Gold Wing Tour: ಭಾರತೀಯ ಮಾರುಕಟ್ಟೆಗೆ ಏರ್ ಬ್ಯಾಗ್, ಎಸಿ ಹೊಂದಿರುವ ದ್ವಿಚಕ್ರವಾಹನ ಎಂಟ್ರಿ!

ಕಂಪನಿಯು ಈಗಾಗಲೇ ಬುಕಿಂಗ್ ಪ್ರಾರಂಭಿಸಿದ್ದು, ಗುರುಗ್ರಾಮ, ಮುಂಬೈ, ಬೆಂಗಳೂರು, ಇಂದೋರ್, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನಲ್ಲಿರುವ ಹೋಂಡಾ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳಲ್ಲಿ ಈ ಮೋಟಾರ್‌ಸೈಕಲ್ ಲಭ್ಯವಿರುತ್ತದೆ.

Written by - Puttaraj K Alur | Last Updated : Apr 20, 2022, 05:23 PM IST
  • ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದ ಹೋಂಡಾ
  • 39.20 ಲಕ್ಷ ರೂ. ಬೆಲೆಯ 2022ರ ಹೋಂಡಾ ಗೋಲ್ಡ್ ವಿಂಗ್ ಟೂರ್ ಮೋಟಾರ್‌ಸೈಕಲ್ ರಿಲೀಸ್
  • ಹೋಂಡಾ ಗೋಲ್ಡ್ ವಿಂಗ್ ಟೂರ್ ಏರ್‌ಬ್ಯಾಗ್‌ನೊಂದಿಗೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ)ನಲ್ಲಿ ಲಭ್ಯ
Gold Wing Tour: ಭಾರತೀಯ ಮಾರುಕಟ್ಟೆಗೆ ಏರ್ ಬ್ಯಾಗ್, ಎಸಿ ಹೊಂದಿರುವ ದ್ವಿಚಕ್ರವಾಹನ ಎಂಟ್ರಿ! title=
2022ರ ಹೋಂಡಾ ಗೋಲ್ಡ್ ವಿಂಗ್ ಟೂರ್

ನವದೆಹಲಿ: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ. 39.20 ಲಕ್ಷ ರೂ. ಬೆಲೆಯ(ಎಕ್ಸ್ ಶೋರೂಂ ದರ) 2022ರ ಹೋಂಡಾ ಗೋಲ್ಡ್ ವಿಂಗ್ ಟೂರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೋಟಾರ್‌ಸೈಕಲ್ ಜಪಾನ್‌ನಿಂದ ಸಂಪೂರ್ಣವಾಗಿ ಬಿಲ್ಟ್ ಅಪ್ ರೂಪದಲ್ಲಿ ಭಾರತೀಯ ಮಾರುಕಟ್ಟೆಗೆ ರಿಲೀಸ್ ಆಗಿದ್ದು, ಮುಂಬರುವ ವಾರಗಳಲ್ಲಿ ಗ್ರಾಹಕರನ್ನು ತಲುಪಲಿದೆ.

ಹೋಂಡಾ ಗೋಲ್ಡ್ ವಿಂಗ್ ಟೂರ್ ಏರ್‌ಬ್ಯಾಗ್‌ನೊಂದಿಗೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್(DCT)ನಲ್ಲಿ ಲಭ್ಯವಿರುತ್ತದೆ. ಇದನ್ನು ಒಂದೇ ಟ್ರಿಮ್ ಮತ್ತು ಸಿಂಗಲ್ ಕಲರ್ ಆಯ್ಕೆಯಲ್ಲಿ ನೀಡಲಾಗುತ್ತಿದೆ. ಗನ್‌ಮೆಟಲ್ ಬ್ಲ್ಯಾಕ್ ಮೆಟಾಲಿಕ್‌ನಲ್ಲಿ ಬ್ಲ್ಯಾಕ್ಡ್ ಔಟ್ ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ. ಏರ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ರೈಡರ್ ಮತ್ತು ಸಹ ಸವಾರರಿಗೆ ಸುತ್ತಲೂ ತಣ್ಣನೆ ಗಾಳಿ ಬರುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: New Bike Driving Rule: ಬೈಕ್ ಸವಾರರೇ ಎಚ್ಚರ! ಸರ್ಕಾರದ ಈ ಹೊಸ ನಿಯಮಗಳನ್ನು ತಪ್ಪದೇ ಓದಿ

