ಔಟ್‌ ಮಾಡಿದನೆಂದು ಸಿಟ್ಟಿಗೆದ್ದ ಬ್ಯಾಟ್ಸ್‌ಮನ್...‌ ಮೈದಾನದಲ್ಲೇ ಬೌಲರ್‌ನನ್ನು ನೆಲಕ್ಕೆಸೆದು ಹೊಡೆದ ಕ್ರಿಕೆಟಿಗ! ಶಾಕಿಂಗ್‌ ವಿಡಿಯೋ ವೈರಲ್

MCC Weekdays Bash League Cricket: MCC ವೀಕ್‌ಡೇಸ್ ಬ್ಯಾಷ್ ಲೀಗ್ ಕ್ರಿಕೆಟ್ ಅನ್ನು ಯುಎಇಯಲ್ಲಿ ಆಡಲಾಗುತ್ತಿದೆ. ಈ ಲೀಗ್‌ನಲ್ಲಿ ಏರೋವಿಸಾ ಕ್ರಿಕೆಟ್ ಮತ್ತು ರಬ್ಡಾನ್ ಕ್ರಿಕೆಟ್ ಕ್ಲಬ್ ನಡುವೆ ಪಂದ್ಯ ನಡೆಯಿತು. ಈ ವೇಳೆ ಏರೋವಿಸಾ ಕ್ರಿಕೆಟ್ ತಂಡದ ಬೌಲರ್ ಒಬ್ಬರು ರಬ್ಡಾನ್ ತಂಡದ ಬ್ಯಾಟ್ಸ್ ಮನ್ ರನ್ನು ಔಟ್ ಮಾಡಿ ಸಂಭ್ರಮಿಸಿದರು.

Written by - Bhavishya Shetty | Last Updated : Sep 29, 2024, 06:48 PM IST
    • ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯ
    • ಕ್ರಿಕೆಟ್ ಲೀಗ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
    • MCC ವೀಕ್‌ಡೇಸ್ ಬ್ಯಾಷ್ ಲೀಗ್ ಕ್ರಿಕೆಟ್ ಅನ್ನು ಯುಎಇಯಲ್ಲಿ ಆಡಲಾಗುತ್ತಿದೆ
ಔಟ್‌ ಮಾಡಿದನೆಂದು ಸಿಟ್ಟಿಗೆದ್ದ ಬ್ಯಾಟ್ಸ್‌ಮನ್...‌ ಮೈದಾನದಲ್ಲೇ ಬೌಲರ್‌ನನ್ನು ನೆಲಕ್ಕೆಸೆದು ಹೊಡೆದ ಕ್ರಿಕೆಟಿಗ! ಶಾಕಿಂಗ್‌ ವಿಡಿಯೋ ವೈರಲ್ title=
Aerovisa Cricket Club and Rabdan Cricket Club

Aerovisa Cricket Club and Rabdan Cricket Club: ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯ. ಆಟಗಾರರ ನಡುವಿನ ಜಗಳದಂತಹ ದೃಶ್ಯಗಳು ಪ್ರತಿಯೊಂದು ಲೀಗ್‌ನಲ್ಲಿಯೂ ಕಂಡುಬರುತ್ತವೆ. ಆದರೆ, ಆಟಗಾರರ ನಡುವೆ ಹೊಡೆದಾಟದ ಪ್ರಕರಣಗಳು ವಿರಳವಾಗಿ ಕಂಡುಬರುತ್ತವೆ. ಈ ಮಧ್ಯೆ, ಕ್ರಿಕೆಟ್ ಲೀಗ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಾಕು: ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ದಿಢೀರ್ ಕರಗಿ ಹೋರಬರುತ್ತೆ! ಕಿಡ್ನಿ ಸ್ಟೋನ್‌ ಪುಡಿಯಾಗಲು ಸಹ ಇದು ರಾಮಬಾಣ!

MCC ವೀಕ್‌ಡೇಸ್ ಬ್ಯಾಷ್ ಲೀಗ್ ಕ್ರಿಕೆಟ್ ಅನ್ನು ಯುಎಇಯಲ್ಲಿ ಆಡಲಾಗುತ್ತಿದೆ. ಈ ಲೀಗ್‌ನಲ್ಲಿ ಏರೋವಿಸಾ ಕ್ರಿಕೆಟ್ ಮತ್ತು ರಬ್ಡಾನ್ ಕ್ರಿಕೆಟ್ ಕ್ಲಬ್ ನಡುವೆ ಪಂದ್ಯ ನಡೆಯಿತು. ಈ ವೇಳೆ ಏರೋವಿಸಾ ಕ್ರಿಕೆಟ್ ತಂಡದ ಬೌಲರ್ ಒಬ್ಬರು ರಬ್ಡಾನ್ ತಂಡದ ಬ್ಯಾಟ್ಸ್ ಮನ್ ರನ್ನು ಔಟ್ ಮಾಡಿ ಸಂಭ್ರಮಿಸಿದರು. ಆದರೆ ಈ ಸಂಭ್ರಮದಲ್ಲಿ ಬೌಲರ್, ಬ್ಯಾಟ್ಸ್ ಮನ್ ಮುಂದೆ ಬಂದು ಆಕ್ರಮಣಕಾರಿ ರೀತಿಯಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡಿ ಪೆವಿಲಿಯನ್ ಕಡೆಗೆ ಹೋಗುವಂತೆ ಹೇಳತೊಡಗಿದ. ಬೌಲರ್ ಹೀಗೆ ಸಂಭ್ರಮಿಸುತ್ತಿರುವುದನ್ನು ನೋಡಿ ಬ್ಯಾಟ್ಸ್ ಮನ್ ಕೂಡ ಸಂಯಮ ಕಳೆದುಕೊಂಡು, ಕಿತ್ತಾಡಿದ್ದಾರೆ. ಅಷ್ಟರಲ್ಲಿ ಇತರ ಸಹ ಆಟಗಾರರು ಮತ್ತು ಅಂಪೈರ್‌ಗಳು ಇಬ್ಬರು ಆಟಗಾರರನ್ನು ಬೇರ್ಪಡಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಈ ಹಾಸ್ಯ ನಟ..! ಈ ಬಾರಿ ದೊಡ್ಮನೆಯಲ್ಲಿ ನಗುವಿನ ರಸದೌತಣ..!

ಬ್ಯಾಟ್ಸ್‌ಮನ್ ಮತ್ತು ಬೌಲರ್ ಪರಸ್ಪರ ಹೊಡೆದಾಡಿಕೊಂಡಾಗ ನೆಲದ ಮೇಲೆ ಬಿದ್ದಾಗ, ಸಹ ಆಟಗಾರರು ಅವರನ್ನು ತಡೆಯಲು ಪ್ರಯತ್ನಿಸಿದರು. ಇಬ್ಬರು ಆಟಗಾರರ ನಡುವೆ ಹೇಗೆ ಜಿದ್ದಾಜಿದ್ದಿನ ವಿಡಿಯೋ ವೈರಲ್‌ ಆಗಿದೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News