ನವದೆಹಲಿ :  Realme GT Neo2 Launched In India:  Realme ಕಳೆದ ತಿಂಗಳು Realme GT Neo 2 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ.  ಇಂದು ಕಂಪನಿಯು ಭಾರತದಲ್ಲಿ ಹ್ಯಾಂಡ್‌ಸೆಟ್ ಅನ್ನು ಅನಾವರಣಗೊಳಿಸುವ ಕಾರ್ಯಕ್ರಮ ನಡೆಸಿತು. ಇದರಲ್ಲಿ ರಿಯಲ್‌ಮಿ ಬಡ್ಸ್ ಏರ್ 2 ಗಾಗಿ ಕ್ಲೋಸರ್ ಗ್ರೀನ್ ಕಲರ್ ವೆರಿಯೇಂಟ್, ಬ್ರಿಕ್ಡ್ ಬ್ಲೂಟೂತ್ ಸ್ಪೀಕರ್, 4K ಸ್ಮಾರ್ಟ್ ಟಿವಿ ಗೂಗಲ್ ಸ್ಟಿಕ್ ಮತ್ತು ಹೊಸ ಗೇಮಿಂಗ್ ಪರಿಕರಗಳು ಕೂಡಾ ಸೇರಿತ್ತು.  ರಿಯಲ್‌ಮೆ ಜಿಟಿ 5 ಜಿ ಮತ್ತು ರಿಯಲ್‌ಮೆ ಜಿಟಿ 5 ಜಿ ಮಾಸ್ಟರ್ ಎಡಿಶನ್ ನಂತರ Realme GT Neo 2 ಭಾರತದ ಮೂರನೇ ಜಿಟಿ ಸರಣಿ ಫೋನ್ ಆಗಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ Realme GT Neo2 ಬೆಲೆ :
8 GB RAM + 128 GB ಸ್ಟೋರೇಜ್ ಬೆಲೆ  31,999 ರೂ. 
12 GB RAM + 256 GB ಸ್ಟೋರೇಜ್ ಬೆಲೆ  35,999 ರೂ.


ರಿಯಲ್ಮೆ ಜಿಟಿ ನಿಯೋ 2 (Realme GT Neo2) ನಿಯೋ ಗ್ರೀನ್, ನಿಯೋ ಬ್ಲೂ ಮತ್ತು ನಿಯೋ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಎರಡೂ ಮಾದರಿಗಳನ್ನು ವಿಶೇಷ ಹಬ್ಬದ ಕೊಡುಗೆಗಳ (Festive offer) ಅಡಿಯಲ್ಲಿ 24,999 ರೂ.  ಮತ್ತು 28,999 ರೂ . ಬೆಲೆಗೆ ಖರೀದಿಸಬಹುದು. ರಿಯಲ್ಮೆ ಇಂಡಿಯಾ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಜಿಟಿ ನಿಯೋ 2 ನ ಮೊದಲ ಸೇಲ್ ಅಕ್ಟೋಬರ್ 17 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. 


ಇದನ್ನೂ ಓದಿ : Life Beyond Earth: ಭೂಮಿಯ ಹೊರತಾಗಿಯೂ ಕೂಡ ಜೀವನದ ಸಾಧ್ಯತೆಯ ಕುರಿತು ವಿಜ್ಞಾನಿಗಳಿಗೆ ದೊರೆತ ಖಚಿತ ಸಾಕ್ಷಾಧಾರ


