WhatsApp ದಾದಾಗಿರಿ, Signalಗೆ ಬಳಕೆದಾರರ ಗ್ರೀನ್ ಸಿಗ್ನಲ್

WhatsApp Vs Signal 2021:ಕೆಲ ದಿನಗಳ ಹಿಂದೆಯಷ್ಟೇ ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ತನ್ನ ನೀತಿ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಹೇಳಿದೆ. 

Written by - Nitin Tabib | Last Updated : Jan 9, 2021, 02:32 PM IST
  • ಕೆಲ ದಿನಗಳ ಹಿಂದೆಯಷ್ಟೇ ವಾಟ್ಸ್ ಆಪ್ ತನ್ನ ನೀತಿ ನಿಯಮಗಳಲ್ಲಿ ಬದಲಾವಣೆ ತರುವದಾಗಿ ಹೇಳಿದೆ.
  • ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಭಯ ವಾಟ್ಸ್ ಆಪ್ ಬಳಕೆದಾರರಿಗೆ ಕಾಡತೊಡಗಿದೆ.
  • ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಸಿಗ್ನಲ್ ಆಪ್ ಡೌನ್ ಲೋಡ್ ಮಾಡಲು ಮುಗಿಬಿದ್ದಿದ್ದಾರೆ.
WhatsApp ದಾದಾಗಿರಿ, Signalಗೆ ಬಳಕೆದಾರರ ಗ್ರೀನ್ ಸಿಗ್ನಲ್ title=
WhatsApp Vs Signal (File Photo)

WhatsApp Vs Signal 2021 - ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ತನ್ನ ನೀತಿ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಹೇಳಿದೆ. ಅಷ್ಟೇ ಅಲ್ಲ ಬಳಕೆದಾರರಿಗೆ ಈ ಕುರಿತು ನೋಟಿಸ್ ಕೂಡ ಕಳುಹಿಸಲು ಪ್ರಾರಂಭಿಸಿದೆ. ವಾಟ್ಸ್ ಆಪ್ ನ ನೂತನ ನಿಯಮಗಳು ಫೆಬ್ರುವರಿ 8 ರಿಂದ ಜಾರಿಗೆ ಬರಲಿವೆ ಎಂದೂ ಕೂಡ ಕಂಪನಿ ಹೇಳಿದೆ. ವರದಿಗಳ ಪ್ರಕಾರ ಯಾರು ಈ ನಿಯಮಗಳನ್ನು ಒಪ್ಪಿಕೊಳ್ಳುವುದಿಲ್ಲವೋ ಅವರ ಮೊಬೈಲ್ ನಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇದರಿಂದ ವಾಟ್ಸ್ ಆಪ್ ಬಳಕೆದಾರರು ಚಿಂತೆಗೊಳಗಾಗಿದ್ದಾರೆ. ಏಕೆಂದರೆ, ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯ ಭಯ ಬಳಕೆದಾರನ್ನು ಸತಾಯಿಸುತ್ತಿದೆ. ಏತನ್ಮಧ್ಯೆ ಬಳಕೆದಾರರು ಪ್ರೈವೆಸಿ ಫೋಕಸ್ಡ್ ಮೆಸೇಜಿಂಗ್ ಆಪ್ ಆಗಿರುವ ಸಿಗ್ನಲ್ (Signal)ಗೆ ಮುಗಿಬೀಳಲಾರಂಭಿಸಿದ್ದಾರೆ. ಇತ್ತೀಚೆಗಷ್ಟೇ ವಿಶ್ವದ ನಂ.1 ಸಿರಿವಂತರಾಗಿರುವ ಎಲೋನ್ ಮಸ್ಕ್ Signal ಕುರಿತು ಟ್ವೀಟ್ ವೊಂದನ್ನು ಮಾಡಿದ್ದಾರೆ. ಇದರಲ್ಲಿ ಅವರು ಬಳಕೆದಾರರಿಗೆ ಸಿಗ್ನಲ್ ಆಪ್ ಬಳಸಲು ಸಲಹೆ ನೀಡಿದ್ದಾರೆ. ಜನವರಿ 7ರಂದು ಮಸ್ಕ್ ಮಾಡಿರುವ ಈ ಟ್ವೀಟ್ ಬಳಿಕ ಅಪಾರ ಸಂಖ್ಯೆಯಲ್ಲಿ ಜನರು ಸಿಗ್ನಲ್ ಆಪ್ ಡೌನ್ ಲೋಡ್ ಮಾಡಲಾರಂಭಿಸಿದ್ದಾರೆ.  ಈ ಆಪ್ ಡೌನ್ಲೋಡ್ ಆಗುತ್ತಿರುವ ವೇಗವನ್ನು ಗಮನಿಸಿದರೆ, ವಾಟ್ಸ್ ಆಪ್ ದಾದಾಗಿರಿ ಅಪಾಯದಲ್ಲಿ ಸಿಲುಕಿರುವಂತೆ ಕಂಡು ಬರುತ್ತಿದೆ. ಏತನ್ಮಧ್ಯೆ ವಾಟ್ಸ್ ಆಪ್ ಕೂಡ ತನ್ನ ಹೊಸ ಗೌಪ್ಯತಾ ನೀತಿ ಪ್ರೈವೇಟ್ ಚಾಟ್ ಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ನೀಡಿದೆ.

