ಭಾರತದಲ್ಲಿ ಮತ್ತೆ ಬರಲಿದೆ PUBG ಮೊಬೈಲ್?
ದೇಶದಲ್ಲಿ ಆಂತರಿಕ ಭದ್ರತೆ ಮತ್ತು ಬಳಕೆದಾರರ ರಕ್ಷಣೆಯ ಸಲುವಾಗಿ ಚೀನಾ ಮೂಲದ ಅಪ್ಲಿಕೇಶನ್ ಮತ್ತು ಮೊಬೈಲ್ ಗೇಮ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.
ನವದೆಹಲಿ: ಚೀನಾ ಮೂಲದ ಅಪ್ಲಿಕೇಶನ್ ಮತ್ತು ವಿವಿಧ ಮೊಬೈಲ್ ಗೇಮ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಈ ಪೈಕಿ ಚೀನಾ ಮೂಲದ ಕಂಪನಿ ನಿರ್ವಹಿಸುತ್ತಿದ್ದ PUBG ಮೊಬೈಲ್ ಅನ್ನು ಬ್ಯಾನ್ ಮಾಡಲಾಗಿದೆ. ಇದರಿಂದ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದ PUBG ಸಂಸ್ಥೆ, ಬಹಳಷ್ಟು ನಷ್ಟ ಅನುಭವಿಸಿದೆ. ಹೀಗಾಗಿ ಮೈಕ್ರೋಸಾಫ್ಟ್ (Microsoft) ನೆರವಿನಿಂದ ಮತ್ತೆ ದೇಶದಲ್ಲಿ PUBG ಮೊಬೈಲ್ ಲಭ್ಯವಾಗುವಂತೆ ಮಾಡಲು ಯೋಜನೆ ಹಾಕಿಕೊಂಡಿದೆ.
PUBG ಮೊಬೈಲ್: PUBG ಕಾರ್ಪೋರೇಶನ್‌ನ ಒಡೆತನ ಹೊಂದಿರುವ ಕ್ರಾಫ್ಟನ್ Inc. ಈಗಾಗಲೇ ಮೈಕ್ರೋಸಾಫ್ಟ್ ಕ್ಲೌಡ್ ಕಂಪ್ಯೂಟರ್ ಸೇವೆ ಒದಗಿಸುವ ಅಝ್ಯುರ್ ಮೂಲಕ ಪಬ್‌ಜಿ ಮೊಬೈಲ್ ಮತ್ತು ಪಬ್‌ಜಿ ಪಿಸಿ ಅನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
PUBG ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಕಂಪನಿ ಕೈಗೊಂಡಿದೆ ಈ ನಿರ್ಧಾರ
ಟೆನ್ಸೆಂಟ್ ಸಹಯೋಗ ಇಲ್ಲ..:
ದೇಶದಲ್ಲಿ ಆಂತರಿಕ ಭದ್ರತೆ ಮತ್ತು ಬಳಕೆದಾರರ ರಕ್ಷಣೆಯ ಸಲುವಾಗಿ ಚೀನಾ ಮೂಲದ ಅಪ್ಲಿಕೇಶನ್ ಮತ್ತು ಮೊಬೈಲ್ ಗೇಮ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಹೀಗಾಗಿ PUBG ಗೇಮ್ ನಿರ್ವಹಣೆ ಹೊಂದಿದ್ದ ಚೀನಾ ಮೂಲದ ಟೆನ್ಸೆಂಟ್ ಸಹಯೋಗದಿಂದಾಗಿ ದೇಶದಲ್ಲಿ PUBG ಗೇಮ್ ಅನ್ನು ಕೂಡ ನಿಷೇಧಿಸಲಾಗಿದೆ.
ಭಾರತದಲ್ಲಿನ PUBG ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್..! ಇಂದಿನಿಂದಲೇ ಈ ನಿಯಮ ಜಾರಿ..!
PUBG ಗೇಮ್‌ಗೆ ಬೇಡಿಕೆ!
ಪಬ್‌ಜಿ ಮೊಬೈಲ್ (Game), ಪಬ್‌ಜಿ ಪಿಸಿ ಮತ್ತು ಪಬ್‌ಜಿ ಮೊಬೈಲ್ ಲೈಟ್ ಆವೃತ್ತಿಯನ್ನು ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಸುತ್ತಿದ್ದರು. ಆದರೆ ಗೇಮ್ ನಿಷೇಧದ ಬಳಿಕ ದೇಸಿ ಆವೃತ್ತಿ ಮತ್ತು ಪಬ್‌ಜಿ ಪ್ರತಿಸ್ಪರ್ಧಿ ಎಂದೇ ಬಿಂಬಿಸಲಾಗಿರುವ ಫಾಜಿ, ಫಿಯರ್‌ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ ಎಂಬ ಹೊಸ ಆಕ್ಷನ್ ಮೊಬೈಲ್ ಗೇಮ್ ಕೂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.