Facebook ತರುತ್ತಿದೆ ಹೊಸ Dating App; ಎಂಟ್ರಿ ಬೇಕಾದರೆ ಮೊದಲು ಪೂರೈಸಬೇಕು ಈ ಕೆಲಸ

ವರದಿಯ ಪ್ರಕಾರ, ಫೇಸ್‌ಬುಕ್ ಈ ವಿಶೇಷ ಡೇಟಿಂಗ್ ಅಪ್ಲಿಕೇಶನ್‌ಗೆ Sparked ಎಂದು ಹೆಸರಿಸಿದೆ. ಶೀಘ್ರದಲ್ಲೇ ಪ್ರಾರಂಭವಾಗಲಿರುವ ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ರಚಿಸಿದ ಸೂಪರ್ ಫಾಸ್ಟ್ ವೀಡಿಯೊ  ಪ್ರಮುಖ ಪಾತ್ರ ವಹಿಸಲಿದೆ. 

Written by - Ranjitha R K | Last Updated : Apr 14, 2021, 05:22 PM IST
  • Facebook ತರುತ್ತಿದೆ ಹೊಸ ಡೇಟಿಂಗ್ ಆಪ್
  • ಎಲ್ಲಾ ಆಪ್ ಗಳಿಗಿಂತ ಭಿನ್ನ ಎನ್ನುತ್ತಿದೆ ಕಂಪನಿ
  • ಡೇಟಿಂಗ್ ಅಪ್ಲಿಕೇಶನ್‌ಗೆ Sparked ಎಂದು ಹೆಸರಿಟ್ಟ ಕಂಪನಿ
Facebook ತರುತ್ತಿದೆ ಹೊಸ Dating App; ಎಂಟ್ರಿ ಬೇಕಾದರೆ ಮೊದಲು ಪೂರೈಸಬೇಕು ಈ ಕೆಲಸ title=
Facebook ತರುತ್ತಿದೆ ಹೊಸ ಡೇಟಿಂಗ್ ಆಪ್ (file photo)

ನವದೆಹಲಿ : ಸೋಷಿಯಲ್ ಮೀಡಿಯಾ ಕಂಪನಿ ಫೇಸ್‌ಬುಕ್ (Facebook) ಹೊಸ Dating App ಅನ್ನು ಹೊರ ತರುತ್ತಿದೆ. ಫೇಸ್‌ಬುಕ್ ಸ್ಪಾರ್ಕ್ಡ್ ಹೆಸರಿನ ಡೇಟಿಂಗ್ ಅಪ್ಲಿಕೇಶನ್ (Dating App) ಅನ್ನು ಕಂಪನಿ ಪ್ರಾರಂಭಿಸಲಿದೆ. ಈ ಹೊಸ ಅಪ್ಲಿಕೇಶನ್ ಇತರ ಎಲ್ಲಾ ಆಪ್ ಗಳಿಗಿಂತ  ಭಿನ್ನವಾಗಿರುತ್ತದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.

ಎಂಟ್ರಿ ಸಿಗಬೇಕಾದರೆ ಸ್ವಲ್ಪ ಶ್ರಮ ವಹಿಸಬೇಕಾಗುತ್ತದೆ :
ವರದಿಯ ಪ್ರಕಾರ, ಫೇಸ್‌ಬುಕ್ (Facebook) ಈ ವಿಶೇಷ ಡೇಟಿಂಗ್ ಅಪ್ಲಿಕೇಶನ್‌ಗೆ Sparked ಎಂದು ಹೆಸರಿಸಿದೆ. ಶೀಘ್ರದಲ್ಲೇ ಪ್ರಾರಂಭವಾಗಲಿರುವ ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ರಚಿಸಿದ ಸೂಪರ್ ಫಾಸ್ಟ್ ವೀಡಿಯೊ (Super fast Video) ಪ್ರಮುಖ ಪಾತ್ರ ವಹಿಸಲಿದೆ. ಕೇವಲ ನಾಲ್ಕು ನಿಮಿಷಗಳ ಈ ವೀಡಿಯೊವನ್ನು ಇತರ ಬಳಕೆದಾರರೊಂದಿಗೆ ಶೇರ್ ಮಾಡಲಾಗುತ್ತದೆ. ಬಳಕೆದಾರರು ಇದನ್ನು ಇಷ್ಟಪಟ್ಟರೆ, ನಿಮಗೆ ಡೇಟಿಂಗ್ ಅವಕಾಶ ಸಿಗುತ್ತದೆ.

ಇದನ್ನೂ ಓದಿ : OnePlus 9R ಭಾರತದಲ್ಲಿ ಸೇಲ್ ಆರಂಭ, ಸಿಗಲಿದೆ 2000 ರೂಪಾಯಿ ಡಿಸ್ಕೌಂಟ್

ನಿಮ್ಮ ವೀಡಿಯೊವನ್ನು ಮೊದಲು ಪರಿಶೀಲಿಸಲಾಗುತ್ತದೆ :
ಈ ಫೇಸ್‌ಬುಕ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ (Facebook Dating App) ಪ್ರವೇಶ ಪಡೆಯಲು ನೀವು ನಾಲ್ಕು ನಿಮಿಷಗಳ ವೀಡಿಯೊವನ್ನು ಮಾಡಬೇಕು. ನೀವು ಯಾರ ಜೊತೆ ಡೇಟ್ ಹೋಗಲು  ಇಷ್ಟಪಡುತ್ತೀರಿ ಎನ್ನುವುದನ್ನು ಇದರಲ್ಲಿ ತಿಳಿಸಬೇಕಾಗುತ್ತದೆ. ಇದರಲ್ಲಿ, Male, Female  ,ಮತ್ತು Transgender ಎಂಬ ಮೂರು ಆಯ್ಕೆಯನ್ನು ನೀಡಲಾಗಿರುತ್ತದೆ.  ವಿಡಿಯೋ ಅಪ್ ಲೋಡ್ (Video Upload) ಮಾಡಿದ ನಂತರ Facebook team ಇದನ್ನು ಪರಿಶೀಲನೆ  ಮಾಡುತ್ತದೆ. ಇದಾದ ನಂತರ  ಆಪ್ ಗೆ ನೀವು ಪ್ರವೇಶ ಪಡೆದುಕೊಳ್ಳಬಹುದು. 

ಪ್ರೋಸೆಸ್ ಈ ರೀತಿ ಇರಲಿದೆ:
ಮಾಹಿತಿಯ ಪ್ರಕಾರ, ಪರಸ್ಪರ ಭೇಟಿಯಾಗುವುದಕ್ಕೆ ಮಾತ್ರ ಈ ಡೇಟಿಂಗ್ ಅಪ್ಲಿಕೇಶನ್  ಅನ್ನು ಬಳಸಲಾಗುತ್ತದೆ. ಒಮ್ಮೆ ಹೊಂದಿಕೆಯಾದ ನಂತರ, ಫೇಸ್‌ಬುಕ್ ಎರಡೂ ಬಳಕೆದಾರರಿಗೆ Instagram, iMessage ಅಥವಾ ಇಮೇಲ್ ಮೂಲಕ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. .

ಇದನ್ನೂ ಓದಿ : ಆನ್‍ಲೈನ್ ಕ್ಲಾಸಿಗೆ affordable ಲ್ಯಾಪ್‍ಟಾಪ್.! ಇಲ್ಲಿದೆ ಟಾಪ್ ಲಿಸ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News