ನವದೆಹಲಿ: Malware Attack-ಒಂದು ವೇಳೆ ನೀವೂ ಕೂಡ ನಿಮ್ಮ ಉಪಯೋಗಕ್ಕಾಗಿ Google Chrome, Firefox ಅಥವಾ ಇಂತಹ ಯಾವುದಾದರೊಂದು ವೆಬ್ ಬ್ರೌಸರ್ ಗಳ ಬಳಕೆ ಮಾಡುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ Microsoft ಈ ಕುರಿತು ಎಚ್ಚರಿಕೆ ನೀಡಿದೆ. ಈ ವೆಬ್ ಬ್ರೌಸರ್ ಗಳಲ್ಲಿ ಮಾಲ್ವೇಯರ್ ಪತ್ತೆಯಾಗಿದೆ ಎಂದು ಕಂಪನಿ ಹೇಳಿದೆ. ಇದರಿಂದ ನಿಮ್ಮ ಮಾಹಿತಿ ಅಪಾಯದಲ್ಲಿದೆ ಎಂದು ಕಂಪನಿ ಹೇಳಿದೆ


COMMERCIAL BREAK
SCROLL TO CONTINUE READING

ಪತ್ತೆಯಾದ ಮಾಲ್ವೇಯರ್ ಯಾವುದು?
Adrozek ಹೆಸರಿನ ಈ ಮಾಲ್ವೇಯರ್ (Malware) ಈ ವರ್ಷದ ಮೇ ತಿಂಗಳಿನಲ್ಲಿ ಪ್ರತ್ಯಕ್ಷವಾಗಿದೆ ಹಾಗೂ ಆಗಸ್ಟ್ ವರೆಗೆ ಇದು ನಿತ್ಯ ಸುಮಾರು 30 ಸಾವಿರಕ್ಕೂ ಅಧಿಕ ಡಿವೈಸ್ ಗಳ ಮೇಲೆ ದಾಳಿ ನಡೆಸಿದೆ. Microsoft ಈ ವರ್ಷ ಸುಮಾರು 159 ವಿಶಿಷ್ಠ ಡೊಮೇನ್ ಗಳನ್ನು ಟ್ರ್ಯಾಕ್ ಮಾಡಿದ್ದು, ಇವು ಸರಾಸರಿ 17300 URLಗಳನ್ನು ನಿರ್ವಹಿಸುತ್ತವೆ.


ಇದರಿಂದ ಯಾವ ಅಪಾಯ?
ಹುಡುಕಾಟ ಫಲಿತಾಂಶಗಳಲ್ಲಿ ಮಾಲ್ವೇರ್-ಒಳಗೊಂಡಿರುವ ಜಾಹೀರಾತುಗಳನ್ನು ಒದಗಿಸುವ ಮೂಲಕ ಬಳಕೆದಾರರನ್ನು ಸಂಬಂಧಿತ ಪುಟಕ್ಕೆ ಕರೆದೊಯ್ಯುವುದು ಹೊಸ ಮಾಲ್ವೇರ್ ಅಭಿಯಾನದ ಅಂತಿಮ ಉದ್ದೇಶವಾಗಿದೆ. ಆದರೆ, ಇದನ್ನು ಪ್ರಾರಂಭಿಸಲು, ಮಾಲ್‌ವೇರ್ ಕೆಟ್ಟ ಬ್ರೌಸರ್ ಎಕ್ಸ್ಟೆನ್ಶನ್ ಗಳನ್ನು ಜೋಡಿಸುತ್ತದೆ  ಮತ್ತು ವೆಬ್‌ಪುಟಗಳಲ್ಲಿ ಜಾಹೀರಾತುಗಳನ್ನು ಇರಿಸಲು ಬ್ರೌಸರ್ ಸೆಟ್ಟಿಂಗ್‌ಗಳನ್ನು ಬದಲಾಯಿಸುತ್ತದೆ.


