iPhone 12 Mini Price Cut : ಫ್ಲಿಪ್‌ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಅದರಲ್ಲೂ iPhone 12 Miniಯನ್ನು ಅತ್ಯಂತ ಅಗ್ಗದ ಬೆಲೆಗೆ ಈ ಸೇಲ್ ನಲ್ಲಿ ಖರೀದಿಸುವುದು ಸಾಧ್ಯ.  60 ಸಾವಿರ ಬೆಲೆಯ ಐ ಫೋನ್ 12  ಮಿನಿಯನ್ನು   20,000 ರೂ.ಗೆ ಈ ಸೇಲ್ ನಲ್ಲಿ ಖರೀದಿಸಬಹುದು. ಇದು ಸಣ್ಣ ಸ್ಕ್ರೀನ್ ಜೊತೆಗೆ ಬಲವಾದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಐಫೋನ್ 12 ನಲ್ಲಿ ಕಂಡುಬರುವ ಅನೇಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್ ಐಫೋನ್ 12 ಮಿನಿ ಮೇಲೆ  ಅದ್ಭುತ  ಆಫರ್ : 
ಫ್ಲಿಪ್‌ಕಾರ್ಟ್‌ನಲ್ಲಿ 20,901 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್‌ನೊಂದಿಗೆ ಐಫೋನ್ ಅನ್ನು 38,999 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು 64GB  ಸ್ಟೋರೇಜ್ ನೊಂದಿಗೆ ಬರುವ ಮೂಲ ರೂಪಾಂತರವಾಗಿದೆ. iPhone 12 Mini ಮೂಲ ಬೆಲೆ 59,900 ರೂ.  ಆದರೆ ಫ್ಲಿಪ್‌ಕಾರ್ಟ್ ನಲ್ಲಿ  ಈ ಫೋನ್ ಮೇಲೆ  34% ವರೆಗೆ ರಿಯಾಯಿತಿ  ಪಡೆಯುವುದು ಸಾಧ್ಯವಾಗುತ್ತದೆ. ಈ ಫೋನ್ ಖರೀದಿ ಮೇಲೆ ಯಾವುದೇ ಬ್ಯಾಂಕ್ ಆಫರ್ ಇಲ್ಲ.  ಆದರೆ ಎಕ್ಸ್ಚೇಂಜ್ ಆಫರ್ ಇದೆ. ಈ ಮೂಲಕ  ಐ ಫೋನ್ 12  ಮಿನಿಯನ್ನು  ಕಡಿಮೆ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಆ ಒಂದು ನಕಲಿ ಖಾತೆಯ ಟ್ವೀಟ್ ನಿಂದಾಗಿ ಸಾವಿರಾರು ಕೋಟಿ ಕಳೆದುಕೊಂಡ Eli Lilly...!


ಐ ಫೋನ್ 12  ಮಿನಿ  ಎಕ್ಸ್ಚೇಂಜ್  ಆಫರ್ :
ಐ ಫೋನ್ 12  ಮಿನಿ ಮೇಲೆ 17,500 ರೂಪಾಯಿ ರಿಯಾಯಿತಿ  ನೀಡಲಾಗುತ್ತಿದೆ.  ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಪಡೆಯಬಹುದು.  ಎಕ್ಸ್ಚೇಂಜ್ ಮಾಡಿಕೊಳ್ಳುವ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 17,500 ರೂಗಳ ಪೂರ್ಣ ಆಫ್  ಸಿಗುತ್ತದೆ.  ಸಂಪೂರ್ಣ ರಿಯಾಯಿತಿ ಪಡೆಯುವುದು  ಸಾಧ್ಯವಾದರೆ ಫೋನ್‌ನ ಬೆಲೆ 19,549 ರೂ. ಆಗಿರಲಿದೆ. 


iPhone 12 ಮಿನಿ ವಿಶೇಷಣಗಳು :
iPhone 12 Mini 5.4-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ, ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್, A14 ಬಯೋನಿಕ್ ಚಿಪ್ಸೆಟ್ ಮತ್ತು 5G ಅನ್ನು ಬೆಂಬಲಿಸುತ್ತದೆ.


ಇದನ್ನೂ ಓದಿ : Airtel Prepaid : ಕೇವಲ 99 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ.! ಹೈ ಸ್ಪೀಡ್ ಇಂಟರ್ನೆಟ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.