ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ!

Internet Banking: ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ನೀವು ನಿಮ್ಮನ್ನು ಆನ್‌ಲೈನ್ ವಂಚನೆಯಿಂದ ರಕ್ಷಿಸಬಹುದು.  ಆನ್‌ಲೈನ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಯಿರಿ.

Written by - Yashaswini V | Last Updated : Nov 22, 2022, 03:28 PM IST
  • ಇಂಟರ್ನೆಟ್ ಬ್ಯಾಂಕಿಂಗ್ ಆಗಮನದೊಂದಿಗೆ ಬ್ಯಾಂಕಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಬದಲಾಗಿದೆ.
  • ಆದರೆ ಇಂಟರ್ನೆಟ್ ಬ್ಯಾಂಕಿಂಗ್ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
  • ಅವರ ಸಹಾಯದಿಂದ, ನೀವು ಆನ್‌ಲೈನ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ! title=
Internet banking safety tips

Internet Banking: ಇಂದಿನ ಕಾಲದಲ್ಲಿ ಬ್ಯಾಂಕಿಂಗ್ ಮಾಡುವ ವಿಧಾನ ಸಂಪೂರ್ಣವಾಗಿ ಬದಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಆಗಮನದಿಂದಾಗಿ ಪ್ರತಿ ಕೆಲಸಕ್ಕೂ ನಾವು ಬ್ಯಾಂಕಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ತಪ್ಪಿದಂತಾಗಿದೆ. ನಮ್ಮಲ್ಲಿ ಹೆಚ್ಚಿನವರು ಈಗ ಬ್ಯಾಂಕ್‌ಗೆ ಹೋಗದೆ ಮೊಬೈಲ್‌ನಲ್ಲಿ ತಮ್ಮ ಬಹುತೇಕ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ಜನರು ಆನ್‌ಲೈನ್ ಬ್ಯಾಂಕಿಂಗ್ ವಂಚನೆಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಸೈಬರ್ ವಂಚನೆಯಿಂದ ಪಾರಾಗಬಹುದು. ಈ ಲೇಖನದಲ್ಲಿ ನಾವು ಅಂತಹ ಕೆಲವು ಸುರಕ್ಷತಾ ಸಲಹೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ಆನ್‌ಲೈನ್ ವಂಚನೆಗೆ ಬಲಿಯಾಗುವುದನ್ನು ತಪ್ಪುಸಬಹುದು.

ಆನ್‌ಲೈನ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ವಿಷಯಗಳ ಬಗ್ಗೆ ಎಚ್ಚರವಿರಲಿ:
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ:

ವಾಟ್ಸಾಪ್, ಎಸ್ಎಂಎಸ್ ಅಥವಾ ಇಮೇಲ್‌ನಲ್ಲಿ ಸ್ವೀಕರಿಸಿದ ಲಿಂಕ್‌ಗಳ ಮೂಲಕ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಈ ನಕಲಿ ಅಪ್ಲಿಕೇಶನ್‌ಗಳ ಸಹಾಯದಿಂದ ಹ್ಯಾಕರ್‌ಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾವಾಗಲೂ ಯಾವುದೇ ಬ್ಯಾಂಕಿನ ಅಪ್ಲಿಕೇಶನ್ ಅನ್ನು Google Play-Store ಮತ್ತು App Store ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿನ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿದ ನಂತರವೇ ಪಟ್ಟಿಮಾಡಲಾಗುತ್ತದೆ.

ಎರಡು ಅಂಶದ ದೃಢೀಕರಣವನ್ನು ಬಳಸಿ:
ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸಲು ನೀವು ಬಯಸಿದರೆ, ಎರಡು ಅಂಶಗಳ ದೃಢೀಕರಣವನ್ನು ಖಂಡಿತವಾಗಿ ಬಳಸಿ. ಯಾರಾದರೂ ನಿಮ್ಮ ಖಾತೆಯನ್ನು ತೆರೆಯಲು ಪ್ರಯತ್ನಿಸುತ್ತಿದ್ದರೆ, ನೀವು ತಕ್ಷಣ ಮಾಹಿತಿಯನ್ನು ಪಡೆಯುತ್ತೀರಿ ಎಂಬುದನ್ನು ಈ ವೈಶಿಷ್ಟ್ಯವು ಖಚಿತಪಡಿಸುತ್ತದೆ. 

