IRCTC App: ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ಪ್ರಕ್ರಿಯೆ

IRCTC App: ನೀವು ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಲು ಯೋಜಿಸಿದರೆ,  ದೂರದ ಪ್ರಯಾಣಕ್ಕಾಗಿ ತತ್ಕಾಲ್ ಮೂಲಕ ತಕ್ಷಣವೇ ನಿಮ್ಮ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ನೀವು ಕ್ಷಣಮಾತ್ರದಲ್ಲಿ, ರೈಲು ಟಿಕೆಟ್‌ಗಳನ್ನು ತ್ವರಿತವಾಗಿ ಬುಕ್ ಮಾಡುವ ಸುಲಭ ವಿಧಾನ ಇಲ್ಲಿದೆ. 

Written by - Yashaswini V | Last Updated : Feb 21, 2024, 08:10 AM IST
  • ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು
  • ನೀವು ಕೆಲವೇ ನಿಮಿಷಗಳಲ್ಲಿ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು
  • ವಾಸ್ತವವಾಗಿ, ಪ್ರಯಾಣಕ್ಕೆ ಒಂದು ದಿನ ಮೊದಲು ತತ್ಕಾಲ್ ಟಿಕೆಟ್ ವಿಂಡೋ ತೆರೆಯುತ್ತದೆ.
IRCTC App: ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ಪ್ರಕ್ರಿಯೆ title=

IRCTC App: ಆರಾಮದಾಯಕ ಮತ್ತು ಅಗ್ಗದ ಪ್ರಯಾಣಕ್ಕೆ ಭಾರತೀಯ ರೈಲ್ವೆ ಹೆಸರುವಾಸಿಯಾಗಿದೆ. ನೀವು ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಷನ್ ಮತ್ತು ವೆಬ್‌ಸೈಟ್ ಮೂಲಕ ಎಲ್ಲಿಂದಲಾದರೂ ರೈಲ್ವೆ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ಆದರೆ, ಕೆಲವೊಮ್ಮೆ ಪೂರ್ವಯೋಜನೆ ಇಲ್ಲದೆ ದಿಢೀರನೆ ಎಲ್ಲಾದರೂ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದರೂ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ 'ತತ್ಕಾಲ್ ಟಿಕೆಟ್ ಬುಕ್ಕಿಂಗ್' ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ತತ್ಕಾಲ್ ಟಿಕೆಟ್: 
'ತತ್ಕಾಲ್ ಟಿಕೆಟ್ ಬುಕ್ಕಿಂಗ್' ವ್ಯವಸ್ಥೆಯ ಮೂಲಕ ಪ್ರಯಾಣಿಕರು ಪ್ರಯಾಣದ ಒಂದು ದಿನದ ಮೊದಲು ಟಿಕೆಟ್ ಖರೀದಿಸಿದರೂ ಕೊಡ ಸುಲಭವಾಗಿ ಸೀಟ್ ಕನ್ಫರ್ಮ್ ಮಾಡಿಕೊಳ್ಳಬಹುದು. ಆದರೆ, ಬಹುತೇಕ ಪ್ರಯಾಣಿಕರು ಐಆರ್‌ಸಿಟಿಸಿಯ ತತ್ಕಾಲ್ ವ್ಯವಸ್ಥೆಯ ಮೂಲಕವೂ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ. ವಾಸ್ತವವಾಗಿ, ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಮಾಡುವ ಕೆಲವು ತಪ್ಪುಗಳು ಇದಕ್ಕೆ ಕಾರಣವಾಗಿರಬಹುದು. 