ಈ ಕುರಿತು ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿರುವ Microsoft 365 ಡಿಫೆಂಡರ್ ಸಂಶೋಧನಾ ತಂಡ, ಸರಿಯಾಗಿರುವ ಪ್ರೊಗ್ರಾಮ್ ನ ದುರ್ಬಳಕೆ ಸೈಬರ್ ಕ್ರಿಮಿನಲ್ ಗಳ ಹೊಸ ಕೆಲಸವಲ್ಲವಾದರೂ, ಇಂತಹ ಅಭಿಯಾನವು ಮಾಲ್‌ವೇರ್ ತುಣುಕನ್ನು ಬಳಸಿದ್ದು ಅದು ಅನೇಕ ಬ್ರೌಸರ್‌ಗಳ ಮೇಲೆ ಪರಿಣಾಮ ಬೀರುತ್ತಿದೆ. ಮಾಲ್ವೇರ್ ವೆಬ್‌ಸೈಟ್ ಕ್ರೆಡೆನ್ಸಿಯಲ್ಸ್ ಗಳನ್ನು ವಿಸ್ತರಿಸಿ,  ಬಳಕೆದಾರರಿಗೆ ಹೆಚ್ಚುವರಿ ಅಪಾಯವನ್ನು ತರುತ್ತದೆ ಎಂದು ಹೇಳಿದೆ.


ಇದನ್ನು ಓದಿ- Zoom, Google Meet ಹಿಂದಿಕ್ಕಲು Microsoft Teams ಮೇಲೆ 24 ಗಂಟೆ ಉಚಿತ ಧ್ವನಿ & ವಿಡಿಯೋ ಕರೆ ಸೌಕರ್ಯ


ಇದು ಹೇಗೆ ಡೌನ್ಲೋಡ್ ಆಗುತ್ತದೆ?
Adrozek ಈ ಹಿಂದಿನ ಮಾಲ್ವೇಯರ್ ಅಪಾಯಗಳಿಗಿಂತ ಭಿನ್ನವಾಗಿದೆ. ಇದು ಡ್ರೈವ್-ಬಾಯ್ ಡೌನ್ಲೋಡ್ ಡಿವೈಸ್ ಗಳ ಮೇಲೆ ಸ್ಥಾಪಿತಗೊಳ್ಳುತ್ತದೆ. ಇದರ ಇನ್ಸ್ಟಾಲರ್ setup.exe ಸೆಟ್ ಅಪ್ ಫೈಲ್ ಅನ್ನು ತಾತ್ಕಾಲಿಕ  ಫೋಲ್ಡರ್ ಗೆ  ಸೇರುತ್ತದೆ. ಬಳಿಕ ಇದು ಪ್ರೊಗ್ರಾಮ್ ಫೈಲ್ ಫೋಲ್ಡರ್ ನಲ್ಲಿ ಪ್ರಮುಖ ಪೆಲೋಡ್ ಅನ್ನು ಬಿಡುತ್ತದೆ. ಇದು ನೋಡಲು ಒಂದು ಸಾಮಾನ್ಯ ಆಡಿಯೋ ಸಂಬಂಧಿತ ಸಾಫ್ಟ್ ವೇರ್ ನಂತೆಯೇ ಇರುತ್ತದೆ.


ಇದನ್ನು ಓದಿ-Surface Duo ಸ್ಮಾರ್ಟ್ ಫೋನ್ ಬಿಡುಗಡೆಗೆ ಮುಂದಾದ Microsoft,ಬೆಲೆ ಎಷ್ಟು ಗೊತ್ತಾ?


Microsoft ತಂಡ ಇದನ್ನು ವಿಶೇಷವಾಗಿ Google Chrome ಬ್ರೌಸರ್ ನಲ್ಲಿ ಪತ್ತೆ ಮಾಡಿದೆ. ಇದು ಸಾಮಾನ್ಯವಾಗಿ ಡಿಫಾಲ್ಟ್ " ಕ್ರೋಮ್ ಮಿಡಿಯಾ ರೌಟರ್' ಎಕ್ಸ್ಟೆನ್ಶನ್ ಅನ್ನದು ಪ್ರಭಾವಿತಗೊಳಿಸುತ್ತದೆ. ಇದೆ ರೀತಿ Microsoft Edge ಹಾಗೂ Yandex Browserನಲ್ಲಿಯೂ ಕೂಡ ರೇಡಿಯೋ ಪ್ಲೇಯರ್ ಗಳಂತಹ ಸಕ್ರಮ ಎಕ್ಸ್ ಟೆನ್ಶನ್ ಗಳ ಬಳಕೆ ಮಾಡುತ್ತದೆ.