ಎಷ್ಟೇ ಹೇಳಿದರೂ ಪ್ರಯೋಜನಕ್ಕೆ ಬರುತ್ತಿಲ್ಲ, ಅದೆಷ್ಟೇ ಬೇಡಿಕೊಂಡರೂ ಉಪಯೋಗ ಆಗುತ್ತಲೇ ಇಲ್ಲ. ಅಂದಹಾಗೆ ನಾವು ಹೇಳುತ್ತಿರುವುದು ಭೂ ಮಾಲಿನ್ಯದ ಬಗ್ಗೆ. ಜಗತ್ತಿನಾದ್ಯಂತ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ಧ ಮಾಲಿನ್ಯದ ಪರಿಣಾಮ ಜೀವವೈವಿಧ್ಯ ನಾಶವಾಗಿ ಹೋಗುತ್ತಿದೆ. ಮನುಷ್ಯನ ದುರಾಸೆ ಹೀಗೆ ಮುಂದುವರಿದರೆ 2050ರ ಒಳಗೆ ಶೇ. 50ರಷ್ಟು ಜೀವವೈವಿಧ್ಯ ಭೂಮಿಯಿಂದ ಕಣ್ಮರೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಈ ನಡುವೆ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿವೋದ ಎರಡು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಬದಲಾವಣೆ


'30 ಬೈ 30' ಹೆಸರಿನಡಿ ಭೂಮಿಯ ಜೀವವೈವಿಧ್ಯ ರಕ್ಷಣೆಗೆ ಪಣ ತೊಟ್ಟಿದ್ದಾರೆ ವಿಜ್ಞಾನಿಗಳು. '30 ಬೈ 30' ಎಂದರೆ 2030ರ ಒಳಗಾಗಿ ಭೂಮಿ ಮೇಲಿನ ಶೇ. 30ರಷ್ಟು ಪ್ರದೇಶವನ್ನ ಮಾಲಿನ್ಯ ಮುಕ್ತವಾಗಿಸಲು ತೀರ್ಮಾನಿಸಲಾಗಿದೆ. ಸಮುದ್ರ, ನೆಲ ಸೇರಿ ಭೂಮಿ ಮೇಲಿನ ಶೇ. 30ರಷ್ಟು ಭಾಗವನ್ನು ಸಂಪೂರ್ಣ ಮಾಲಿನ್ಯ ಮುಕ್ತಗೊಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದಕ್ಕಾಗಿ ವಿಶೇಷ ಸಭೆಯನ್ನೂ ಆಯೋಜಿಸಲು ತೀರ್ಮಾನಿಸಲಾಗಿದೆ.


ಮುಳುಗುತ್ತಿದೆ ಭೂಮಿ: 


ಮಾಲಿನ್ಯದ ಪರಿಣಾಮ ಭೂ ವಾತಾವರಣದ ತಾಪಮಾನ ಹೆಚ್ಚಾಗುತ್ತಿದ್ದು, ಈಗಾಗಲೇ ಉತ್ತರ ಧ್ರುವ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಂಜು ಕರಗಿ ನೀರಾಗಿದೆ. ಇದು ಹೀಗೆ ಮುಂದುವರಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗುವ ಜೊತೆಗೆ, ಕರಾವಳಿಯ ನಗರಗಳು ಮುಳುಗುವ ಎಚ್ಚರಿಕೆ  ನೀಡಲಾಗಿದೆ. ಮತ್ತೊಂದು ಕಡೆ ಮಾನವ ಮಾಡುತ್ತಿರುವ ತಪ್ಪುಗಳಿಂದ ಸಾಕಷ್ಟು ಪ್ರಮಾಣದ ಜೀವವೈವಿಧ್ಯ ಕೂಡ ನಾಶವಾಗುತ್ತಿದೆ.


