ನವದೆಹಲಿ : ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಲ್ಲಿ (Whatsapp) ಅನೇಕ ವೈಶಿಷ್ಟ್ಯಗಳಿವೆ. ಈ ಎಲ್ಲಾ ವೈಶಿಷ್ಟ್ಯಗಳಿಂದಲೇ ಅತಿ ಹೆಚ್ಚು ಜನ ವಾಟ್ಸಾಪ್ ಅನ್ನೇ ಬಳಸುತ್ತಾರೆ. ವಾಟ್ಸಾಪ್ ಫೀಚರ್ ಗಳು (Whatsapp features), ಬಳಕೆದಾರರ ಚಾಟಿಂಗ್ ಅನುಭವವನ್ನು ಕೂಡಾ ವಿಶೇಷವಾಗಿಸುತ್ತದೆ. ಅಲ್ಲದೆ, ಈ ವೈಶಿಷ್ಟ್ಯಗಳು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿವೆ. ಅಂದಹಾಗೆ, ವಾಟ್ಸಾಪ್ ನ ಹೆಚ್ಚಿನ ವೈಶಿಷ್ಟ್ಯಗಳ ಬಗ್ಗೆ ನಿಮಗೂ ತಿಳಿದಿರಬೇಕು. ವಾಟ್ಸಾಪ್ ನಲ್ಲಿ ಒಂದು ವಿಶೇಷ ಫೀಚರ್ ಇದೆ. ಇದರ ಸಹಾಯದಿಂದ ನಿಮ್ಮ ವೈಯಕ್ತಿಕ ಮೆಸೇಜ್ ಗಳನ್  ಇಡಬಹುದು, ಹೌದು ಕೆಲವೊಮ್ಮೆ ಕೆಲ ಮೆಸೇಜ್ ಗಳನ್ನು ಡಿಲೀಟ್ ಮಾಡುವಂತೆಯೂ ಇರುವುದಿಲ್ಲ, ಹಾಗೆಯೆ ಪೋನಿನಲ್ಲಿ ಉಳಿಸುವಂತೆಯೂ ಇರುವುದಿಲ್ಲ. ಆ ಸಂದರ್ಭದಲ್ಲಿ ಈ ಫೀಚರ್ ಕೆಲಸಕ್ಕೆ ಬರುತ್ತದೆ.  ನೀವು ಯಾರಿಗೂ ತೋರಿಸದೆ ಇಡಬೇಕೆಂದಿರುವ ಮೆಸೇಜನ್ನು ಡಿಲೀಟ್ ಮಾಡದೆ ಹೈಡ್ ಮಾಡಿಡಬಹುದು.


COMMERCIAL BREAK
SCROLL TO CONTINUE READING

ಹಾಗಿದ್ದರೆ ವಾಟ್ಸಾಪ್ ಚಾಟನ್ನು ಡಿಲಿಟ್ ಮಾಡದೆ ಹೈಡ್ ಮಾಡಿಡುವುದು ಹೇಗೆ ನೋಡೋಣ..
1. ವಾಟ್ಸಾಪ್ ಚಾಟ್  (Whatsapp chat) ಅನ್ನು ಹೈಡ್ ಮಾಡಲು ಮೊದಲು ನೀವು ವಾಟ್ಸಾಪ್ ಖಾತೆಯನ್ನು ತೆರೆಯಬೇಕು.
2. ನಂತರ ನೀವು ಹೈಡ್ ಮಾಡಲು ಬಯಸುವ ಚಾಟ್ ಅನ್ನು ಒಪನ್ ಮಾಡಿ. 
3. ಯಾವ ವಾಟ್ಸಾಪ್ ಚಾಟ್ ಅನ್ನು ಹೈಡ್ ಮಾಡಲು ಬಯಸುತ್ತಿರೋ ಆ ಚ್ಯಾಟ್ ಮೇಲೆ ಸ್ವಲ್ಪ ಸಮಯದವರೆಗೆ ಹಾಗೆಯೇ ಟ್ಯಾಪ್ ಮಾಡಿ ಇಟ್ಟುಕೊಳ್ಳಿ. 


ಇದನ್ನೂ ಓದಿ : WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ?


4. ಇದರ ನಂತರ ಕೆಲವು ಆಯ್ಕೆಗಳು ತೆರೆದುಕೊಳ್ಳುತ್ತವೆ. ಇದರಲ್ಲಿ, ನೀವು ಆರೋ ಮಾರ್ಕ್ (Arrow mark) ಅನ್ನು ಆಯ್ಕೆ ಮಾಡಿಕೊಳ್ಳಬೇಕು. 
5. ಮೇಲಿನ ಮೂರು ಡಾಟ್ ಗಳಿರುವ ಬಲಭಾಗದಲ್ಲಿ ಈ ಆರೋ ಬಟನ್ ಕಾಣಿಸುತ್ತದೆ. ಅದಕ್ಕೆ ಆರ್ಕೈವ್ (Archive) ಬಟನ್ ಎಂದು ಹೆಸರಿಸಲಾಗಿದೆ. 
6. ನಂತರ ಆರ್ಕೈವ್ ಬಟನ್ ಟ್ಯಾಪ್ ಮಾಡಬೇಕು. ಅದರ ನಂತರ ನಿಮ್ಮ ಚಾಟ್ ಅನ್ನು ಆರ್ಕೈವ್ ಮಾಡಲಾಗುತ್ತದೆ. ಈ ವೈಶಿಷ್ಟ್ಯದ ವಿಶೇಷತೆಯೆಂದರೆ ಚಾಟ್ ಅನ್ನು ಆರ್ಕೈವ್ ಮಾಡಿದ ನಂತರ, ನಿಮ್ಮ ಒಪ್ಪಿಗೆಯಿಲ್ಲದೆ ಯಾರೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ.
7. ಆರ್ಕೈವ್ ಮಾಡಲಾದ ಚಾಟ್ ವಾಟ್ಸಾಪ್ ನಲ್ಲಿ ಕೆಳಭಾಗದಲ್ಲಿ ಕಾಣಿಸುತ್ತದೆ.


ಇದನ್ನೂ ಓದಿ : WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ


ಒಮ್ಮೆ archive ಮಾಡಿದ ಚಾಟನ್ನು Unarchive ಮಾಡಬೇಕಾದರೆ ಏನು ಮಾಡುವುದು ?
ಈ ಪ್ರಕ್ರಿಯೆ ಕೂಡಾ ಬಹಳ ಸುಲಭ 
1. ಆರ್ಕೈವ್ ಮಾಡಿದ ಚಾಟ್ ಅನ್ನು ಮತ್ತೆ ಸಹ Unarchive ಕೂಡಾ ಮಾಡಬಹುದು. ಹೀಗೆ ಮಾಡಲು ಚಾಟ್ ಮೇಲೆ ಸ್ವಲ್ಪ ಸಮಯದವರೆಗ ಟ್ಯಾಪ್ ಮಾಡಿಟ್ಟುಕೊಳ್ಳಬೇಕು. ನಂತರ Archive  ಐಕಾನ್ ಮೇಲೆ  ಕ್ಲಿಕ್ ಮಾಡಬೇಕು.
2. ಇಷ್ಟು ಮಾಡಿದರೆ ನಿಮ್ಮ ಚಾಟ್ ಮತ್ತೆ Unarchive ಆಗುತ್ತದೆ. ಮತ್ತೆ ಯಾರು ಬೇಕಾದರೂ ಆ ಚಾಟ್ ಓದುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