ಇದನ್ನೂ ಓದಿ- WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ

ಗಮನಾರ್ಹವಾಗಿ, ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅವುಗಳೆಂದರೆ... 
* . ತತ್ಕಾಲ್ ವ್ಯವಸ್ಥೆಯ ಮೂಲಕ ಟಿಕೆಟ್ ಕಾಯ್ದಿರಿಸಲು, ನೀವು ಪ್ರಯಾಣಿಸುವ ಒಂದು ದಿನ ಮೊದಲು ಟಿಕೆಟ್ ಕಾಯ್ದಿರಿಸಬೇಕು. ಉದಾಹರಣೆಗೆ, ನೀವು ಫೆಬ್ರವರಿ 23ಕ್ಕೆ ರೈಲು ಟಿಕೆಟ್ ಕಾಯ್ದಿರಿಸಲು ಬಯಸಿದರೆ, ನಂತರ ನೀವು ಒಂದು ದಿನ ಮುಂಚಿತವಾಗಿ ಎಂದರೆ ಫೆಬ್ರವರಿ 22 ರಂದು ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಬೇಕಾಗುತ್ತದೆ. 
*  ಹೆಚ್ಚುವರಿಯಾಗಿ, ತತ್ಕಾಲ್‌ನಲ್ಲಿ ಎಸಿ ಕೋಚ್‌ಗಳಿಗೆ ಟಿಕೆಟ್ ಬುಕಿಂಗ್ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ
* ಅಂತೆಯೇ ನಾನ್ ಎಸಿ(ಎಸಿ ಅಲ್ಲದ) ಕೋಚ್‌ಗಳಿಗೆ ಟಿಕೆಟ್ ಬುಕಿಂಗ್ ವಿಂಡೋ ಬೆಳಿಗ್ಗೆ 11 ಗಂಟೆಗೆ ತೆರೆಯುತ್ತದೆ. ಈ ಬಗ್ಗೆ ವಿಶೇಷ ಗಮನ ಅಗತ್ಯವಾಗಿರುತ್ತದೆ. 

ಇದನ್ನೂ ಓದಿ- YouTube ವೀಡಿಯೊದಿಂದ ತಮಾಷೆಯ GIF ರಚಿಸಲು ಬಹಳ ಪ್ರಯೋಜನಕಾರಿ ಈ ಟೂಲ್ಸ್

ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ? 
* ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ತೆರೆಯಿರಿ .
* ಬಳಿಕ ಐ‌ಆರ್‌ಸಿ‌ಟಿ‌ಸಿ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿ. 
* ಒಂದೊಮ್ಮೆ ನೀವು ಐ‌ಆರ್‌ಸಿ‌ಟಿ‌ಸಿ ಖಾತೆಯನ್ನು ಹೊಂದಿಲ್ಲದಿದ್ದರೆ, ನಂತರ "ಸೈನ್ ಅಪ್" ಕ್ಲಿಕ್ ಮಾಡುವ ಮೂಲಕ ಖಾತೆಯನ್ನು ರಚಿಸಿ ಲಾಗ್ ಇನ್ ಆಗಿ. 
* ಈಗ ನೀವು ಅಪ್ಲಿಕೇಶನ್‌ನಲ್ಲಿ ಬುಕ್ ಟಿಕೆಟ್ ಆಯ್ಕೆಯನ್ನು ನೋಡುತ್ತೀರಿ.
* ಇಲ್ಲಿ ನೀವು "ತತ್ಕಾಲ್" ಬುಕಿಂಗ್ ಆಯ್ಕೆಯನ್ನು ನೋಡುತ್ತೀರಿ.
*  ಈಗ ವಿಂಡೋದಲ್ಲಿ ಗೋಚರಿಸುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಗಮ್ಯಸ್ಥಾನ ನಿಲ್ದಾಣ, ಪ್ರಯಾಣದ ದಿನಾಂಕ, ರೈಲು ಮತ್ತು ವರ್ಗ ಇತ್ಯಾದಿ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. 
* ಅಗತ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಪೇಮೆಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
* ನಂತರ ನೀವು ಕ್ರೆಡಿಟ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ನಿಮ್ಮ ಪಾವತಿಯನ್ನು ಪೂರ್ಣಗೊಳಿಸಿ. 
* ಪೇಮೆಂಟ್ ಆದ ಕೂಡಲೇ ಟಿಕೆಟ್ ಬುಕ್ ಆಗುತ್ತದೆ. ಬಳಿಕ ನೀವು ಇ-ಟಿಕೆಟ್ ಅನ್ನು ಡೌನ್‌ಲೋಡ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News