Ultraviolette F77 Booking and Features: ಬೆಂಗಳೂರಿನ ಎಲೆಕ್ಟ್ರಿಕ್ ವಾಹನ ತಯಾರಕ ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಬೈಕ್ ಗೆ ಅಲ್ಟ್ರಾವೈಲೆಟ್ ಎಫ್ 77 ಎಂದು ಹೆಸರಿಸಲಾಗಿದೆ. ಬೈಕ್ ಪ್ರಿಯರು ಬಹಳ ದಿನಗಳಿಂದ ಈ ಬೈಕ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಬೈಕ್ ತಯಾರಿಸುವುದಕ್ಕೂ ಮೊದಲು, ಅದರ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿಯೇ ಕಂಪನಿ ಐದು ವರ್ಷಗಳನ್ನು ತೆಗೆದುಕೊಂಡಿದೆ. ಇಷ್ಟು ವರ್ಷಗಳ ಪರಿಶ್ರಮದ ನಂತರ ಇದೀಗ ಹೊಸ ಲುಕ್ ನೊಂದಿಗೆ ಈ ಎಲೆಕ್ಟ್ರಿಕ್ ಬೈಕ್ ಆನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈ ಬೈಕ್ ಒಂದೇ ಚಾರ್ಜ್ ನಲ್ಲಿ 300 ಕಿ.ಮೀ. ಗಿಂತ ಹೆಚ್ಚಿನ  ರೇಂಜ್ ನೀಡುತ್ತದೆ ಎನ್ನಲಾಗಿದೆ. ಕಂಪನಿಯು ಈಗಾಗಲೇ ತನ್ನ ಬುಕಿಂಗ್ ಅನ್ನು ಪ್ರಾರಂಭಿಸಿದ್ದು, ಗ್ರಾಹಕರು ಈ ಎಲೆಕ್ಟ್ರಿಕ್ ಬೈಕ್ ಅನ್ನು 23 ಸಾವಿರ ರೂಪಾಯಿಗೆ ಬುಕ್ ಮಾಡಬಹುದು. 


COMMERCIAL BREAK
SCROLL TO CONTINUE READING

ಸ್ಪೋರ್ಟ್ಸ್ ಬೈಕ್‌ನಂತಿದೆ  ಇದರ ವಿನ್ಯಾಸ : 
ಕಂಪನಿಯು ಈ ಬೈಕ್‌ನ ವಿನ್ಯಾಸವನ್ನು ಹಲವು ಬಾರಿ ಅನಾವರಣಗೊಳಿಸಿದೆ. ಈ ಬೈಕ್ ಸ್ಪೋರ್ಟ್ ವಿನ್ಯಾಸದೊಂದಿಗೆ ಬರಲಿದೆ ಎನ್ನಲಾಗಿದೆ. ಅಲ್ಟ್ರಾವೈಲೆಟ್  ಎಫ್ 77 ಎಲೆಕ್ಟ್ರಿಕ್ ಬೈಕ್ ಏರ್‌ಸ್ಟ್ರೈಕ್, ಲೇಸರ್ ಮತ್ತು ಶಾಡೋ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಎಲ್ಲಾ ರೂಪಾಂತರಗಳು ವಿಭಿನ್ನ ಶ್ರೇಣಿಗಳು ಮತ್ತು ಪವರ್ ಔಟ್‌ಪುಟ್‌ಗಳೊಂದಿಗೆ ಬರಲಿದೆ. 


ಇದನ್ನೂ ಓದಿ : Vivo Smartphone: Vivoದ ಈ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ
300 ಕಿ.ಮೀ  ರೇಂಜ್ : 
ಅಲ್ಟ್ರಾವೈಲೆಟ್  ಎಫ್ 77 ಬೈಕ್ 10.5 kWh ಬ್ಯಾಟರಿಯನ್ನು ಹೊಂದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ, ಈ ಬೈಕು 307 ಕಿಮೀ ವರೆಗಿನ ದೂರವನ್ನು ಕ್ರಮಿಸಲಿದೆ ಎಂದು ಹೇಳಲಾಗಿದೆ. ಕಂಪನಿಯ ಪ್ರಕಾರ, ಬ್ಯಾಟರಿ ಪ್ಯಾಕ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಪಡೆಯುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 25 kW ಪವರ್ ಮತ್ತು 90 Nm ಟಾರ್ಕ್ ಔಟ್‌ಪುಟ್ ನೀಡುತ್ತದೆ. 


ಅಲ್ಟ್ರಾವೈಲೆಟ್  ಎಫ್ 77 ನಲ್ಲಿ ಎಲ್ಲಾಎಲ್ ಇಡಿ ದೀಪಗಳನ್ನು ನೀಡಲಾಗುವುದು. ಇದಲ್ಲದೇ,  ಟಿಎಫ್ ಟಿ ಡಿಸ್ಪ್ಲೇ ಮತ್ತು ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಇನ್ಸ್ಟ್ರುಮೆಂಟ್ ಪ್ಯಾನೆಲ್ ನಲ್ಲಿ ಕಾಣಬಹುದು. ಎಲೆಕ್ಟ್ರಿಕ್ ಬೈಕ್‌ನ ಬೆಲೆ ಸುಮಾರು 3.5 ಲಕ್ಷ ರೂಪಾಯಿ ಇರಬಹುದು ಎನ್ನಲಾಗಿದೆ. 


ಇದನ್ನೂ ಓದಿ : ವಹಿವಾಟು ಮಿತಿ ಹೇರಲು ಸಜ್ಜಾಗಿವೆಯೇ GPay, PhonePe, Paytm ಮತ್ತಿತರ UPI ಪಾವತಿ ಅಪ್ಲಿಕೇಶನ್‌ಗಳು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.