Signal App Down - ವಾಶಿಂಗ್ಟನ್: WhatsApp ನೂತನ ಗೌಪ್ಯತಾ ನೀತಿಯ ಕುರಿತು ನಡೆಯುತ್ತಿರುವ ವಿವಾದಗಳ ನಡುವೆ, ಜನರನ್ನು ತನ್ನತ್ತ ಆಕರ್ಷಿಸಿದ್ದ Signal App ಇದೀಗ ಟೀಕೆಗಳನ್ನು ಎದುರಿಸುತ್ತಿದೆ. ಆಪ್ ಡೌನ್ ಆಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆಪ್ ಬಳಕೆಯಲ್ಲಾಗುತ್ತಿರುವ ವ್ಯತ್ಯಯಗಳ ಕುರಿತು ಶುಕ್ರವಾರ ಬಳಕೆದಾರರಿಂದ ದೂರುಗಳು ಬಂದಿವೆ. ಮೊಬೈಲ್ ಹಾಗೂ ಡೆಸ್ಕ್ ಟಾಪ್ ಎರಡೂ ಆಪ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಇದರಿಂದ ಸಂದೇಶ ಕಳುಹಿಸಲು ಅಡೆತಡೆ ಉಂಟಾಗುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಬಳಕೆದಾರರಿಂದ ಬಂದ ದೂರುಗಳ ಹಿನ್ನೆಲೆ ಇದೀಗ ಕಂಪನಿ ಎಚ್ಚೆತ್ತುಕೊಂಡಿದ್ದು, ಶೀಘ್ರದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂಬ ಭರವಸೆ ನೀಡಿದೆ.


COMMERCIAL BREAK
SCROLL TO CONTINUE READING

ಕಂಪನಿ ನೀಡಿರುವ ಕಾರಣವೇನು?
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ Signal ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿದೆ. ತಾಂತ್ರಿಕವಾಗಿ ಕಂಪನಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಸರಿಪಡಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಹಾಗೂ ಪುನಃ ಮೊದಲಿನ ಹಾಗೆಯೆ ಆಪ್ ತನ್ನ ಕಾರ್ಯ ಮುಂದುವರೆಸಲಿದೆ ಎಂದು ಕಂಪನಿ ಹೇಳಿದೆ. ಕಳೆದ ಕೆಲದಿನಗಳಿಂದ ಭಾರಿ ಪ್ರಮಾಣದಲ್ಲಿ ಈ ಆಪ್ ಡೌನ್ಲೋಡ್ ಮಾಡಲಾಗಿದೆ. ವಾಟ್ಸ್ ಆಪ್ (Whatsapp) ತನ್ನ ನೂತನ ಗೌಪ್ಯತಾ ನೀತಿಯನ್ನು ಪ್ರಕಟಿಸಿದ ಬಳಿಕ ಈ ಆಪ್ ಭಾರಿ ಜನಪ್ರೀಯತೆ ಗಳಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನು ಓದಿ-ಬಳಕೆದಾರರ ಗೌಪ್ಯತೆ ಮೇಲೆ ಕಣ್ಣಿಟ್ಟಿದ್ದ WhatsApp ಗೆ ಮತ್ತೊಂದು ಕಂಟಕ...!


ಭಾರತದಲ್ಲಿ ಎಷ್ಟು ಜನ ಡೌನ್ ಲೋಡ್ ಮಾಡಿದ್ದಾರೆ?
ಭಾರತದ ವಿಷಯ ಹೇಳುವುದಾದರೆ ಇದುವರೆಗೆ ಸುಮಾರು 3 ಮಿಲಿಯನ್ ಜನರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ ಹಾಗೂ ಮುಂಬರುವ ದಿನಗಳಲ್ಲಿಯೂ ಕೂಡ ಈ ಅಂಕಿಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಇನ್ನೊಂದೆಡೆ ವಾಟ್ಸ್ ಆಪ್ ಕೂಡ ತನ್ನ ಗೌಪ್ಯತಾ ನೀತಿಗೆ ತಡೆ ನೀಡುವುದಾಗಿ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ವಾಟ್ಸ್ ಆಪ್, ಕಂಪನಿಯ ನೂತನ ಗೌಪ್ಯತಾ ನೀತಿಯ ಕುರಿತು ಭ್ರಮೆ ಪಸರಿಸಲಾಗುತ್ತಿದೆ. ಹೀಗಾಗಿ ಅಪ್ಡೇಟ್ ಅನ್ನು ಸದ್ಯಕ್ಕೆ ತಡೆಹಿಡಿಯಲಾಗುತ್ತಿದ್ದು, ಇದರಿಂದ ಬಳಕೆದಾರರಿಗೆ ಗೌಪ್ಯತಾ ನೀತಿಯ ಹೆಚ್ಚನ ಮಾಹಿತಿ ಪಡೆಯಲು ಸಮಯಾವಕಾಶ ಸಿಗಲಿದೆ ಎಂದು ಕಂಪನಿ ಹೇಳಿದೆ.


