TELECOM RULE : ಜ.15ರಿಂದ ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಡೈರೆಕ್ಟ್ ಕಾಲ್ ಹೋಗಲ್ಲ..! ಯಾಕೆ..?
ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕರೆ ಮಾಡುವಾಗ ಅನುಸರಿಸುವ ನಿಯಮಗಳು ಶುಕ್ರವಾರದಿಂದ ಬದಲಾಗಿದೆ. ಇದೀಗ ನೀವು ನೇರವಾಗಿ ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕಾಲ್ ಮಾಡಲು ಸಾಧ್ಯವಿಲ್ಲ
ನವದೆಹಲಿ : ಲ್ಯಾಂಡ್ ಲೈನ್ (Landline Phone) ನಿಂದ ಮೊಬೈಲ್ ಗೆ ಕರೆ ಮಾಡುವಾಗ ಅನುಸರಿಸುವ ನಿಯಮಗಳು ಶುಕ್ರವಾರದಿಂದ ಬದಲಾಗಿದೆ. ಇದೀಗ ನೀವು ನೇರವಾಗಿ ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ (Mobile) ಕಾಲ್ ಮಾಡಲು ಸಾಧ್ಯವಿಲ್ಲ. ಹೊಸ ನಿಯಮವೊಂದನ್ನು ಪಾಲಿಸಲೇ ಬೇಕು.
ಏನದು ಹೊಸ ನಿಯಮ..?
ಜನವರಿ 15 ರಿಂದ ನೀವು ಯಾವುದೇ ಲ್ಯಾಂಡ್ ಲೈನ್ ನಿಂದ ಮೊಬೈಲ್ (Mobile) ಗೆ ಕರೆ ಮಾಡಬೇಕಾದರೆ, ಮೊದಲು ಸೊನ್ನೆಯನ್ನು (Zero) ಡಯಲ್ ಮಾಡಬೇಕು. ಬಳಿಕ ಇನ್ನುಳಿದ ನಂಬರ್ ಡಯಲ್ ಮಾಡಬೇಕು. ಈ ಸಂಬಂಧ ನವೆಂಬರ್ 20 ರಂದು ಟೆಲಿಕಾಂ ಕಂಪನಿಗಳು ಸರ್ಕುಲರ್ ಒಂದನ್ನು ಜಾರಿಗೆ ತಂದಿವೆ. ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕರೆಮಾಡುವ ಕುರಿತಂತೆ ಟ್ರಾಯ್ (TRAI) ತಂದಿರುವ ಶಿಫಾರಸುಗಳನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ.ನಿಮ್ಮ ಕ್ಷೇತ್ರದಿಂದ ಹೊರಗೆ ಕಾಲ್ ಮಾಡುವಾಗ ನೀವು ಈ ನಿಯಮ ಪಾಲಿಸಬೇಕು ಎಂದು ಸರ್ಕುಲರ್ ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಮೊಬೈಲ್ ಬಳಕೆದಾರರಿಗೆ Reliance Jio ಶಾಕ್..! ಇನ್ನು ಚಾಲ್ತಿಯಲ್ಲಿರುವುದಿಲ್ಲ 4 ಅಗ್ಗದ ರಿಚಾರ್ಜ್ ಪ್ಲಾನ್..!
ಸಿಗಲಿದೆ 254.4 ಕೋಟಿ ಹೊಸ ನಂಬರ್..!
ಮುಂದಿನ ದಿನಗಳಲ್ಲಿ ಟೆಲಿಕಾಂ ಕಂಪನಿಗಳು (Tlecom companies)11 ಸಂಖ್ಯೆಯ ನಂಬರ್ ಗಳನ್ನು ಜಾರಿ ಮಾಡಲಿವೆ. ದೇಶದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಹಾಗಾಗಿ 10 ಸಂಖ್ಯೆಯ ನಂಬರ್ ಗಳು ಇನ್ನು ಮುಗಿದು ಹೋಗುವ ಸಾಧ್ಯತೆಗಳಿವೆ. ಸೊನ್ನೆ ಡಯಲ್ ಮಾಡುವುದರಿಂದ ಭವಿಷ್ಯದ ಸಮಸ್ಯೆಯೊಂದು ಸ್ವಲ್ಪ ಮಟ್ಟಿಗೆ ಪರಿಹಾರವಾಗಲಿದೆ. ಡಯಲ್ ಮಾಡುವ ವಿಧಾನದಲ್ಲಿ ಬದಲಾವಣೆ ಮಾಡುವುದರಿಂದ 254.4 ಕೋಟಿ ಹೊಸ ನಂಬರ್ ಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಹನ್ನೊಂದು ಅಂಕಿಯ ನಂಬರ್ ಬರುವ ಸಾಧ್ಯತೆಗಳು ಕೂಡಾ ಇವೆ.
ನೆನಪಿಸುತ್ತಿವೆ ಟೆಲಿಕಾಂ ಕಂಪನಿಗಳು:
ಡಯಲ್ ಮಾಡುವ ವಿಧಾನದಲ್ಲಾಗಿರುವ ಬದಲಾವಣೆಗಳನ್ನು ಟೆಲಿಕಾಂ ಕಂಪನಿಗಳು ನೆನಪಿಸುತ್ತಿವೆ. ಏರ್ ಟೆಲ್ (airtel), ಬಿಎಸ್ ಎನ್ ಎಲ್ (BSNL), ಜಿಯೋ (Jio) ಮೊದಲಾದ ಕಂಪನಿಗಳು ತಮ್ಮ ಫಿಕ್ಸೆಡ್ ಲೈನ್ ಗ್ರಾಹಕರಿಗೆ ಆದ ಬದಲಾವಣೆಯ ಮಾಹಿತಿ ನೀಡುತ್ತಿವೆ.
ಇದನ್ನೂ ಓದಿ : ಬಳಕೆದಾರರ ಗೌಪ್ಯತೆ ಮೇಲೆ ಕಣ್ಣಿಟ್ಟಿದ್ದ WhatsApp ಗೆ ಮತ್ತೊಂದು ಕಂಟಕ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.