Lava Blaze NXT: ಈ ಡಿಜಿಟಲ್ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್ ಗಳದ್ದೇ ಹಾವಳಿ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಹಲವು ಸ್ಮಾರ್ಟ್‌ಫೋನ್ ಗಳು ಲಭ್ಯವಿವೆ. ಇದೀಗ ಲಾವಾ ಕಂಪನಿ ಕೂಡ 10,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕೆಲವೇ ದಿನಗಳ ಹಿಂದಷ್ಟೇ  Lava Blaze 5G ಅನ್ನು ಬಿಡುಗಡೆ ಮಾಡಿತ್ತು. ಇದು ಭಾರತದಲ್ಲಿ ಲಭ್ಯವಿರುವ ಇದುವರೆಗಿನ ಅಗ್ಗದ 5G ಫೋನ್ ಆಗಿದೆ. ಇದೀಗ ಲಾವಾ ಇಂದು ಭಾರತೀಯ ಮಾರುಕಟ್ಟೆಯಲ್ಲಿ 10,000 ರೂ.ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.  ಲಾವಾದ ಈ ಫೋನಿಗೆ Lava Blaze NXT ಎಂದು ಹೆಸರಿಡಲಾಗಿದ್ದು ಟಿಪ್‌ಸ್ಟರ್ ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ.  ಈಗ ಫೋನ್‌ನ ಲ್ಯಾಂಡಿಂಗ್ ಪೇಜ್ ಅಮೆಜಾನ್‌ನಲ್ಲಿ ಲೈವ್ ಆಗಿದೆ.


COMMERCIAL BREAK
SCROLL TO CONTINUE READING

Lava Blaze NXT ವೈಶಿಷ್ಟ್ಯಗಳು: 
Lava Blaze NXT ವೈಶಿಷ್ಟ್ಯಗಳು ಸೋರಿಕೆಯಾಗಿದೆ. ಟಿಪ್‌ಸ್ಟರ್ ಸುಧಾಂಶು ಅಬೋರ್ ಫೋನ್‌ನ ವೈಶಿಷ್ಟ್ಯಗಳನ್ನು ಸೋರಿಕೆ ಮಾಡಿದ್ದಾರೆ. ಅವರ ಪ್ರಕಾರ, ಲಾವಾ ಬ್ಲೇಜ್ ಎನ್‌ಎಕ್ಸ್‌ಟಿ ಅಸ್ತಿತ್ವದಲ್ಲಿರುವ ಲಾವಾ ಬ್ಲೇಜ್ ಫೋನ್‌ನ ಹೊಸ ಚಿಪ್‌ಸೆಟ್ ರೂಪಾಂತರವಾಗಿದೆ ಎಂದು ತಿಳಿದುಬಂದಿದೆ.  


ಇದನ್ನೂ ಓದಿ- Vivo ಸ್ಮಾರ್ಟ್‌ಫೋನ್ ಡೀಲ್: 21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಿ


Lava Blaze NXT ವಿಶೇಷಣಗಳು:
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, Lava Blaze NXT 6.5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.  ಇದು HD+ ರೆಸಲ್ಯೂಶನ್ ಮತ್ತು 20:9 ಆಕಾರ ಅನುಪಾತವನ್ನು ನೀಡುತ್ತದೆ. ಇದು 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ- ವಹಿವಾಟು ಮಿತಿ ಹೇರಲು ಸಜ್ಜಾಗಿವೆಯೇ GPay, PhonePe, Paytm ಮತ್ತಿತರ UPI ಪಾವತಿ ಅಪ್ಲಿಕೇಶನ್‌ಗಳು


ಲಾವಾ ಬ್ಲೇಜ್ NXT ಕ್ಯಾಮೆರಾ: 
ಲಾವಾ ಬ್ಲೇಜ್ NXT  ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆ ಇದ್ದು, ಹಿಂಭಾಗದಲ್ಲಿ 13MP ಕ್ಯಾಮೆರಾ ಲಭ್ಯವಿರುತ್ತದೆ. ಈ ಫೋನ್ 4GB RAM + 64GB ಸಂಗ್ರಹದೊಂದಿಗೆ ಬರುತ್ತದೆ. ಫೋನ್ ವಿನ್ಯಾಸವು ಲಾವಾ ಬ್ಲೇಜ್ ಅನ್ನು ಹೋಲುತ್ತದೆ ಎಂದು ಹೇಳಲಾಗುತ್ತಿದೆ.


ಲಾವಾ ಬ್ಲೇಜ್ NXT ಬೆಲೆ: 
ಟಿಪ್‌ಸ್ಟರ್ ಪ್ರಕಾರ, ಫೋನ್‌ನ ಬೆಲೆ 10,000 ರೂ.ಗಿಂತ ಕಡಿಮೆ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಫೋನ್‌ನ ಬೆಲೆ 8,699 ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.