳೆಗೆ ಲಾಂಚ್ ಆಗಲಿದೆ New-Gen Maruti Swift

New-Gen Maruti Swift Launch Update : ಹೊಸ ಮಾದರಿಯ ಹ್ಯಾಚ್‌ಬ್ಯಾಕ್ ಏಪ್ರಿಲ್ ತಿಂಗಳ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೊಸ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಯಾಂತ್ರಿಕ ಅಪ್ಡೇಟ್ ಗಳೊಂದಿಗೆ ಈ ಹಿಸ ಮಾಡೆಲ್ ಬಿಡುಗಡೆಯಾಗಲಿದೆ.  

Written by - Ranjitha R K | Last Updated : Jan 24, 2024, 03:34 PM IST
  • ಕಳೆದ ವರ್ಷ ಕಾರು ಮಾರುಕಟ್ಟೆಗೆ ಅನೇಕ ಹೊಸ ಹೊಸ ಪ್ರಾಡಕ್ಟ್ ಗಳು ಬಿಡುಗಡೆ
  • ಈ ವರ್ಷದ ಆರಂಭದಲ್ಲಿಯೂ ಹಲವು ಕಾರುಗಳನ್ನು ಬಿಡುಗಡೆ
  • ಇದೀಗ ಮಾರುತಿ ಕೂಡಾ ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ.
ಈ ಎಲ್ಲಾ ಬದಲಾವಣೆಗಳೊಂದಿಗೆ ಏಪ್ರಿಲ್ ವೇಳೆಗೆ ಲಾಂಚ್ ಆಗಲಿದೆ New-Gen Maruti Swift  title=

New-Gen Maruti Swift Launch Update : ಕಳೆದ ವರ್ಷ ಕಾರು ಮಾರುಕಟ್ಟೆಗೆ ಅನೇಕ ಹೊಸ ಹೊಸ ಪ್ರಾಡಕ್ಟ್ ಗಳು ಬಿಡುಗಡೆಯಾಗಿವೆ. ಈ ವರ್ಷದ ಆರಂಭದಲ್ಲಿಯೂ ಹಲವು ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಮಾರುತಿ ಕೂಡಾ ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ. ಇದು New-Gen Maruti Swift ಅನ್ನು  ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹೊಸ ಮಾದರಿಯ ಹ್ಯಾಚ್‌ಬ್ಯಾಕ್ ಏಪ್ರಿಲ್ ತಿಂಗಳ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೊಸ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಯಾಂತ್ರಿಕ ಅಪ್ಡೇಟ್ ಗಳೊಂದಿಗೆ ಈ ಹೊಸ ಮಾಡೆಲ್ ಬಿಡುಗಡೆಯಾಗಲಿದೆ.  

ಮಾಧ್ಯಮ ವರದಿಗಳ ಪ್ರಕಾರ, ಅದರ ಉತ್ಪಾದನಾ ಕಾರ್ಯ ಮುಂದಿನ ತಿಂಗಳಿನಿಂದ ಪ್ರಾರಂಭವಾಗಬೇಕು. ಮಾರುತಿ ಸ್ವಿಫ್ಟ್ ಅನ್ನು ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನ ಮಾರ್ಪಡಿಸಿದ ಆವೃತ್ತಿಯಲ್ಲಿ ನಿರ್ಮಿಸಬಹುದು. ಇದು ಹಗುರವಾದ, ಹೆಚ್ಚಿನ ಸಾಮರ್ಥ್ಯದ ಅಲ್ಟ್ರಾ-ಹೈ ಟೆನ್ಸಿಲ್ ಸ್ಟೀಲ್ ಅನ್ನು ಹೊಂದಿರುತ್ತದೆ. 

ಇದನ್ನೂ ಓದಿ : iPhone ಪ್ರಿಯರಿಗೆ ಅತ್ಯದ್ಭುತ ಅಪ್‌ಡೇಟ್..! ಮುಂಬರುವ iPhone 16 ನಲ್ಲಿರುವ ವೈಶಿಷ್ಟ್ಯವೇನು..?