ವಿಸ್ತೃತ ಎಲೆಕ್ಟ್ರಿಕ್ ಸ್ಕ್ರೀನ್, ರೈಡರ್ ಮತ್ತು ಸಹ ಸವಾರಗೆ ಪ್ರತ್ಯೇಕ ಆಸನ, ಡ್ಯುಯಲ್ LED ಫಾಗ್ ಲೈಟ್‌, ಆಟೋ ಕ್ಯಾನ್ಸಲ್ ಇಂಡಿಕೇಟರ್ ಇದರ ವಿಶೇಷತೆಗಳಾಗಿವೆ. ಇದು ಕ್ರೂಸ್ ಕಂಟ್ರೋಲ್ ಸಿಸ್ಟಂ, ಥ್ರೊಟಲ್ ಬೈ ವೈರ್, ಆಡಿಯೋ ಮತ್ತು ನ್ಯಾವಿಗೇಷನ್ ಸಿಸ್ಟಂ, 7 ಇಂಚಿನ ಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಸ್ಕ್ರೀನ್ ಮತ್ತು ಎಲ್ಲಾ ಸಿಸ್ಟಂಗಳನ್ನು ಸಕ್ರಿಯಗೊಳಿಸುವ ಮತ್ತು ಎಮರ್ಜೆನ್ಸಿ ಕೀಲಿಯನ್ನು ಸಂಯೋಜಿಸುವ ಸ್ಮಾರ್ಟ್ ಕೀ ಸಹ ಹೊಂದಿದೆ.

Apple CarPlay ಮತ್ತು Android Auto, ಬ್ಲೂಟೂತ್ ಸಂಪರ್ಕ, 2 USB ಟೈಪ್ ಸಿ ಪೋರ್ಟ್, ಗೈರೊಕಾಂಪಾಸ್ ಒಳಗೊಂಡಿರುವ ನ್ಯಾವಿಗೇಷನ್ ಸಿಸ್ಟಂ ಇದ್ದು, ಇದು ಸುರಂಗದೊಳಗೆ ಸಾಗುವಾಗ ಅಡೆತಡೆಯಿಲ್ಲದ ಮಾರ್ಗದರ್ಶನ ಖಾತ್ರಿಗೊಳಿಸಲಿದೆ. ಇದರಲ್ಲಿರುವ ಹಗುರವಾದ ಸ್ಪೀಕರ್‌ಗಳು ಶಕ್ತಿಯುತ ಆಡಿಯೋ ಅನುಭವ ನೀಡುತ್ತದೆ.

ಇದನ್ನೂ ಓದಿ: Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!

ಹಳೆಯ ಮೋಟಾರ್‌ಸೈಕಲ್‌ಗೆ ಹೋಲಿಸಿದರೆ 2022ರ ಹೋಂಡಾ ಗೋಲ್ಡ್ ವಿಂಗ್ ಟೂರ್ ಒಟ್ಟು 61 ಲೀಟರ್ ಶೇಖರಣಾ ಸಾಮರ್ಥ್ಯ ಹೊಂದಿದೆ. ಇದು 50 ಲೀಟರ್‌ಗಳಿಂದ 2 ಪೂರ್ಣ-ಮುಖದ ಹೆಲ್ಮೆಟ್‌ಗಳನ್ನು ಸುಲಭವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇದು 1,833cc ಲಿಕ್ವಿಡ್-ಕೂಲ್ಡ್ 4-ಸ್ಟ್ರೋಕ್ 24-ವಾಲ್ವ್ SOHC ಫ್ಲಾಟ್-ಸಿಕ್ಸ್ ಎಂಜಿನ್ ಆಗಿದ್ದು, ಇದು 5,500rpmನಲ್ಲಿ 124bhp ಮತ್ತು 4,500rpmನಲ್ಲಿ 170Nm ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ಈಗಾಗಲೇ ಬುಕಿಂಗ್ ಪ್ರಾರಂಭಿಸಿದ್ದು, ಗುರುಗ್ರಾಮ, ಮುಂಬೈ, ಬೆಂಗಳೂರು, ಇಂದೋರ್, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನಲ್ಲಿರುವ ಹೋಂಡಾ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳಲ್ಲಿ ಈ ಮೋಟಾರ್‌ಸೈಕಲ್ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News