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟಾಪ್ ಫ್ರೀ ಆಪ್ ಆಗಿದೆ Signal
ಹೆಚ್ಚಾಗುತ್ತಿರುವ ಡೌನ್ಲೋಡ್ ಹಿನ್ನೆಲೆ ಸಿಗ್ನಲ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಆಪ್ ಸ್ಟೋರ್ ನಲ್ಲಿ ಟಾಪ್ ಫ್ರೀ ಆಪ್ ಆಗಿ ಹೊರಹೊಮ್ಮಿದೆ. ಆಪ್ ಸ್ಟೋರ್ ನಲ್ಲಿ ಟಾಪ್ ಪಟ್ಟ ಅಲಂಕರಿಸಿರುವ ಕುರಿತು ಸಿಗ್ನಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ಟ್ವೀಟ್ ನಲ್ಲಿ ಸಂಸ್ಥೆ ಯಾವ ಯಾವ ಮಾರುಕಟ್ಟೆಗಳಲ್ಲಿ ತಮ್ಮ ಆಪ್ ಪ್ರಸ್ತುತ ನಂ.1 ಸ್ಥಾನದಲ್ಲಿದೆ ಎಂಬುದನ್ನು ಹೇಳಿಕೊಂಡಿದೆ. ಸಿಗ್ನಲ್ ಭಾರತ, ಜರ್ಮನಿ, ಫ್ರಾನ್ಸ್, ಆಸ್ಟ್ರೀಯಾ, ಫಿನ್ಲ್ಯಾಂಡ್, ಹಾಂಗ್ ಕಾಂಗ್ ಹಾಗೂ ಸ್ವಿಟ್ಜರ್ಲ್ಯಾಂಡ್ ನಲ್ಲಿ ಟಾಪ್ ಪೋಸಿಶನ್ ನಿಂದ ವಾಟ್ಸ್ ಆಪ್ ಅನ್ನು ಹಿಂದಕ್ಕೆ ತಳ್ಳಿದೆ. ಇದಲ್ಲದೆ ಜರ್ಮನಿ ಹಂಗೇರಿಗಳಲ್ಲಿಯೂ ಕೂಡ ಸಿಗ್ನಲ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಾಪ್ ಸ್ಥಾನ ಅಲಂಕರಿಸಿದೆ.

ಇದನ್ನು ಓದಿ- WhatsApp New Policyಯಿಂದ ಬಳಕೆದಾರರ ಕಿರಿಕಿರಿ, ವಾಟ್ಸ್ ಆಪ್ ನೀಡಿದೆ ಉತ್ತರ

ಸಿಗ್ನಲ್ ನಿಮ್ಮ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ
ಡಿಸೆಂಬರ್ 2020 ರಲ್ಲಿ ಸಿಗ್ನಲ್ ತನ್ನ ಲೇಟೆಸ್ಟ್ ಆವೃತ್ತಿಯೊಂದಿಗೆ ಗ್ರೂಪ್ ಕಾಲ್ ವೈಶಿಷ್ಟ್ಯ ಪರಿಚಯಿಸಿದ ಹಾಗೂ ಎನ್ಕ್ರಿಪ್ಟ್ ಸೌಲಭ್ಯವನ್ನು ಕೂಡ ಒದಗಿಸಿದೆ.  ವೈಯಕ್ತಿಕ ಮಾಹಿತಿಯ ರೂಪದಲ್ಲಿ ಸಿಗ್ನಲ್ ಕೇವಲ ನಿಮ್ಮ ಮೊಬೈಲ್ ನಂಬರ್ ಮಾತ್ರ ಸಂಗ್ರಹಿಸುತ್ತದೆ ಹಾಗೂ ಅದನ್ನು ನಿಮ್ಮ ಗುರುತಿನ ಜೊತೆಗ ಜೋಡಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ.

