ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷ ನಿರಾಳವಾಗಿರಬಹುದು.! ವೊಡಾಫೋನ್ ತಂದಿದೆ ಬೆಸ್ಟ್ ರಿಚಾರ್ಜ್ ಪ್ಲಾನ್
ಪ್ರತಿ ತಿಂಗಳು ರೀಚಾರ್ಜ್ ಪ್ಲಾನ್ ಗಳಲ್ಲಿ ಕೂಡಾ ಬದಲಾವಣೆಯಾಗುತ್ತಲೇ ಇರುತ್ತದೆ. ಹೀಗಾದಾಗ ಕೆಲವೊಮ್ಮೆ ರೀಚಾರ್ಜ್ ಮಾಡುವುದು ಕೂಡಾ ದುಬಾರಿ ಎಂದೆನಿಸುತ್ತದೆ. ಈ ಕಾರಣದಿಂದಾಗಿಯೇ ವೊಡಾ ಐಡಿಯಾ ಒಂದು ಪ್ಲಾನ್ ಅನ್ನು ಪರಿಚಯಿಸಿದೆ.
Vi Recharge Plan : ವೊಡಾಫೋನ್ ಐಡಿಯಾ ತನ್ನ ರೀಚಾರ್ಜ್ ಪ್ಲಾನ್ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಕೈಗೆಟುಕುವ ದರದಲ್ಲಿನ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ. ಪ್ರೀಪೇಯ್ಡ್ ಸಿಮ್ ಇದ್ದರೆ ಪ್ರತಿ ತಿಂಗಳು ರೀಚಾರ್ಜ್ ಮಾಡುವುದೇ ಒಂದು ದೊಡ್ಡ ಟಾಸ್ಕ್. ಅಲ್ಲದೆ ಪ್ರತಿ ತಿಂಗಳು ರೀಚಾರ್ಜ್ ಪ್ಲಾನ್ ಗಳಲ್ಲಿ ಕೂಡಾ ಬದಲಾವಣೆಯಾಗುತ್ತಲೇ ಇರುತ್ತದೆ. ಹೀಗಾದಾಗ ಕೆಲವೊಮ್ಮೆ ರೀಚಾರ್ಜ್ ಮಾಡುವುದು ಕೂಡಾ ದುಬಾರಿ ಎಂದೆನಿಸುತ್ತದೆ. ಈ ಕಾರಣದಿಂದಾಗಿಯೇ ವೊಡಾ ಐಡಿಯಾ ಒಂದು ಪ್ಲಾನ್ ಅನ್ನು ಪರಿಚಯಿಸಿದೆ. ಇದರಲ್ಲಿ ಒಮ್ಮೆ ರೀಚಾರ್ಜ್ ಮಾಡಿದರೆ ನಂತರ ವರ್ಷಪೂರ್ತಿ ಈ ಬಗ್ಗೆ ಯೋಚನೆ ಮಾಡಬೇಕೆಂದಿಲ್ಲ. ಪ್ರತಿ ತಿಂಗಳು ರೀಚಾರ್ಜ್ ಮಾಡಿಸಬೇಕೆನ್ನುವ ಜಂಜಾಟದಿಂದ ಮುಕ್ತಿ ಸಿಗುತ್ತದೆ.
Vi ನ ಹೊಸ ರೀಚಾರ್ಜ್ ಪ್ಲಾನ್ :
ವೊಡಾ ಫೋನ್ ಐಡಿಯಾದ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬೆಲೆ 3099 ರೂಪಾಯಿ. ಒಮ್ಮೆಲೇ ಈ ಮೊತ್ತವನ್ನು ನೋಡುವಾಗ ಜಾಸ್ತಿ ಎಂದೆನಿಸಬಹುದು. ಆದರೆ, ಈ ಮೊತ್ತವನ್ನು ಇಡೀ ವರ್ಷಕ್ಕೆ ಪಾವತಿಸಲಾಗುತ್ತದೆ. ಒಮ್ಮೆ ಈ ಮೊತ್ತವನ್ನು ಪಾವತಿಸಿದರೆ, ನಂತರ ಒಂದು ವರ್ಷಗಳವರೆಗೆ ಯಾವುದೇ ರೀತಿಯ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಅಲ್ಲದೆ, ಈ ಪ್ಲಾನ್ ನಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಕೂಡಾ ನೀಡಲಾಗುತ್ತದೆ.
ಇದನ್ನೂ ಓದಿ : ಮನೆಯಲ್ಲಿ ಈ ಡಿವೈಸ್ ಅಳವಡಿಸಿದರೆ ವರ್ಷವಿಡೀ ಕರೆಂಟ್ ಬಿಲ್ ಬರೋದೇ ಇಲ್ಲ!
ಈ ಯೋಜನೆಯಲ್ಲಿ, ಇಡೀ ವರ್ಷದ ವ್ಯಾಲಿಡಿಟಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿದ ನಂತರ ಗ್ರಾಹಕರು 12 ತಿಂಗಳವರೆಗೆ ಮತ್ತೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಬಳಕೆದಾರರು ರಾತ್ರಿ 12 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಅನಿ ಯಮಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ದತಾವನ್ನು ದೈನಂದಿನ 2GB ಡೇಟಾದಿಂದ ಕಡಿತಗೊಳಿಸಲಾಗುವುದಿಒಲ್ಲ. ಈ ಯೋಜನೆಯಲ್ಲಿ, ಗ್ರಾಹಕರು ಸಂಪೂರ್ಣ 365 ದಿನಗಳವರೆಗೆ ಅನಿಯಮಿತ ಇಂಟರ್ನೆಟ್ ಜೊತೆಗೆ ಅನಿಯಮಿತ ವಾಯ್ಸ್ ಕಾಲ್ ಮಾಡುವುದು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಪ್ರತಿದಿನವೂ 100 SMS ಮಾಡುವ ಅವಕಾಶವಿರುತ್ತದೆ. ಈ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ವೀಕೆಂಡ್ ಡಾಟಾ ರೋಲ್‌ಓವರ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ವಿಶೇಷ ಪ್ರಯೋಜನಗಳನ್ನು ಒಂದು ವರ್ಷದವರೆಗೆ ನೀಡಲಾಗುತ್ತದೆ.
ಇದನ್ನೂ ಓದಿ : Smartphone Tips: ನಿಮ್ಮ ಸ್ಮಾರ್ಟ್ ಫೋನ್ ನ ಈ ಭಾಗವನ್ನು ಮರೆತೂ ಕೂಡ ಟಚ್ ಮಾಡಬೇಡಿ... ಇಲ್ದಿದ್ರೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.