ಇದಷ್ಟೇ ಅಲ್ಲದೆ ಕಾಡುಗಳ ನಾಶ ಕೂಡ ಇದೀಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾಕಷ್ಟು ಕಾಡಿದ್ದರೆ ಯಾವುದೇ ಮಾಲಿನ್ಯವನ್ನು ಕೂಡ ಸರಿದೂಗಿಸಿಕೊಳ್ಳುವ ಸಾಮರ್ಥ್ಯ ಪ್ರಕೃತಿಗೆ ಇದೆ. ಆದ್ರೆ ಆ ಶಕ್ತಿಯನ್ನೇ ಮನುಷ್ಯ ನಾಶ ಮಾಡಿದರೆ ಮುಂದೆ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಈಗ ಉದ್ಭವವಾಗುತ್ತಿರೋ ಎಲ್ಲಾ ಸಮಸ್ಯೆಗಳ ಮೂಲ ಕೂಡ ಪ್ರಕೃತಿಯ ವಿನಾಶವೇ ಆಗಿದೆ. ದಟ್ಟ ಕಾನನಗಳು ಮಾಯವಾಗಿವೆ. ಸುಂದರ ಪ್ರಾಕೃತಿಕ ಪ್ರದೇಶಗಳು ಇದೀಗ ಕಾಂಕ್ರೀಟ್ ನಗರಗಳಾಗಿವೆ. ಇದು ಹೀಗೆ ಮುಂದುವರಿದರೆ ನಮಗೆ ನಾವೇ ಗುಂಡಿ ತೋಡಿಕೊಂಡಂತೆ ಆಗುತ್ತದೆ. 


ಇದನ್ನೂ ಓದಿ: Gold Wing Tour: ಭಾರತೀಯ ಮಾರುಕಟ್ಟೆಗೆ ಏರ್ ಬ್ಯಾಗ್, ಎಸಿ ಹೊಂದಿರುವ ದ್ವಿಚಕ್ರವಾಹನ ಎಂಟ್ರಿ!


ಪ್ರಕೃತಿಯನ್ನು ನಾವು ರಕ್ಷಿಸಿದ್ರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಆದರೆ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲವಾಗಿದೆ. ಒಟ್ಟಿನಲ್ಲಿ ತಾನು ಚೆನ್ನಾಗಿರಬೇಕು ಎಂದು ಆತ ಇರುವುದೆಲ್ಲವನ್ನೂ ಬಂಡವಾಳವಾಗಿಯೇ ನೋಡುತ್ತಿದ್ದಾನೆ. ಇದೆಲ್ಲದರ ಫಲವಾಗಿ ನಾವಿವತ್ತು ಎಲ್ಲಾ ರೀತಿಯ ಮಾಲಿನ್ಯಗಳನ್ನು ನೋಡುವಂತಾಗಿದೆ. ಆದ್ರೆ ಪ್ರಕೃತಿಯನ್ನು ರಕ್ಷಿಸಿದ್ರೆ ಅದೇ ಮುಂದೆ ದೊಡ್ಡ ಬಂಡವಾಳ, ಅದೂ ಜೀವವನ್ನು ರಕ್ಷಿಸೋ ಬಂಡವಾಳ ಅನ್ನೋ ವಿಷಯವನ್ನು ಮನುಷ್ಯ ಮರೆತಂತೆ ಕಾಣುತ್ತಿದೆ. ಅದು ಮುಂದಿನ ನಮ್ಮ ಪೀಳಿಗೆ, ಜೀವ ವೈವಿಧ್ಯಕ್ಕೆ ಕೊಡಲಿ ಪೆಟ್ಟು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.  


ಇಷ್ಟೆಲ್ಲದರ ನಡುವೆ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಕಠಿಣ ನಿಲುವು ತಳೆದು, ಭೂಮಿ ಮೇಲಿನ ಜೀವವೈವಿಧ್ಯ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ. ಆದರೆ ಈ ಯೋಜನೆ ಯಶಸ್ಸು ಕಾಣಲು ದೊಡ್ಡ ದೊಡ್ಡ ರಾಷ್ಟ್ರಗಳ ಸಹಕಾರ ಅತ್ಯಗತ್ಯ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.