ಹೊಸ ಸ್ಕ್ಯಾಮ್ ನಲ್ಲಿ ವಂಚಕರಿಗೆ 5Gಯೇ ಬಂಡವಾಳ .! ಎಚ್ಚರ ತಪ್ಪಿದರೆ ಖಾತೆಯಾಗುವುದು ಖಾಲಿ

New Scam In India: 3G ಯಿಂದ 4G ಗೆ  ಬದಲಾದಾಗ ಹೊಸ ಸಿಮ್‌ಗೆ ಅಪ್‌ಗ್ರೇಡ್ ಮಾಡುವಂತೆ ಗ್ರಾಹಕರನ್ನು ಕೇಳಲಾಗಿತ್ತು. ಆದರೆ ಈಗ 5G ಸೇವೆ ಬಳಸಲು, ಹೊಸ ಸಿಮ್‌ನ ಅಗತ್ಯವಿಲ್ಲ  ಎನ್ನುವುದನ್ನು 5G ಸೇವೆ ಒದಗಿಸುತ್ತಿರುವ Jio ಮತ್ತು Airtel ಈಗಾಗಲೇ ಸ್ಪಷ್ಟಪಡಿಸಿದೆ.

Written by - Ranjitha R K | Last Updated : Dec 1, 2022, 08:47 AM IST
  • 5G ಸೇವೆ ಈಗಾಗಲೇ ಭಾರತದ ಕೆಲವು ನಗರಗಳಲ್ಲಿ ಆರಂಭವಾಗಿದೆ
  • 5G ಸೇವೆ ಬಳಸಲು, ಹೊಸ ಸಿಮ್‌ನ ಅಗತ್ಯವಿಲ್ಲ
  • ಆದರೆ ಈ ವಿಚಾರ ಅದೆಷ್ಟೋ ಮಂದಿಗೆ ಇನ್ನು ಕೂಡಾ ತಿಳಿದಿಲ್ಲ.
ಹೊಸ ಸ್ಕ್ಯಾಮ್ ನಲ್ಲಿ ವಂಚಕರಿಗೆ 5Gಯೇ ಬಂಡವಾಳ .! ಎಚ್ಚರ ತಪ್ಪಿದರೆ ಖಾತೆಯಾಗುವುದು ಖಾಲಿ  title=
New Scam In India

New Scam In India : 5G ಸೇವೆ ಈಗಾಗಲೇ ಭಾರತದ ಕೆಲವು ನಗರಗಳಲ್ಲಿ ಆರಂಭವಾಗಿದೆ. ದೇಶದ ಪ್ರತಿಯೊಬ್ಬರೂ ಕೂಡಾ 5G ಸೇವೆ  ಬಳಸಲು ಉತ್ಸುಕರಾಗಿರುವುದಂತೂ ಸುಳ್ಳಲ್ಲ. ಈ ಮಧ್ಯೆ, ಗ್ರಾಹಕರು ಇನ್ನು ಕೂಡಾ  4Gಯನ್ನೇ ಬಳಸುತ್ತಿದ್ದರೆ,  5G ಸೇವೆಗೆ ಶಿಫ್ಟ್ ಆಗುವಂತೆ  ಆಪರೇಟರ್ ಖಂಡಿತವಾಗಿಯೂ ಗ್ರಾಹಕರನ್ನು ಕೇಳುತ್ತಾರೆ.  3G ಯಿಂದ 4G ಗೆ  ಬದಲಾದಾಗ ಹೊಸ ಸಿಮ್‌ಗೆ ಅಪ್‌ಗ್ರೇಡ್ ಮಾಡುವಂತೆ ಗ್ರಾಹಕರನ್ನು ಕೇಳಲಾಗಿತ್ತು. ಆದರೆ ಈಗ 5G ಸೇವೆ ಬಳಸಲು, ಹೊಸ ಸಿಮ್‌ನ ಅಗತ್ಯವಿಲ್ಲ  ಎನ್ನುವುದನ್ನು 5G ಸೇವೆ ಒದಗಿಸುತ್ತಿರುವ Jio ಮತ್ತು Airtel ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ  ಈ ವಿಚಾರ ಅದೆಷ್ಟೋ ಮಂದಿಗೆ ಇನ್ನು ಕೂಡಾ ತಿಳಿದಿಲ್ಲ. ಇದೀಗ ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡು ತನ್ನ ಕಾರ್ಯ ಸಾಧನೆಗೆ ಇಳಿದಿದ್ದಾರೆ. 