WhatsAppನ ನೂತನ ನೀತಿ ಏನು?
ಕಳೆದ ಬುಧವಾರದಿಂದ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಪಾಪ್-ಅಪ್ ಸಂದೇಶವೊಂದನ್ನು ಕಳುಹಿಸುತ್ತಿದೆ. ಈ ಸಂದೇಶದಲ್ಲಿ ಸಂಸ್ಥೆ ತನ್ನ ಬಳಕೆದಾರರಿಗೆ ನೂತನ ನಿಯಮ ಹಾಗೂ ಷರತ್ತುಗಳ ಜೊತೆಗೆ ಗೌಪ್ಯತಾ ನೀತಿಯ ಬಗ್ಗೆ ಮಾಹಿತಿ ನೀಡುತ್ತಿದೆ. ಈ ನೂತನ ನಿಯಮಗಳು ಫೆಬ್ರವರಿ 8 ರಿಂದ ಜಾರಿಗೆ ಬರಲಿವೆ ಎಂದೂ ಕೂಡ ಸಂದೇಶದಲ್ಲಿ ಹೇಳಲಾಗಿದೆ. ಭವಿಷ್ಯದಲ್ಲಿ ವಾಟ್ಸ್ ಆಪ್ ಬಳಕೆಗೆ ಈ ಷರತ್ತು ಹಾಗೂ ನಿಯಮಗಳನ್ನು ಒಪ್ಪಿಕೊಳ್ಳಲೇಬೇಕು. ಒಂದು ವೇಳೆ ಹಾಗೆ ಮಾಡದೆ ಹೋದಲ್ಲಿ ನಿಮ್ಮ ಖಾತೆಯನ್ನು ಅಳಿಸಿ ಹಾಕಲಾಗುವುದು.

ಇದನ್ನು ಓದಿ- ಬದಲಾಗಿರುವ ಈ WhatsApp ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು!

ನಿಮ್ಮ ಡಿವೈಸ್ ನಿಂದ WhatsApp ಈ ಮಾಹಿತಿ ಸಂಗ್ರಹಿಸಿ Facebook ಹಾಗೂ Instagram ಜೊತೆಗೆ ಹಂಚಿಕೊಳ್ಳಲಿದೆ
ಡಿವೈಸ್ ಐಡಿ, ಬಳಕೆದಾರರ ಐಡಿ, ಜಾಹೀರಾತು ದತ್ತಾಂಶ, ಪರ್ಚೆಸ್ ಹಿಸ್ಟರಿ, ಕೋರ್ಸ್ ಲೋಕೇಶನ್, ಫೋನ್ ನಂಬರ್, ಇ-ಮೇಲ್ ವಿಳಾಸ, ಕಾಂಟಾಕ್ಟ್ ಗಳ ಮಾಹಿತಿ, ಪ್ರಾಡಕ್ಟ್ ಇಂಟರ್ಯಾಕ್ಷನ್, ಕ್ರ್ಯಾಶ್ ಡೇಟಾ, ಪರ್ಫಾರ್ಮೆನ್ಸ್ ಡೇಟಾ, ಡೈಗ್ನಾಸ್ಟಿಕ್ಸ್ ಡೇಟಾ, ಮೊಬೈಲ್ ಮೂಲಕ ನಡೆಸಲಾಗುವ ಆರ್ಥಿಕ ವಹಿವಾಟಿನ ಕುರಿತು ವಾಟ್ಸ್ ಆಪ್ ಮಾಹಿತಿ ಸಂಗ್ರಹಿಸಲಿದೆ. 

ಇದನ್ನು ಓದಿ- ಶೀಘ್ರದಲ್ಲೇ WhatsApp ತರುತ್ತಿದೆ ಮಲ್ಟಿ ಡಿವೈಸ್ ಸಪೋರ್ಟ್, ಇದರಿಂದ ಸಿಗುತ್ತೆ ಈ ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News