ನವದೆಹಲಿ : ನಿಮ್ಮ ಮೊಬೈಲ್ ಫೋನ್ ರೀಚಾರ್ಜ್ ಪ್ಯಾಕ್‌ನ ವ್ಯಾಲಿಡಿಟಿ ಅವಧಿಯಲ್ಲಿ ಹೆಚ್ಚಳವಾಗಬಹುದು. ಪ್ರಸ್ತುತ, ರೀಚಾರ್ಜ್ ಪ್ಯಾಕ್ ಸಿಂಧುತ್ವವು 28 ದಿನಗಳವರೆಗೆ ಇದೆ. ಇದನ್ನು 30 ದಿನಗಳವರೆಗೆ ವಿಸ್ತರಿಸುವ ಬಗ್ಗೆ ಪ್ರಸ್ತಾಪವಿದೆ. ಈ ನಿಟ್ಟಿನಲ್ಲಿ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೋರಿದೆ. ಜೂನ್ 11 ರೊಳಗೆ ತಮ್ಮ ಅಭಿಪ್ರಾಯ ಮಂಡಿಸುವಂತೆ ಎಲ್ಲಾ ಸ್ಟೇಕ್ ಹೋಲ್ಡರ್ ಗಳಿಗೆ ಸೂಚಿಸಿದೆ. .


COMMERCIAL BREAK
SCROLL TO CONTINUE READING

ಗ್ರಾಹಕರಿಗೆ (Customer) ಉಪಯೋಗವಾಗುವಂಥಹ ಟಾರಿಫ್ ಅನ್ನು ಪರಿಚಯಿಸುವ  ಉದ್ದೇಶದಿಂದ ಈ ಕನ್ಸಲ್ ಟೇಶನ್ ಪೇಪರ್ ನೀಡಲಾಗಿದೆ ಎಂದು TRAI ಹೇಳಿದೆ.  ಮಾತ್ರವಲ್ಲ, ಸೇವಾ ಪೂರೈಕೆದಾರರು ನೀಡುವ ಟ್ಯಾರಿಫ್ ಆಫರ್ (Tariff offer) ಮತ್ತು ವ್ಯಾಲಿಡಿಟಿ ವಿಚಾರಗಳಿಗೆ ಸಂಬಂಧಿಸಿದಂತೆ, ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದೆ. ರೀಚಾರ್ಜ್ ಪ್ಲಾನ್ ನ (Recharge plan) ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಬೇಕೇ ಅಥವಾ ಪ್ರಸ್ತುತ ಪ್ಲಾನ್ ಅನ್ನೇ ಮುಂದುವರಿಸಬೇಕೇ ಎಂದು TRAI ಗ್ರಾಹಕರಲ್ಲಿ ಕೇಳಿದೆ. 


ಇದನ್ನೂ ಓದಿ Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್


ಟೆಲಿಕಾಂ ಕಂಪನಿಗಳಿಗೆ TRAI  ಪ್ರಶ್ನೆ : 
ಕಂಪನಿಗಳು ವಿಧಿಸುವ  ಶುಲ್ಕ, ವೋಚರ್ ಗಳಿಂದ ಗ್ರಾಹಕರು ಸಂತುಷ್ಟರಾಗಿಲ್ಲ ಎನ್ನುವುದು ಗ್ರಾಹಕರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗುತ್ತದೆ ಎಂದು TRAI ಹೇಳಿದೆ.  ಇದಕ್ಕೆ ಉತ್ತರಿಸಿರುವ ಟೆಲಿಕಾಂ ಸರ್ವಿಸ್ ಪ್ರೋವೈಡರ್ ಗಳು, ವ್ಯಾಲಿಡಿಟಿ ಅವಧೀಯನ್ನು 30 ದಿನಗಳಿಗೆ ವಿಸ್ತರಿಸಿದರೂ, 31 ದಿನಗಳಿರುವ ತಿಂಗಳಲ್ಲಿ ಗ್ರಾಹಕರು ಮಧ್ಯೆ, ರೀಚಾರ್ಜ್ (Recharge) ಮಾಡಲೇಬೇಕಾಗುತ್ತದೆ ಎಂದು ಹೇಳಿದೆ. 


ಪ್ರಸ್ತುತ ಟೆಲಿಕಾಂ ಕಂಪನಿಗಳು ನೀಡುವ ಪ್ಲಾನ್ : 
ಪ್ರಸ್ತುತ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಪ್ಲಾನ್ ಗಳನ್ನು ನೀಡಲಾಗುತ್ತಿದೆ. ಈ ಪ್ಲಾನ್ ಗಳನ್ನು ತಿಂಗಳುಗಳ ಬದಲಿಗೆ,  ವಾರಕ್ಕೆ ಅನುಗುಣವಾಗಿ ನೀಡಲಾಗಿದೆ.  ಪ್ರಸ್ತುತ, 28 ದಿನಗಳು, ಅಂದರೆ 4 ವಾರಗಳು, 56 ದಿನಗಳು ಅಥವಾ 8 ವಾರಗಳು. ಇದು 84 ದಿನಗಳು, ಅಂದರೆ 12 ವಾರಗಳ ಪ್ರಿಪೇಯ್ಡ್ (pre paid) ಯೋಜನೆಯನ್ನು ನೀಡುತ್ತಿದೆ. ಆದರೆ ಪೋಸ್ಟ್‌ಪೇಯ್ಡ್ (Post paid) ಬಿಲ್‌ಗಳು ಒಂದು ತಿಂಗಳ ಆಧಾರದಲ್ಲಿ  ಬರುತ್ತವೆ.


ಇದನ್ನೂ ಓದಿ : Recharge Plans That Offer Insurance: ಕೇವಲ ರೂ.279ಕ್ಕೆ 4 ಲಕ್ಷ ರೂ.ಗಳ ಇನ್ಸುರನ್ಸ್ ಜೊತೆಗೆ ಉಚಿತ ಕಾಲಿಂಗ್-ಡೇಟಾ ನೀಡುತ್ತದೆ ಈ ಕಂಪನಿ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.