ನಿಮ್ಮ ಫೈನಾನ್ಸಿಯಲ್ ಡೇಟಾವನ್ನೇ ಕದಿಯುತ್ತವೆ ಈ 5 appಗಳು ! ಡೌನ್ ಲೋಡ್ ಮಾಡಿದ್ದರೆ ಈಗಲೇ ಡಿಲೀಟ್ ಮಾಡಿ !
ಈ ವೈರಸ್ ಕಂಪ್ಯೂಟರ್ ಮತ್ತು ಮೊಬೈಲ್‌ಗಳಿಂದ ಜನರ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. ಈ ಆ್ಯಪ್‌ಗಳನ್ನು ಇಲ್ಲಿಯವರೆಗೆ 150,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು : ಐದು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅನತ್ಸಾ (Anatsa) ಎಂಬ ಅಪಾಯಕಾರಿ ವೈರಸ್ ಅಡಗಿಕೊಂಡಿದೆ ಎನ್ನುವುದನ್ನು ಕೆಲವು ಸಂಶೋಧಕರು ಕಂಡುಕೊಂಡಿದ್ದಾರೆ. ಈ ವೈರಸ್ ಕಂಪ್ಯೂಟರ್ ಮತ್ತು ಮೊಬೈಲ್‌ಗಳಿಂದ ಜನರ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. ಈ ಆ್ಯಪ್‌ಗಳನ್ನು ಇಲ್ಲಿಯವರೆಗೆ 150,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ವಂಚನೆ ಪತ್ತೆ ಕಂಪನಿ ಥ್ರೆಟ್‌ಫ್ಯಾಬ್ರಿಕ್‌ನ (ThreatFabric) ಸಂಶೋಧಕರು ನವೆಂಬರ್‌ನಿಂದ Anatsaದ ಹೆಚ್ಚಿನ ಬಳಕೆಯನ್ನು ಪತ್ತೆ ಹಚ್ಚಿದ್ದಾರೆ.
ವರದಿಯ ಪ್ರಕಾರ, ಅನತ್ಸಾ ಹೆಸರಿನ ವೈರಸ್ ಯುರೋಪ್‌ನಲ್ಲಿ ಅನೇಕ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಜನರ ಬ್ಯಾಂಕ್ ಖಾತೆಗಳನ್ನು ಕದಿಯುತ್ತಿದೆ. ಈ ಅಪ್ಲಿಕೇಶನ್‌ಗಳು Google Play ನಲ್ಲಿ ಮಾತ್ರ ಲಭ್ಯವಿದ್ದು ಅಸಲಿಯಂತೆ ಕಾಣಿಸುತ್ತದೆ. ಈ ವೈರಸ್ ಹರಡಲು ಹಲವು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಅಪಾಯವು ಮತ್ತಷ್ಟು ಹೆಚ್ಚುತ್ತಿದೆ. ಬ್ರಿಟನ್, ಜರ್ಮನಿ, ಸ್ಪೇನ್, ಸ್ಲೋವಾಕಿಯಾ, ಸ್ಲೊವೇನಿಯಾ ಮತ್ತು ಜೆಕ್ ರಿಪಬ್ಲಿಕ್ ನಲ್ಲಿ ಈ ವೈರಸ್ ಹರಡಲು ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ : WhatsApp ತಂದಿದೆ 4 ಹೊಸ ಟೆಕ್ಸ್ಟ್ ಫಾರ್ಮ್ಯಾಟ್ : ಇವುಗಳಲ್ಲಿ ಶಾರ್ಟ್ ಕಟ್ ಕೂಡಾ ಲಭ್ಯ
ಇದು ಬಳಕೆದಾರರ ಮೇಲೆ ಹೇಗೆ ದಾಳಿ ಮಾಡುತ್ತದೆ? :
ವರದಿಯ ಪ್ರಕಾರ, ವೈರಸ್‌ಗಳನ್ನು ಹರಡುವ ಈ ಮೋಸದ ಅಪ್ಲಿಕೇಶನ್‌ಗಳು ಪ್ರತಿ ಬಾರಿಯೂ ವಿವಿಧ ದೇಶಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ವಂಚಕರು Google Play ನಲ್ಲಿ ಹೆಚ್ಚು ಡೌನ್‌ಲೋಡ್ ಮಾಡಿದ ಉಚಿತ ಅಪ್ಲಿಕೇಶನ್‌ಗಳಂತೆ ಕಾಣುವ ಅಪ್ಲಿಕೇಶನ್‌ಗಳನ್ನು ರಚಿಸುತ್ತಾರೆ. ಈ ಅಪ್ಲಿಕೇಶನ್‌ಗಳು ಅಸಲಿಯಂತೆ ಕಾಣಿಸುವುದರಿಂದ ಜನ ಮೋಸ ಹೋಗುತ್ತಾರೆ.
