Smartphone Tips: ನಿಮ್ಮ ಸ್ಮಾರ್ಟ್ ಫೋನ್ ನ ಈ ಭಾಗವನ್ನು ಮರೆತೂ ಕೂಡ ಟಚ್ ಮಾಡಬೇಡಿ... ಇಲ್ದಿದ್ರೆ!

Smartphone Hacks: ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಬಳಸುವಾಗ ನೆಟ್ವರ್ಕ್ ಇದ್ದಕ್ಕಿದ್ದಂತೆ ಕಣ್ಮರೆಯಗುವುದನ್ನು ನೀವು ನೋಡಿರಬಹುದು ಮತ್ತು ಹೀಗೇಕಾಯಿತು ಎಂಬುದು ಅರ್ಥವಾಗುವುದಿಲ್ಲ. ಹಲವು ಬಾರಿ ಇದು ನಾವು ಮಾಡುವ ಒಂದು ಸಣ್ಣ ತಪ್ಪಿನ ಕಾರಣ ನಡೆದು ಹೋಗಿರುತ್ತದೆ. ಆ ಸಣ್ಣ ತಪ್ಪು ಯಾವುದು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 1, 2022, 10:49 PM IST
  • ಸ್ಮಾರ್ಟ್ ಫೋನ್ ನಲ್ಲಿ ನೆಟ್ವರ್ಕ್ ಪದೇ ಪದೇ ಡೌನ್ ಆಗುತ್ತಿದೆಯೇ
  • ಈ ತಪ್ಪು ನೀವೂ ಕೂಡ ಮಾಡುತ್ತಿಲ್ಲವಲ್ಲ ?
  • ಯಾವ ತಪ್ಪು ಅಂತೀರಾ ...? ಈ ವರದಿ ಓದಿ
Smartphone Tips: ನಿಮ್ಮ ಸ್ಮಾರ್ಟ್ ಫೋನ್ ನ ಈ ಭಾಗವನ್ನು ಮರೆತೂ ಕೂಡ ಟಚ್ ಮಾಡಬೇಡಿ... ಇಲ್ದಿದ್ರೆ! title=
Smartphone Mistakes

Sensitive Area Of Smartphone: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಕೂಡ ಪದೇ ಪದೇ ನೆಟ್ವರ್ಕ್ ಡೌನ್ ಆಗುತ್ತಿದ್ದರೆ, ಅದರಲ್ಲಿಯೂ ವಿಶೇಷವಾಗಿ ನೀವು ಕರೆಯಲ್ಲಿ ನಿರತರಾಗಿರುವಾಗ, ಈ ಸಮಸ್ಯೆ ನಿಮ್ಮಿಂದಲೂ ಉಂಟಾಗಬಹುದು. ನೀವು ಇದನ್ನು ತಮಾಷೆ ಎಂದು ಭಾವಿಸಿದರೆ, ಅದು ಖಂಡಿತ ತಪ್ಪು. ಏಕೆಂದರೆ ಅನೇಕ ಬಾರಿ ನಾವು ಸ್ಮಾರ್ ಫೋನ್ ಬಳಸುವಾಗ ಮಾಡುವ ತಪ್ಪಿನಿಂದ ಇದು ನಡೆದುಹೋಗುತ್ತದೆ ಮತ್ತು ಇದರಿಂದಾಗಿ ನೆಟ್‌ವರ್ಕ್ ಡೌನ್ ಆಗುತ್ತದೆ. ಇಂದು ನಾವು ನಿಮಗೆ ಸ್ಮಾರ್ಟ್‌ಫೋನ್‌ನಲ್ಲಿ ಬಹಳ ಸೂಕ್ಷವಾದ ಒಂದು ಭಾಗಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ನೀವು ಅವುಗಳನ್ನು ಪದೇ ಪದೇ ಸ್ಪರ್ಶಿಸುವುದರಿಂದ ನೆಟ್‌ವರ್ಕ್ ಡೌನ್ ಆಗುತ್ತದೆ. ನೀವು ಕರೆ ಮಾಡುವಾಗ ಸ್ಪರ್ಶಿಸುವುದನ್ನು ತಪ್ಪಿಸಬೇಕಾದ ಅಂತಹ ಅಂತಹ ಸೂಕ್ಷ್ಮ ಭಾಗಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. 