ಇದನ್ನೂ ಓದಿ- 20,000 ಮೌಲ್ಯದ Realme ಫೋನ್ ಕೇವಲ 999 ರೂಗಳಲ್ಲಿ ಲಭ್ಯ.!

ಪಿನ್, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಬಳಸಿ:
ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್‌ನಲ್ಲಿ ಪಿನ್, ಫಿಂಗರ್‌ಪ್ರಿಂಟ್ ಮತ್ತು ಫೇಸ್ ಅನ್‌ಲಾಕ್‌ನಂತಹ ಭದ್ರತಾ ವೈಶಿಷ್ಟ್ಯಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಇದರ ಪ್ರಯೋಜನವೆಂದರೆ ನಿಮ್ಮ ಫೋನ್ ಕದ್ದರೂ ಸಹ, ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಯಾರೂ ತೆರೆಯಲು ಸಾಧ್ಯವಾಗುವುದಿಲ್ಲ.

ಬಲವಾದ ಪಾಸ್ವರ್ಡ್ ಬಳಸಿ:
ಇಂಟರ್ನೆಟ್ ಬ್ಯಾಂಕಿಂಗ್ ಸಮಯದಲ್ಲಿ ನೀವು ದುರ್ಬಲ ಪಾಸ್‌ವರ್ಡ್ ಅನ್ನು ಬಳಸುತ್ತಿದ್ದರೆ, ಅದು ನಿಮಗೆ ಮಾರಕವಾಗಬಹುದು. ಏಕೆಂದರೆ ಇಂತಹ ಪಾಸ್ ವರ್ಡ್ ಗಳನ್ನು ಹ್ಯಾಕರ್ ಗಳು ಸುಲಭವಾಗಿ ಭೇದಿಸುತ್ತಾರೆ. ಹಾಗಾಗಿ, ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಬಲವಾದ ಪಾಸ್ವರ್ಡ್ ಬಳಸಿ. ಇದರೊಂದಿಗೆ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಪ್ರಬಲವಾದ ಗುಪ್ತಪದವನ್ನು ರಚಿಸಲು, ನೀವು ಅದಕ್ಕೆ ದೊಡ್ಡ, ಸಣ್ಣಕ್ಷರಗಳೊಂದಿಗೆ ಸಂಖ್ಯೆಗಳನ್ನು ಸೇರಿಸಬಹುದು.

ಇದನ್ನೂ ಓದಿ- ಫುಲ್ ಚಾರ್ಜ್‌ನಲ್ಲಿ 45 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಜಲನಿರೋಧಕ ಸ್ಮಾರ್ಟ್‌ಫೋನ್

ಸಾರ್ವಜನಿಕ ವೈ-ಫೈ ಸಂಪರ್ಕಗಳನ್ನು ಬಳಸಬೇಡಿ:
ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸಬೇಡಿ. ಏಕೆಂದರೆ ಹಾಗೆ ಮಾಡುವುದರಿಂದ ನೀವು ಆನ್‌ಲೈನ್ ವಂಚನೆಗೆ ಗುರಿಯಾಗಬಹುದು. ಇದು ವೈಯಕ್ತಿಕ ಡೇಟಾ ಸೋರಿಕೆಯಾಗುವ ಅಪಾಯವನ್ನೂ ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ, ನೆಟ್ ಬ್ಯಾಂಕಿಂಗ್‌ಗಾಗಿ ನೀವು ಖಾಸಗಿ ವೈ-ಫೈ ನೆಟ್‌ವರ್ಕ್ ಅನ್ನು ಬಳಸಬೇಕು. ಇದರೊಂದಿಗೆ, ನಿಮ್ಮ ವೈಯಕ್ತಿಕ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News