ವಾಶಿಂಗ್ಟನ್: ಒಂದೆಡೆ ಕೊರೊನಾ ವೈರಸ್ ಕಾರಣ ಇಡೀ ವಿಶ್ವದ ಮೇಲೆ ಆರ್ಥಿಕ ಬಿಕ್ಕಟ್ಟಿನ ಕಾರ್ಮೋಡಗಳು ಕವಿದಿದ್ದರೆ, ಇನ್ನೊಂದೆಡೆ ಈ ಆರ್ಥಿಕ ಹಿನ್ನಡೆಯ ನಡುವೆಯೇ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ತನ್ನ ಅತ್ಯಂತ ಬಲಿಷ್ಠ ಆದರೆ ತುಂಬಾ ದುಬಾರಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಹೌದು, ಪುನಃ ಮೈಕ್ರೋಸಾಫ್ಟ್ ಸ್ಮಾರ್ಟ್ಫೋನ್ ಉದ್ಯಮಕ್ಕೆ ಇಳಿಯಲಿದೆ. ಇತ್ತೀಚೆಗಷ್ಟೇ ಕಂಪನಿ ತನ್ನ ಡ್ಯುಯೆಲ್ ಅಂಡ್ರಾಯಿಡ್ ಫೋನ್ ಆಗಿರುವ ಸರ್ಫೇಸ್ ಡ್ಯುಓ ಪ್ರಸ್ತುತಪಡಿಸಿತ್ತು.
1.04 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ.
ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಮೈಕ್ರೋಸಾಫ್ಟ್ ನ ಸರ್ಫೇಸ್ ಡ್ಯುಓ ಸ್ಮಾರ್ಟ್ ಫೋನ್ ನ ಬೆಲೆ 1,300 ಡಾಲರ್ ನಿಗದಿಪಡಿಸಲಾಗಿದೆ. ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1.04 ಲಕ್ಷ ರೂ.ಗಳಷ್ಟಾಗಿದೆ ಎನ್ನಲಾಗಿದೆ. ಪ್ರಸ್ತುತ iPhone 12 Pro ಬೆಲೆ 999 ಡಾಲರ್ ಇದೆ. ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ರೂ.74,712 ರಷ್ಟಿದ್ದು, ಇದು ಮೈಕ್ರೋಸಾಫ್ಟ್ ಫೋನ್ ಗೆ ಹೋಲಿಸಿದರೆ ಕಡಿಮೆಯಾಗಿದೆ. ಈ ಕುರಿತು ಬಿಡುಗಡೆಯಾಗಿರುವ ಅಧಿಕೃತ ಹೇಳಿಕೆಯ ಪ್ರಕಾರ ಈಗಾಗಲೇ ಮೈಕ್ರೋಸಾಫ್ಟ್ ಈ ಸ್ಮಾರ್ಟ್ ಫೋನ್ ಗಾಗಿ ಆರ್ಡರ್ ಪಡೆಯಲು ಆರಂಭ್ಸಿದ್ದು, ಡಿಲೆವರಿ ಅನ್ನು ಮುಂದಿನ ತಿಂಗಳಿನಿಂದ ಆರಂಭಿಸಲಿದೆ ಎನ್ನಲಾಗಿದೆ. ಹಿಂದಿನ ಸಾಂಪ್ರದಾಯಿಕ ಡಿವೈಸ್ ಗಳ ಹೋಲಿಕೆಯಲ್ಲಿ ಈ ಡಿವೈಸ್ ಅತ್ಯಂತ ಅಡ್ವಾನ್ಸ್ಡ್ ಉಪಕರಣವನ್ನಾಗಿ ಪರಿಚಯಿಸುವ ಯೋಜನೆ ರೂಪಿಸಿದೆ. ಈ ಸ್ಮಾರ್ಟ್ ಫೋನ್ ಅನ್ನು ಪ್ರಸ್ತುತಪಡಿಸಿರುವ ಕಂಪನಿಯ ಸಿಇಓ ಸತ್ಯಾ ನಾಡೆಲ್ಲಾ, ಇದರ ಮಲ್ಟಿಟಾಸ್ಕಿಂಗ್ ಗಳ ಪ್ರದರ್ಶನ ನಡೆಸಿದ್ದಾರೆ. ಒಂದು ಸ್ಕ್ರೀನ್ ಮೇಲೆ ಅವರು ಬರೆಯುತ್ತಿದ್ದರೆ, ಡಿವೈಸ್ ನ ಮತ್ತೊಂದು ಸ್ಕ್ರೀನ್ ಮೇಲೆ ಅವರು ಅಮೆಜಾನ್ ನ ಕಿಂಡಲ್ ಆಪ್ ನಲ್ಲಿ ಪುಸ್ತಕ ಓದುತ್ತಿದ್ದರು.
ಸರ್ಫೇಸ್ ಡ್ಯುವೋ ಸ್ಮಾರ್ಟ್‌ಫೋನ್ ಎರಡು 5.6-ಇಂಚಿನ ಡಿಸ್ಪ್ಲೇಗಳನ್ನು ಹೊಂದಿದೆ. ಫೋನ್ ಪುಸ್ತಕದಂತೆ ತೆರೆದಾಗ, ಅದು 4.8 ಮಿಮೀ ದಪ್ಪವಾಗಿರುತ್ತದೆ ಮತ್ತು ಪರದೆಯು 8.1 ಇಂಚುಗಳಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ತೆಳ್ಳನೆಯ ಸ್ಮಾರ್ಟ್ ಫೋನ್ ಗಾಗೈಲಿದೆ ಎಂದು ಕಂಪನಿ ಹೇಳಿದೆ. ಮೈಕ್ರೋಸಾಫ್ಟ್ ಎಂಜಿನಿಯರ್‌ಗಳು ಸ್ಯಾಮ್‌ಸಂಗ್‌ನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನಂತಹ ಒಂದೇ ಮಡಚುವ ಪರದೆಯನ್ನು ಇಡದೆ, ಸರ್ಫೇಸ್ ಡ್ಯುಯೊದಲ್ಲಿ ಎರಡು ಡಿಸ್ಪ್ಲೇ ಗಳನ್ನು ಒಂದು ಹಿಂಜ್ ಮೂಲಕ ಜೋಡಿಸಿದ್ದಾರೆ. ಈ ಫೋನ್ f/2.0 ಜೊತೆಗೆ 11 ಮೆಗಾಪಿಕ್ಸೆಲ್ ನ ಸಿಂಗಲ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 5G ಸಪೋರ್ಟ್ ನೀಡಲಾಗಿಲ್ಲ, ಇದೊಂದು ಅಂಡ್ರಾಯಿಡ್ ಆಧಾರಿತ ಸ್ಮಾರ್ಟ್ ಫೋನ್ ಆಗಿದೆ. ಇದಕ್ಕಾಗಿ ಗೂಗಲ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿ ಹಲವು ಆಪ್ ಗಳನ್ನು ನೀಡುತ್ತಿದೆ