ಕ್ಯಾಲಿಫೋರ್ನಿಯಾ : NASA Video - ಅಮೆರಿಕಾದ ಭಾಹ್ಯಾಕಾಶ ಸಂಸ್ಥೆ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೀವೂ ಬೆರಗಾಗುವಿರಿ. ಈ ವಿಡಿಯೋದಲ್ಲಿ ಚಂದ್ರನ ದಕ್ಷಿಣ ಧ್ರುವದಿಂದ ಭೂಮಿ (Moon's South Pole) ಹೇಗೆ ಕಾಣಿಸುತ್ತದೆ ಎಂಬುದನ್ನು ತೋರಿಸಲಾಗಿದೆ.
ಎರಡು ನಿಮಿಷಗಳ ಅದ್ಭುತ ವಿಡಿಯೋ
ಈ ವೀಡಿಯೊವನ್ನು ಮೇರಿಲ್ಯಾಂಡ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿರುವ ಸೈಂಟಿಫಿಕ್ ವಿಶುವಲೈಶೇಷನ್ ಸ್ಟುಡಿಯೋ (NASA's Scientific Visualization Studio) ನಿರ್ಮಿಸಿದೆ. ಈ ಎರಡು ನಿಮಿಷಗಳ ವೀಡಿಯೊವನ್ನು ಮಾಡಲು ಈ ನಾಸಾ ಸ್ಟುಡಿಯೋ ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ. ಈ ವಿಡಿಯೋದಲ್ಲಿ ಭೂಮಿ ಮೇಲಿನಿಂದ ಕೆಳಕ್ಕೆ ವೇಗವಾಗಿ ಚಲಿಸುತ್ತಿರುವುದನ್ನು ನೀವು ಕಾಣಬಹುದು.
ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತಿದೆ. ಇದರಿಂದಾಗಿ ಚಂದ್ರನ (Moon) ಮೇಲೆ ಗ್ರಹಣ ಗೋಚರಿಸುತ್ತಿದೆ. ಭೂಮಿಯನ್ನು (Earth) ವೀಕ್ಷಿಸುವವರಿಗೆ ಇದು ಚಂದ್ರಗ್ರಹಣವಾಗಿದ್ದು, ಇದರಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತಿದೆ ಎಂದು ನಾಸಾ ಸ್ಟುಡಿಯೋ ವಿಡಿಯೋ ಬಿಡುಗಡೆ ಮಾಡಿದೆ.
ಇದನ್ನೂ ಓದಿ-Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ
NASA ಮೂನ್ ಮಿಶನ್
ಈ ಅನಿಮೇಷನ್‌ನಲ್ಲಿನ ವರ್ಚುವಲ್ ಕ್ಯಾಮೆರಾವು ಶಾಕಲ್ಟನ್ ಕ್ರೇಟರ್‌ನ ಅಂಚಿನಲ್ಲಿದೆ. ನಾಸಾ ತನ್ನ ಆರ್ಟೆಮಿಸ್ ಮೂನ್ ಲ್ಯಾಂಡಿಂಗ್ ಮಿಷನ್‌ಗಾಗಿ ಈ ಪ್ರದೇಶವನ್ನು ಗುರಿಯಾಗಿಸಿಕೊಂಡಿದೆ. US ಬಾಹ್ಯಾಕಾಶ ಸಂಸ್ಥೆಯು 2022 ರ ವೇಳೆಗೆ ಚಂದ್ರನ ಈ ಭಾಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಬಯಸುತ್ತಿದೆ.
You won’t find penguins at this South Pole 🐧
This visualization shows the unusual motions of the Earth and Sun as viewed from the Moon’s South Pole. The virtual camera is on the rim of the Shackleton Crater—a potential #Artemis lunar landing location. https://t.co/kMJdUlY1fU pic.twitter.com/YuP2Ik4GPV
— NASA Artemis (@NASAArtemis) October 23, 2021
ಇದನ್ನೂ ಓದಿ-Harvest Moon : ಆಗಸದಲ್ಲಿಕಾಣಿಸಲಿದೆ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ
ಫೆಬ್ರವರಿ 2022 ರೊಳಗೆ ಆರ್ಟೆಮಿಸ್ -1 ಮಿಷನ್ ಅನ್ನು ಪ್ರಾರಂಭಿಸಲು ಬಾಹ್ಯಾಕಾಶ ಸಂಸ್ಥೆ ಬಯಸುತ್ತಿದೆ. ನಾಸಾದ ಮುಂದಿನ ಮೂನ್ ಮಿಶನ್ ಗೆ ಆರ್ಟೆಮಿಸ್-2 (Artemis Moon-Landing Missions)ಎಂದು ಹೆಸರಿಸಲಾಗಿದೆ. ಇದರಲ್ಲಿ, ಚಂದ್ರನ ಕಕ್ಷೆಗೆ ಸಿಬ್ಬಂದಿಯನ್ನು ಕಳುಹಿಸಲಾಗುತ್ತಿದೆ. ಈ ಮಿಷನ್‌ನ ಉಡಾವಣೆಯ ದಿನಾಂಕವನ್ನು 2023 ರಲ್ಲಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ-Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