ಸ್ಮಾರ್ಟ್ಫೋನ್ ಹಿಂಭಾಗದ ಪ್ರದೇಶ
ನೀವು ನಿರಂತರವಾಗಿ ಕರೆಯಲ್ಲಿ ಮಾತನಾಡುತ್ತಿರುವಾಗ, ನಿಮ್ಮ ಸ್ಮಾರ್ಟ್ ಫೋನ್ ನ ಹಿಂಭಾಗವನ್ನು ನೀವು ಸಂಪೂರ್ಣವಾಗಿ ಕೈಯಿಂದ ಮುಚ್ಚುತ್ತಿದ್ದರೆ ಅದನ್ನು ತಪ್ಪಿಸಿ. ಹೀಗೆ  ಮಾಡುವುದರಿಂದ ನೆಟ್‌ವರ್ಕ್ ಸಮಸ್ಯೆಗಳು ಉಂಟಾಗಬಹುದು. ವಾಸ್ತವದಲ್ಲಿ ಸ್ಮಾರ್ಟ್‌ಫೋನ್‌ನ ಹಿಂಭಾಗದ ಪ್ರದೇಶವು ನೆಟ್‌ವರ್ಕ್ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ಮಾರ್ಟ್ ಫೋನ್ ಹಿಂಭಾಗವನ್ನು ಸಂಪೂರ್ಣವಾಗಿ ನಿಮ್ಮ ಕೈಯಿಂದ ಮುಚ್ಚಿ ಮಾತನಾಡುತ್ತಿದ್ದರೆ, ಅದನ್ನು ಮಾಡಬೇಡಿ.

ಇದನ್ನೂ ಓದಿ-Peahen Pregnancy: ಹೆಣ್ಣು ನವಿಲು ಗರ್ಭಧಾರಣೆಯ ಈ ಮಿಥ್ಯ ಕಥೆ ನೀವೂ ಕೇಳಿದ್ದೀರಾ?

ಡೌನ್ ಸೈಡ್
ಅನೇಕ ಸ್ಮಾರ್ಟ್ ಫೋನ್ ಗಳಲ್ಲಿ  ಆಂಟೆನಾ ಕೆಳಭಾಗದಲ್ಲಿ ಎರಡೂ ಬದಿಗಳಲ್ಲಿರುತ್ತದೆ ಮತ್ತು ನೀವು ಅವುಗಳನ್ನು ಹಿಡಿದುಕೊಂಡು ಸ್ಮಾರ್ಟ್‌ಫೋನ್‌ನಿಂದ ಕರೆ ಮಾಡುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸಿಗ್ನಲ್ ಆಫ್ ಆಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕೆಳಗಿನ ಭಾಗಕ್ಕಿಂತ ಸ್ವಲ್ಪ ಮೇಲಕ್ಕೆ ಹಿಡಿದುಕೊಂಡು ಅದನ್ನು ಬಳಸಬೇಕು.

ಇದನ್ನೂ ಓದಿ-YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ

ಮೇಲಿನ ಎಡಭಾಗದಲ್ಲಿ
ನೀವು ಮೇಲಿನ ಎಡಭಾಗದಿಂದ ಸ್ಮಾರ್ಟ್ಫೋನ್ ಅನ್ನು ಹಿಡಿದು ಮಾತನಾಡುತ್ತಿದ್ದರೆ, ಆದಷ್ಟು ಅದನ್ನು ತಪ್ಪಿಸಿ.  ಏಕೆಂದರೆ ಕೆಲ ಸ್ಮಾರ್ಟ್ಫೋನ್ಗಳ ಆಂಟೆನಾ ಈ ಭಾಗದಲ್ಲಿರುತ್ತದೆ, ಅದು ನಿಮ್ಮ ಸ್ಮಾರ್ಟ್ಫೋನ್ ನೆಟ್ವರ್ಕ್ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News