ಬೆಂಗಳೂರು : ಮಧ್ಯಮ ಗಾತ್ರದ SUVಗಳ ಜನಪ್ರಿಯತೆ  ಹೆಚ್ಚುತ್ತಿದೆ.  ಪ್ರಸ್ತುತ, ಹ್ಯುಂಡೈ ಕ್ರೆಟಾ ಕಾರುಗಳು ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸ್ಪರ್ಧೆಯು ಮತ್ತಷ್ಟು ಹೆಚ್ಚಾಗತೊಡಗಿದೆ. ಏಕೆಂದರೆ ಅನೇಕ ಹೊಸ ಮಾದರಿಗಳುಕೂಡಾ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಸಿಟ್ರೊಯೆನ್ C3 ಏರ್‌ಕ್ರಾಸ್, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮತ್ತು ಹೋಂಡಾ ಎಲಿವೇಟ್ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿವೆ. ಇದು ಹುಂಡೈ ಕ್ರೆಟಾಗೆ ಸ್ಪರ್ಧೆಯೊಡ್ಡಲಿದೆ. 


COMMERCIAL BREAK
SCROLL TO CONTINUE READING

ಸಿಟ್ರೋನ್ C3 ಏರ್ಕ್ರಾಸ್ : 
ಸಿಟ್ರೊಯೆನ್ ಏಪ್ರಿಲ್ 2023 ರಲ್ಲಿ C3 ಏರ್‌ಕ್ರಾಸ್ ಮಧ್ಯಮ ಗಾತ್ರದ SUV ಅನ್ನು ದೇಶದಲ್ಲಿ ಪರಿಚಯಿಸಿತು. ಹೊಸ ಮಾದರಿಯನ್ನು ಸಿಟ್ರೊಯೆನ್ನ CMP ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದನ್ನು ಟು ಸೀಟಿಂಗ್ ಲೇ ಔಟ್, 5 ಮತ್ತು 7 ಸೀಟಿಂಗ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ.  ಇದರ ಉದ್ದ ಸುಮಾರು 4.3 ಮೀಟರ್. ಈ SUVಯ ಗ್ರೌಂಡ್ ಕ್ಲಿಯರೆನ್ಸ್ 200mm ಆಗಿದೆ. 


ಇದನ್ನೂ ಓದಿ : ಈಗ WhatsAppನಲ್ಲಿ ಕಳುಹಿಸುವ ಬ್ಲರ್ ಫೋಟೋ ಕೂಡಾ HD ಕ್ವಾಲಿಟಿಯದ್ದಾಗುತ್ತದೆ ! ಈ ಬಟನ್ ಒತ್ತಿದರೆ ಸಾಕು


ಇದು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ನೊಂದಿಗೆ ಬರುತ್ತದೆ. ಇದು 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 110bhp ಮತ್ತು 190Nm ಅನ್ನು ಜನರೇಟ್ ಮಾಡುತ್ತದೆ. ಟ್ರಾ ನ್ಸ್ಮಿಶನ್ ಗಾಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಬರುತ್ತದೆ.


ಹೊಸ KIA ಸೆಲ್ಟೋಸ್ : 
ಜುಲೈ ಅಥವಾ ಆಗಸ್ಟ್ 2023 ರ ವೇಳೆಗೆ, Kia ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು  ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೊಸ ಮಾದರಿಯು ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಹೊಸ ಕಿಯಾ ಸೆಲ್ಟೋಸ್ ನವೀಕರಿಸಿದ ವಿನ್ಯಾಸ ಮತ್ತು ಹೊಸ ಟರ್ಬೊ ಪೆಟ್ರೋಲ್ ಎಂಜಿನ್  ಹೊಂದಿರುವ ನಿರೀಕ್ಷೆಯಿದೆ. 


ಇದನ್ನೂ ಓದಿ : ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ಸ್ಮಾರ್ಟ್ ಟಿವಿ ! ಕೇವಲ 11 ಸಾವಿರ ರೂ. ವೆಚ್ಚದಲ್ಲಿ ಮನೆಯಾಗುತ್ತದೆ ಹೋಮ್ ಥಿಯೇಟರ್


ಇದು ಪನೋರಮಿಕ್ ಸನ್‌ರೂಫ್ ಮತ್ತು ADAS ತಂತ್ರಜ್ಞಾನವನ್ನು ಪಡೆಯಲಿದೆ.  ಬ್ರಾಂಡ್ new ದಿಸೈನ್ದ್  ಲ್ಯಾಂಗ್ವೇಜ್ ಅನ್ನು ಈ ಹೊಸ ಮಾದರಿಯಲ್ಲಿ ಕಾಣಬಹುದು. ಇದು 1.5L NA ಪೆಟ್ರೋಲ್ ಮತ್ತು 1.5L ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ಈ ಕಾರನ್ನು ಪರಿಚಯಿಸುವ ಸಾಧ್ಯತೆ ಹೆಚ್ಚಿದೆ. SUV 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಬಹುದು. ಇದು 158bhp ಮತ್ತು 253Nm ಅನ್ನು  ಜನರೇಟ್ ಮಾಡುತ್ತದೆ. 


ಹೋಂಡಾ ಎಲಿವೇಟ್ : 
ಇತ್ತೀಚೆಗೆ ಪರಿಚಯಿಸಲಾದ ಹೋಂಡಾ ಎಲಿವೇಟ್ ಹಬ್ಬದ ಋತುವಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಹೊಸ ಎಸ್‌ಯುವಿಯ ಬುಕಿಂಗ್ ಜುಲೈನಲ್ಲಿ ಪ್ರಾರಂಭವಾಗಲಿದೆ. ಇದು  ಫಿಫ್ತ್ ಜನರೇಶನ್ ನ ಸಿಟಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದರ ಎಲೆಕ್ಟ್ರಿಕ್  ಪ್ರಾಡಕ್ಟ್  2025-26 ರ ವೇಳೆಗೆ ಬರಲಿದೆ. 


ಇದನ್ನೂ ಓದಿ : ಮಾರುಕಟ್ಟೆಗೆ ಬಂತು ಬಹು ನಿರೀಕ್ಷಿತ Maruti Jimny!ಬೆಲೆ ಕೇವಲ ಇಷ್ಟೇ


ಹೊಸ ಹೋಂಡಾ ಎಲಿವೇಟ್ 1.5-ಲೀಟರ್ NA ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, ಇದು 121PS ಪವರ್ ಮತ್ತು 145Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಟೆಪ್  CVT  ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನೊಂದಿಗೆ ಬರಲಿದೆ.