Indias Only Tax-Free State: ಇಡೀ ದೇಶವೇ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತದೆ. ಆದರೆ ಒಂದು ರಾಜ್ಯ ಮಾತ್ರ ಈ ಪ್ರಕ್ರಿಯೆಯಿಂದ ಮುಕ್ತವಾಗಿದೆ. ಆ ರಾಜ್ಯದ ಜನರು ಒಂದೇ ಒಂದು ರೂಪಾಯಿ ಆದಾಯ ತೆರಿಗೆಯನ್ನು ಸಹ ಪಾವತಿಸಬೇಕಾಗಿಲ್ಲ. ಆ ಏಕೈಕ ರಾಜ್ಯ ಸಿಕ್ಕಿಂ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೈದಾನದಲ್ಲೇ ಬೌಲರ್‌ನನ್ನು ನೆಲಕ್ಕೆಸೆದು ಹೊಡೆದ ಕ್ರಿಕೆಟಿಗ! ಶಾಕಿಂಗ್‌ ವಿಡಿಯೋ ವೈರಲ್


ಸಿಕ್ಕಿಂ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲಿ ತೆರಿಗೆ ಮುಕ್ತ ಷರತ್ತು ಹಾಕಲಾಗಿತ್ತು. ಇದೇ ಕಾರಣದಿಂದ ಇಂದಿಗೂ ಈ ರಾಜ್ಯದ ಜನರು ತೆರಿಗೆ ಕಟ್ಟಲ್ಲ. 1975 ರ ವಿಲೀನ ಒಪ್ಪಂದ ಮತ್ತು ಸಂವಿಧಾನದ 371 ಎಫ್ ಅಡಿಯಲ್ಲಿ ಸಿಕ್ಕಿಂ ನಿವಾಸಿಗಳು ಈ ವಿಶೇಷ ವಿನಾಯಿತಿಯನ್ನು ಪಡೆದಿದ್ದಾರೆ. ಈ ಜನರಿಗೆ ಆದಾಯ ತೆರಿಗೆ ಕಾಯಿದೆ, 1961 ಅನ್ವಯಿಸುವುದಿಲ್ಲ.


ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ಪ್ರತಿಯೊಬ್ಬ ನಾಗರಿಕನು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿಯವರೆಗೆ, 2023-24 ರ ಹಣಕಾಸು ವರ್ಷಕ್ಕೆ 5 ಕೋಟಿಗೂ ಹೆಚ್ಚು ಜನರು ರಿಟರ್ನ್ಸ್ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಈ ಸಂಖ್ಯೆ ಪ್ರತಿದಿನ ಲಕ್ಷಗಟ್ಟಲೆ ಹೆಚ್ಚುತ್ತಿದೆ.


ಇದನ್ನೂ ಓದಿ:  ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಾಕು: ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ದಿಢೀರ್ ಕರಗಿ ಹೋರಬರುತ್ತೆ! ಕಿಡ್ನಿ ಸ್ಟೋನ್‌ ಪುಡಿಯಾಗಲು ಸಹ ಇದು ರಾಮಬಾಣ!


ಸಿಕ್ಕಿಂ 1975 ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು. ಆ ಸಮಯದಲ್ಲಿ ಅವರು ವಿಶೇಷ ಸ್ಥಾನಮಾನವನ್ನು ತೆಗೆದುಕೊಳ್ಳುವುದಷ್ಟೇ ಅಲ್ಲದೆ, ತಮ್ಮ ಹಳೆಯ ಕಾನೂನುಗಳನ್ನೇ ಅನುಸರಿಸುತ್ತಾರೆ ಎಂದು ಷರತ್ತು ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಸಿಕ್ಕಿಂ ನಿವಾಸಿಗಳು ಆದಾಯ ತೆರಿಗೆ ಜಾಲದಿಂದ ಹೊರಗುಳಿಯುತ್ತಾರೆ ಎಂದು ಸ್ಪಷ್ಟಪಡಿಸಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.