ನವದೆಹಲಿ: ಮಿನಿ ಎಲ್‌ಇಡಿ ಟೆಕ್ನಾಲಜಿ ಯೊಂದಿಗೆ ಸ್ಯಾಮ್‌ಸಂಗ್ ತನ್ನ ಹೊಸ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ ಟಿವಿ (Ultra Premium Neo QLED TV) ಸೀರಿಸ್ ಬಿಡುಗಡೆ ಮಾಡಿದೆ. ಅದರಲ್ಲಿ ಅತ್ಯಾಧುನಿಕ ಮಿನಿ ಎಲ್‌ಇಡಿ (Mini LED) ಬಳಸಲಾಗಿದೆ. ಮಿನಿ ಎಲ್ಇಡಿ ಸಂಪೂರ್ಣವಾಗಿ ಹೊಸ ಟೆಕ್ನಾಲಜಿಯಾಗಿದೆ. ಆಪಲ್ (Apple)ಕಂಪನಿ  ತನ್ನ ಐಪ್ಯಾಡ್ (iPad)ಮತ್ತು ಐಮ್ಯಾಕ್ ನಲ್ಲಿ (iMac) ಶೀಘ್ರದಲ್ಲೇ ಇದನ್ನು ಬಳಸಲಿದೆ.


COMMERCIAL BREAK
SCROLL TO CONTINUE READING

ಹೊಸ ಟಿವಿಯ ಬೆಲೆ ಎಷ್ಟು ಗೊತ್ತಾ.?
ಸ್ಯಾಮ್ಸಂಗ್ (Samsung) ಬುಧವಾರ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ ಟಿವಿಯನ್ನು (Ultra Premium Neo QLED TV) ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 99,990 ರೂಪಾಯಿ.  ಇದರಲ್ಲಿ ಇನ್ಫಿನಿಟಿ ಒನ್ ವಿನ್ಯಾಸ ಇದೆ. ಟ್ರೂ ಲೈಫ್  ಪಿಕ್ಷರ್ ಗೆ ಸಪೋರ್ಟ್ ಮಾಡುತ್ತದೆ.  Neo QLED 8K ಟಿವಿ ಗಾತ್ರ  75   ಇಂಚು. QN900A ಟೀವಿಯ ಗಾತ್ರ 85  ಇಂಚು.


ಇದನ್ನೂ ಓದಿ :   BSNL BROADBAND PLANS: 300Mbps ಸೂಪರ್ಫಾಸ್ಟ್ ಇಂಟರ್ನೆಟ್ ಸ್ಪೀಡ್ ಜೊತೆಗೆ ಪಡೆಯಿರಿ 4TB Data


2021 ನಿಯೋ ಕ್ಯೂಎಲ್‌ಇಡಿ 4 ಕೆ ಟಿವಿಯ ಸೀರಿಸ್ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.  ಕ್ಯೂಎನ್ 85 ಎ 75 ಇಂಚು, 65 ಇಂಚು ಮತ್ತು 55 ಇಂಚು ಮತ್ತು ಕ್ಯೂಎನ್ 90 ಎ 85 ಇಂಚು, 65 ಇಂಚು, 55 ಇಂಚು ಮತ್ತು 50 ಇಂಚುಗಳಲ್ಲಿ ಲಭ್ಯವಿರುತ್ತದೆ. ನಿಯೋ ಕ್ಯೂಎಲ್‌ಇಡಿ ಟಿವಿಯನ್ನು ಖರೀದಿಸುವ ಗ್ರಾಹಕರು ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್  ಎಲ್ ಟಿಇ, 20,000 ರೂ.ಗಳವರೆಗೆ ಕ್ಯಾಶ್‌ಬ್ಯಾಕ್  (Cashback) ಜೊತೆಗೆ  ಏಪ್ರಿಲ್ 15 -18 ರ ನಡುವೆ 1,990 ರೂ.ಗಿಂತ ಕಡಿಮೆ ಇಎಂಐ (EMI) ಮುಂತಾದ ಕೊಡುಗೆಗಳನ್ನು ಪಡೆಯಬಹುದಾಗಿದೆ.


ಸ್ಯಾಮ್ಸಂಗ್ (Samsung) ಇಂಡಿಯಾದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬಿಸಿನೆಸ್ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿಕೆ ನೀಡಿದ್ದು,  "ನಿಯೋ ಕ್ಯೂಎಲ್ಇಡಿ ಮತ್ತು ಕ್ಯೂಎಲ್ಇಡಿ ಟಿವಿ ಇದನ್ನು ಹೊಸ ಪೀಳಿಗೆಯಅಗತ್ಯಕ್ಕೆ ತಕ್ಕ ರೂಪಿಸಲಾಗಿದೆ. ಗ್ರಾಹಕರಿಗೆ (Customer) ಇದು ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Facebook ತರುತ್ತಿದೆ ಹೊಸ Dating App; ಎಂಟ್ರಿ ಬೇಕಾದರೆ ಮೊದಲು ಪೂರೈಸಬೇಕು ಈ ಕೆಲಸ
 
ನಿಯೋ ಕ್ಯೂಎಲ್ಇಡಿ ಟಿವಿಯು ಕ್ವಾಂಟಮ್ ಮಿನಿ ಎಲ್ಇಡಿ ತಂತ್ರಜ್ಞಾನವನ್ನು ಹೊಂದಿದೆ, ಇದು ಸಾಮಾನ್ಯ ಎಲ್ಇಡಿಗಿಂತ 40 ಪಟ್ಟು ಚಿಕ್ಕದಾಗಿದೆ,. ಇದು ನಿಜವಾದ ಹೈ ಡೆಫಿನಿಶನ್ ರೆಸೊಲ್ಯುಶನ್ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.