ಇದನ್ನು ಓದಿ-ಟೆಕ್ ಜಗತ್ತಿನಲ್ಲಿ ಮಹಾಸಂಕ್ರಾಂತಿ; 50 ಕೋಟಿ ಬಳಕೆದಾರರು WhatsAppನಿಂದ Telegramಗೆ ವಲಸೆ


ಯಾವೊಂದು ಖಾತೆ ಡಿಲೀಟ್ ಮಾಡಲಾಗುವುದಿಲ್ಲ
ಈ ಕುರಿತು ಮಾಹಿತಿ ನೀಡಿರುವ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್, ನಾವು ಗೌಪ್ಯತಾ ನೀತಿ ಅಪ್ಡೇಟ್ ದಿನಾಂಕವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಹೇಳಲಾಗಿದೆ. ಹೀಗಾಗಿ ಫೆಬ್ರುವರಿ 8ರ ನಂತರ ಯಾರೊಬ್ಬರ ಖಾತೆ ಡಿಲೀಟ್ ಮಾಡಲಾಗುವುದಿಲ್ಲ. ವಾಟ್ಸ್ ಆಪ್ ಕುರಿತು ಜನರಲ್ಲಿ ಹಬ್ಬಿಸಲಾಗುತ್ತಿರುವ ತಪ್ಪು ಮಾಹಿತಿಗಳ ಮೇಲೆ ನಾವು ಕೆಲಸ ಆರಂಭಿಸಿದ್ದೇವೆ. ಬಳಕೆದಾರರ ಖಾಸಗಿತನ ಕಾಪಾಡಲು ನಾವು ಬದ್ಧರಾಗಿದ್ದೇವೆ ಹಾಗೂ ನಾವು ಈ ನಿರ್ಣಯದ ಜೊತೆಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಂಪನಿ ಹೇಳಿದೆ.


ಇದನ್ನು ಓದಿ-WhatsApp Privacy Policy Row : Signal ಹೊಡೆತಕ್ಕೆ ಬೆದರಿ ವಾಟ್ಸಪ್ ಹೇಳಿದ್ದೇನು ಗೊತ್ತಾ?


ಸಿಕ್ಕ ಹೊಸ ಗುರುತು
ಇದಕ್ಕೂ ಮೊದಲು WhatsApp ಫೆಬ್ರುವರಿ 8 ರಿಂದ ತನ್ನ ನೂತನ ಗೌಪ್ಯತಾ ನೀತಿಯನ್ನು ಜಾರಿಗೊಳಿಸುವುದಾಗಿ ಬಳಕೆದಾರರಿಗೆ ಸಂದೇಶ ರವಾನಿಸಲು ಆರಂಭಿಸಿತ್ತು. ಆದರೆ, Telegram ಹಾಗೂ Signal App ಗಳಿಗೆ ಇದರ ನೇರ ಲಾಭವಾಗಿದೆ. ಡೌನ್ ಲೋಡ್ ವಿಷಯದಲ್ಲಿ ಸಿಗ್ನಲ್ ಆಪ್ ಈ ವಾರ ಭಾರತದಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಈ ಎರಡೂ ಆಪ್ ಗಳಿಗೆ ಭಾರತ ಅತಿ ದೊಡ್ಡ ಗ್ರೋಥ್ ಮಾರ್ಕೆಟ್ ಆಗಿದೆ ಎಂಬುದು ಇಲ್ಲಿ ಗಮನಾರ್ಹ. ಸಿಗ್ನಲ್ ಆಪ್ 2014 ರಿಂದ ಮಾರುಕಟ್ಟೆಯಲ್ಲಿದೆ. ಆದರೆ, ವಾಟ್ಸ್ ಆಪ್ ಕುರಿತು ಸೃಷ್ಟಿಯಾದ ವಿವಾದದ ಬಳಿಕ ಸಿಗ್ನಲ್ ಆಪ್ ಗೆ ಹೊಸ ಗುರುತು ಲಭಿಸಿದೆ.


ಇದನ್ನು ಓದಿ- WhatsApp ದಾದಾಗಿರಿ, Signalಗೆ ಬಳಕೆದಾರರ ಗ್ರೀನ್ ಸಿಗ್ನಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.