ಪ್ರಸ್ತುತ ಪೀಳಿಗೆಗೆ ಹೋಲಿಸಿದರೆ, ಹೊಸ ಸ್ವಿಫ್ಟ್ ನಲ್ಲಿ ಹೊಸ ಡಿಸೈನ್ ಲಾಂಗ್ವೇಜ್ ಅನ್ನು  ಅಳವಡಿಸಿಕೊಳ್ಳಬಹುದು. ಇದು ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಪರಿಷ್ಕೃತ ಬಂಪರ್, ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಹೊಸ ಅಲಾಯ್ ವ್ಹಿಲ್ ,  ಮತ್ತು  ಸಿ-ಆಕಾರದ ಎಲ್‌ಇಡಿ ಟೈಲ್ಯಾಂಪ್‌ನೊಂದಿಗೆ ಹೊಸ ಟೈಲ್‌ಗೇಟ್ ಅನ್ನು ಹೊಂದಿರಬಹುದು.  

ಪ್ರಸ್ತುತ ಮಾದರಿಯಲ್ಲಿ ಸಿ-ಪಿಲ್ಲರ್ ಮೌಂಟೆಡ್ ಡೋರ್ ಹ್ಯಾಂಡಲ್‌ಗಳನ್ನು ಸಾಂಪ್ರದಾಯಿಕ ಡೋರ್ ಹ್ಯಾಂಡಲ್‌ಗಳೊಂದಿಗೆ ಬದಲಾಯಿಸುವ ಸಾಧ್ಯತೆಯಿದೆ.ಸ್ವಿಫ್ಟ್‌ನ ಉದ್ದವು 15 ಎಂಎಂ ನಷ್ಟು ಹೆಚ್ಚಾಗಬಹುದು. ಇದು 3860 ಎಂಎಂ ಉದ್ದವಿದ್ದು, ಒಟ್ಟಾರೆ ಅಗಲ ಮತ್ತು ಎತ್ತರವನ್ನು 40 ಎಂಎಂ ಕಡಿಮೆ ಮಾಡುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : ಇಂದು ಬಿಡುಗಡೆಯಾಗುತ್ತಿದೆ OnePlus 12 ಸಿರೀಸ್ !ಏನಿರಲಿದೆ ಇದರ ವೈಶಿಷ್ಟ್ಯ?

ಇದರ ಕ್ಯಾಬಿನ್ ಹೊಸ ಮಾರುತಿ ಫ್ರಾಂಟೆಕ್ಸ್ ತರಹದ ವಿನ್ಯಾಸವನ್ನು ಪಡೆಯಬಹುದು.  ಇದು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ, ಡ್ಯುಯಲ್-ಟೋನ್, ಇಂಟಿರಿಯರ್  ಥೀಮ್,  ಕ್ಲೈಮೇಟ್ ಕಂಟ್ರೋಲ್ ಗಾಗಿ ಟಾಗಲ್ ಸ್ವಿಚ್ ಮತ್ತು ಹೊಸ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಅನ್ನು ಹೊಂದಿರುವ ಸಾಧ್ಯತೆ ಇದೆ. 

2024 ಮಾರುತಿ ಸ್ವಿಫ್ಟ್ ಎಲ್ಲಾ-ಹೊಸ Z-ಸರಣಿಯ 1.2L ಪೆಟ್ರೋಲ್ ಎಂಜಿನ್ ನೊಂದಿಗೆ ಬರಬಹುದು. ಇದನ್ನು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅಳವಡಿಸಬಹುದಾಗಿದೆ. ಈ ಸೆಟಪ್ 82bhp ಪವರ್ ಮತ್ತು 108Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. 

ಇದರ ಜಪಾನ್-ಸ್ಪೆಕ್ ಆವೃತ್ತಿಯು ಮ್ಯಾನುಯಲ್ ಮತ್ತು CVT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. ಆದರೆ ಭಾರತೀಯ ಸ್ವಿಫ್ಟ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಪಡೆಯುವ ನಿರೀಕ್ಷೆಯಿದೆ. ಹ್ಯಾಚ್‌ಬ್ಯಾಕ್‌ನ ಹೊಸ ಎಂಜಿನ್ ಉತ್ತಮ ಕಾರ್ಯಕ್ಷಮತೆ ಮತ್ತು ಮೈಲೇಜ್ ಎರಡನ್ನೂ ಒದಗಿಸುವ ಸಾಮರ್ಥ್ಯವನ್ನು ಹೊಂದಿರಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News