ಹಗರಣ ಹೇಗೆ ನಡೆಯುತ್ತಿದೆ?
ಸ್ಕ್ಯಾಮರ್‌ಗಳು ಇಲ್ಲಿ SMS ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಬಳಕೆದಾರರಿಗೆ ಲಿಂಕ್‌ನೊಂದಿಗೆ SMS ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಬಳಕೆದಾರರು ಸಿಮ್ ಅನ್ನು ಅಪ್‌ಗ್ರೇಡ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಕೇಳಲಾಗುತ್ತದೆ. ಹೀಗೆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಎಲ್ಲಾ ಮಾಹಿತಿ ಸ್ಕ್ಯಾಮರ್‌ಗೆ ಲಭ್ಯವಾಗುತ್ತದೆ. ನಮ್ಮ ಖಾತೆ ಕೂಡಾ ಖಾಲಿಯಾಗಿ ಬಿಡುತ್ತದೆ. 

ಇದನ್ನೂ ಓದಿ : Electric Bill Reduce : ಮನೆಯ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು, ಇಂದೇ ಈ ಕೆಲಸ ಮಾಡಿ!

ಸಂಚಲನ ಮೂಡಿಸಿದೆ ಹೊಸ ಹಗರಣ  :
ಇಷ್ಟು ಮಾತ್ರವಲ್ಲದೆ, ವಂಚಕರು ಮಾಹಿತಿ ಕೇಳುವ ನೆಪದಲ್ಲಿ ಗ್ರಾಹಕರಿಗೆ ಫೋನ್ ಮಾಡುತ್ತಾರೆ.  5ಜಿ ಸೇವೆ ಪಡೆಯಬೇಕಾದರೆ  4ಜಿ ಸಿಮ್ ಅನ್ನು 5ಜಿಗೆ ಅಪ್‌ಗ್ರೇಡ್ ಮಾಡುೇಕಾಗುತ್ತದೆ ಎಂದು ಇವರ ಮಾತು ಆರಂಭವಾಗುತ್ತದೆ. ಹೀಗೆ ಮುಂದುವರೆದು 5 ಜಿಗೆ ಅಪ್‌ಗ್ರೇಡ್ ಮಾಡಬೇಕಾದರೆ ಹಣ ನೀಡಬೇಕಾಗುತ್ತದೆ ಎಂದು ಹಣ ಕೇಳಲು ಆರಂಭಿಸುತ್ತಾರೆ ಎನ್ನುವ ಬಗ್ಗೆ ವರದಿಯಾಗಿದೆ. ಭಾರತದಾದ್ಯಂತ ಈ ಹಗರಣ  ನಡೆಯುತ್ತಿದ್ದು, ಹಲವು ರಾಜ್ಯಗಳ ಪೊಲೀಸ್ ಇಲಾಖೆಗಳು ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿವೆ. ಮುಂಬೈ ಪೊಲೀಸರು ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಪುಣೆ, ಗುರುಗ್ರಾಮ್ ಮತ್ತು ಹೈದರಾಬಾದ್ ಪೊಲೀಸರು ಕೂಡ ಟ್ವೀಟ್ ಮಾಡಿ ಎಚ್ಚರದಿಂದ ಇರುವಂತೆ ಸಾರ್ವಜನಿಕರನ್ನು ಕೋರಿದ್ದಾರೆ. ಒಟ್ಟಿನಲ್ಲಿ ಈ ಹೊಸ ಹಗರಣ  ದೇಶದಲ್ಲಿ ಸಂಚಲನ ಮೂಡಿಸಿದೆ. 

ಇದನ್ನೂ ಓದಿ : YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ

ಈ ಸ್ಕ್ಯಾಮ್ ನಿಂದ ಸುರಕ್ಷಿತವಾಗಿರುವುದು ಹೇಗೆ ? :
- ಬಹು ಮುಖ್ಯವಾಗಿ, ಯಾವುದೇ ರೀತಿಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು,. ಅದರಲ್ಲೂ  ವಿಶೇಷವಾಗಿ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳು.
- ಯಾವುದೇ ರೀತಿಯ ಲಾಗಿನ್ OTP ಅನ್ನು ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು.
-SIM ಕಾರ್ಡ್ ಅನ್ನು 5G ಗೆ  ಶಿಫ್ಟ್ ಮಾಡಲು ಯಾವುದೇ ಅಪ್‌ಗ್ರೇಡ್  ಅಗತ್ಯ ಇರುವುದಿಲ್ಲ. ಹಾಗಾಗಿ 4G ಸಿಮ್‌ನಿಂದ 5G ಸಿಮ್‌ಗೆ ಅಪ್‌ಗ್ರೇಡ್ ಮಾಡುವ ಸ್ಕೀಮ್‌ನ ಬಲೆಗೆ ಬೀಳಬೇಡಿ. ನೀವಿರುವ ಪ್ರದೇಶದಲ್ಲಿ  5 ಜೀ ಸೇವೆ ಆರಂಭವಾಗಿದ್ದರೆ 4G ಸಿಮ್ ಕಾರ್ಡ್ ಅದಾಗಿಯೇ  5G ಸೇವೆಗಳನ್ನು ಒದಗಿಸುತ್ತದೆ ಎನ್ನುವುದು ನೆನಪಿರಲಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News