ಸ್ಕೂಲ್ ಐಡಿ ಇದ್ದರೆ ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್

'ಬ್ಯಾಕ್ ಟು ಸ್ಕೂಲ್'  ಅಭಿಯಾನದಡಿಯಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ ಗುರುತಿನ ಚೀಟಿಯನ್ನು  ತೋರಿಸಿ ಕಡಿಮೆ ಬೆಲೆಗೆ  ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿಸಬಹುದು.  

Written by - Ranjitha R K | Last Updated : Apr 11, 2021, 05:27 PM IST
  • ಸ್ಯಾಮ್ಸಂಗ್ ಆರಂಭಿಸಿದ 'ಬ್ಯಾಕ್ ಟು ಸ್ಕೂಲ್' ಅಭಿಯಾನ
  • ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಟ್ಯಾಬ್ಲೆಟ್‌
  • ಸ್ಕೂಲ್ ಐಡಿ ತೋರಿಸಿ ಖರೀದಿಸಬಹುದು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌
ಸ್ಕೂಲ್ ಐಡಿ ಇದ್ದರೆ ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ title=
ಸ್ಯಾಮ್ಸಂಗ್ ಆರಂಭಿಸಿದ 'ಬ್ಯಾಕ್ ಟು ಸ್ಕೂಲ್' ಅಭಿಯಾನ (file photo)

ನವದೆಹಲಿ : ವೇಗವಾಗಿ ಹರಡುವ ಕೊರೊನಾವೈರಸ್ (Coronavirus) ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಮತ್ತೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮತ್ತೆ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯಲ್ಲಿ (Online class) ತಮ್ಮ ಪಾಠ ಅಭ್ಯಾಸ ಆರಂಭಿಸಿದ್ದಾರೆ. ಆನ್ ಲೈನ್ ಕ್ಲಾಸ್ ನಲ್ಲಿ ಕುಳಿತುಕೊಳ್ಳಬೇಕಾದರೆ ಟ್ಯಾಬ್ , ಲ್ಯಾಪ್ ಟಾಪ್ ಅಥವಾ ಮೊಬೈಲ್ ಇರಲೇಬೇಕು. ಈ ಹಿನ್ನೆಲೆಯಲ್ಲಿ ಸ್ಯಾಮ್ಸಂಗ್ 'ಬ್ಯಾಕ್ ಟು ಸ್ಕೂಲ್' (Back to School) ಅಭಿಯಾನವನ್ನು ಶುರು ಮಾಡಿದೆ.

ಈ ಉತ್ಪನ್ನಗಳಿಗೆ ಸಿಗಲಿದೆ ರಿಯಾಯಿತಿ : 
'ಬ್ಯಾಕ್ ಟು ಸ್ಕೂಲ್'  ಅಭಿಯಾನದಡಿಯಲ್ಲಿ, (back to school campaign) ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ ಗುರುತಿನ ಚೀಟಿಯನ್ನು (School ID) ತೋರಿಸಿ ಕಡಿಮೆ ಬೆಲೆಗೆ  ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Smartphone) ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿಸಬಹುದು. ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ((Galaxy Tab S6 Lite), ಗ್ಯಾಲಕ್ಸಿ ಟ್ಯಾಬ್ ಎ 7 (Galaxy Tab A7), ಗ್ಯಾಲಕ್ಸಿ ಟ್ಯಾಬ್ ಎಸ್ 7 (Galaxy Tab S7) ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್ (Galaxy Tab S7 Plus) ಖರೀದಿ ಮೇಲೆ  ಕಡೆಯಿಂದ ಆಫರ್ ಸಿಗಲಿದೆ. 

ಇದನ್ನೂ ಓದಿ: Jio, Airtel ಮತ್ತು Vodafone-Idea ಬೆಸ್ಟ್ ರೀಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು : 
"ಬ್ಯಾಕ್ ಟು ಸ್ಕೂಲ್" ಅಭಿಯಾನದೊಂದಿಗೆ, ವಿದ್ಯಾರ್ಥಿಗಳಿಗೆ ಮತ್ತು ಕೈಗೆಟುಕುವ ದರದಲ್ಲಿ ಇ-ಲರ್ನಿಂಗ್ (e-learning) ಸಾಧನಗಳನ್ನು  ಒದಗಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು, ಸ್ಯಾಮ್ಸಂಗ್ (Samsung) ಇಂಡಿಯಾದ ಟ್ಯಾಬ್ಲೆಟ್ ಬಿಸ್ ನೆಸ್ ನಿರ್ದೇಶಕ ಮಾಧುರ್ ಚತುರ್ವೇದಿ ಹೇಳಿದ್ದಾರೆ. ಈ ಕೊಡುಗೆಯ ಮೂಲಕ, ವಿದ್ಯಾರ್ಥಿಗಳು ಸ್ಮಾರ್ಟ್ ಕಲಿಕೆಯ ಲಾಭವನ್ನು ಪಡೆಯಬಹುದು ಎಂದವರು ಹೇಳಿದ್ದಾರೆ. ಈ ಆಫರ್ ನ ಲಾಭ ಪಡೆಯಲು ಮೊದಲು samsung.comಗೆ ಭೇಟಿ ನೀಡಬೇಕು ಮತ್ತು Samsung Student Advantage ಅನ್ನು ಕ್ಲಿಕ್ ಮಾಡಿ. ನಂತರ, ನಿಮ್ಮ ವಿವರಗಳನ್ನು ಭರ್ತಿ ಮಾಡಿದರೆ 10% ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. 

ಇದನ್ನೂ ಓದಿ: BSNL Masterstroke Offer: ಕೇವಲ ರೂ.47 ನೀಡಿ 28 ದಿನಗಳ ಅವಧಿಗೆ ನಿತ್ಯ 1 ಜಿಬಿ ಡೇಟಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News