ಸಂಶೋಧಕರ ಪ್ರಕಾರ, ಈ ಅಪಾಯಕಾರಿ ಅಪ್ಲಿಕೇಶನ್‌ಗಳು ಈಗ ಮೊದಲಿಗಿಂತ ಹೆಚ್ಚು ಸ್ಮಾರ್ಟ್ ಆಗಿವೆ. ಇದು ಬೇರೆ ಬೇರೆ ವಿಧಾನಗಳ ಮೂಲಕ ನಿಮ್ಮ ಮೊಬೈಲ್ ಅನ್ನು ಪ್ರವೇಶಿಸುತ್ತದೆ. ನಂತರ ವಿಶೇಷ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ, ಮೊಬೈಲ್‌ಗಳ ಸುರಕ್ಷತೆಯನ್ನು ಮುರಿಯುತ್ತಾರೆ. ನಕಲಿ PDF ಅಪ್ಲಿಕೇಶನ್‌ಗಳು ಮತ್ತು ನಿಮ್ಮ ಮೊಬೈಲ್‌ನಲ್ಲಿ ಸಪ್ಚೆ ಖಾಲಿ ಮಾಡುವ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ.
ಇದನ್ನೂ ಓದಿ : 2027ರವರೆಗೆ AI ಬೇಡಿಕೆ ಶೇ. 15ರಷ್ಟು ಬೆಳೆಯುವ ನಿರೀಕ್ಷೆ
ವರದಿಗಳ ಪ್ರಕಾರ, ಗೂಗಲ್ ತನ್ನ ಅಧಿಕೃತ ಆಂಡ್ರಾಯ್ಡ್ ಸ್ಟೋರ್‌ನಿಂದ ಅನತ್ಸಾ ಹೆಸರಿನ ವೈರಸ್ ಸೋಂಕಿತ ಎಲ್ಲಾ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ.
ಐದು ಅಪಾಯಕಾರಿ ಅಪ್ಲಿಕೇಶನ್‌ಗಳು:
ಫೋನ್ ಕ್ಲೀನರ್ - ಫೈಲ್ ಎಕ್ಸ್‌ಪ್ಲೋರರ್ (com.volabs.androidcleaner)
PDF ವ್ಯುವರ್ - ಫೈಲ್ ಎಕ್ಸ್‌ಪ್ಲೋರರ್ (com.xolab.fileexplorer)
PDF ರೀಡರ್ - ವ್ಯುವರ್ ಅಂಡ್ ರೀಡರ್ (com.jumbodub.fileexplorerpdfviewer)
ಫೋನ್ ಕ್ಲೀನರ್: ಫೈಲ್ ಎಕ್ಸ್‌ಪ್ಲೋರರ್ (com.appiclouds)
PDF ರೀಡರ್: ಫೈಲ್ ಮ್ಯಾನೇಜರ್ (com.tragisoap.fileandpdfmanager)
ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಜನರ ಸಂಖ್ಯೆಯು 200,000 ಕ್ಕೆ ಹತ್ತಿರವಾಗಬಹುದು ಎಂದು Google ಹೇಳುತ್ತದೆ. ನೀವು ಈ ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ಡೌನ್‌ಲೋಡ್ ಮಾಡಿದ್ದರೆ, ತಕ್ಷಣ ಅವುಗಳನ್ನು ನಿಮ್ಮ ಫೋನ್‌ನಿಂದ ಡಿಲೀಟ್ ಮಾಡಿ ನಿಮ್ಮ ಪಾಸ್‌ವರ್ಡ್ ಅನ್ನು ಚೇಂಜ್ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.