ರಿಯಲ್ಮೆ ಜಿಟಿ ನಿಯೋ 2 ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು :
ರಿಯಲ್‌ಮೆ ಜಿಟಿ ನಿಯೋ 2 6.62-ಇಂಚಿನ ಸ್ಯಾಮ್‌ಸಂಗ್ ಇ 4 ಅಮೊಲೆಡ್ ಸ್ಕ್ರೀನ್ ಅನ್ನು ಹೊಂದಿದ್ದು ಅದು 1080 x 2400 ಪಿಕ್ಸೆಲ್‌ಗಳ ಪೂರ್ಣ ಎಚ್‌ಡಿ+ ರೆಸಲ್ಯೂಶನ್, 1300 ನಿಟ್ಸ್ ಬ್ರೈಟ್‌ನೆಸ್, 5000000: 1 ಕಾಂಟ್ರಾಸ್ಟ್ ರೇಶಿಯೋ , 100 ಪ್ರತಿಶತ ಡಿಸಿಐ-ಪಿ 3 ಕಲರ್ ಸರ್ ಗಮ್  ಮತ್ತು 120 ಹರ್ಟ್ಸ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಹ್ಯಾಂಡ್ಸೆಟ್ ಆಂಡ್ರಾಯ್ಡ್ 11 ಓಎಸ್ ಮತ್ತು ಎಲ್ಲಾ ಹೊಸ ರಿಯಲ್ಮೆ ಯುಐ 3.0 ನಲ್ಲಿ ಬೂಟ್ ಆಗುತ್ತದೆ. ಜಿಟಿ ನಿಯೋ 2 ಸ್ನಾಪ್‌ಡ್ರಾಗನ್ 870 ಮೊಬೈಲ್ ಪ್ಲಾಟ್‌ಫಾರ್ಮ್, 12 ಜಿಬಿ ಎಲ್‌ಪಿಡಿಡಿಆರ್ 5 RAM, 256 ಜಿಬಿ ಯುಎಫ್‌ಎಸ್ 3.1 ಸ್ಟೋರೇಜ್ ಮತ್ತು 5,000 ಎಂಎಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ.


ರಿಯಲ್ಮೆ ಜಿಟಿ ನಿಯೋ 2 ಕ್ಯಾಮೆರಾ :
ಜಿಟಿ ನಿಯೋ 2 ಇನ್-ಬಾಕ್ಸ್ 65W ಫಾಸ್ಟ್ ಚಾರ್ಜರ್‌ನೊಂದಿಗೆ (fast charger) ಸಂಪೂರ್ಣವಾಗಿ ಚಾರ್ಜ್ ಆಗಲು 36 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 16 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ, ಮತ್ತು ಇದರ ಹಿಂಬದಿಯ ಕ್ಯಾಮರಾ ಸೆಟಪ್ ಜೊತೆಗೆ 64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/1.8 ಅಪರ್ಚರ್ ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್‌ನಿಂದ ನೆರವಾಗುತ್ತದೆ. ಇದು 119 ಡಿಗ್ರಿ ಎಫ್‌ಒವಿ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು 4 ಸೆಂಮೀ ಫೋಕಲ್ ಲೆಂತ್‌ನೊಂದಿಗೆ ನೀಡುತ್ತದೆ. 


ಇದನ್ನೂ ಓದಿ : Amazon Great Indian Festival: ಕೇವಲ ರೂ. 649 ರೂ.ಗಳಲ್ಲಿ ಈ ರೀತಿ ಖರೀದಿಸಿ Realme ಕಂಪನಿಯ ಜಬರ್ದಸ್ತ್ ಫೋನ್


ರಿಯಲ್‌ಮೆ ಜಿಟಿ ನಿಯೋ 2 ನ ಇತರ ವೈಶಿಷ್ಟ್ಯಗಳು:
ರಿಯಲ್‌ಮೆ ಜಿಟಿ ನಿಯೋ 2 ಸ್ಕ್ರೀನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಭದ್ರತೆಗಾಗಿ ಫೇಸ್ ಅನ್‌ಲಾಕ್ (face unlock) ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಸಿಮ್, 5 ಜಿ, ವೈ-ಫೈ 802.11ax, ಬ್ಲೂಟೂತ್ 5.2, ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್, ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್, ಡಾಲ್ಬಿ ಅಟ್ಮಾಸ್ ಗೇಮ್ಸ್ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ಬೆಂಬಲ ಮತ್ತು ಯುಎಸ್‌ಬಿ-ಸಿ ಅನ್ನು ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.