AC Service: ಬಿಸಿಲಿನ ತಾಪದಿಂದ ಪರಿಹಾರ ಪಡೆಯಲು ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಏರ್ ಕಂಡಿಷನರ್‌ಗಳ ಮೊರೆ ಹೋಗುತ್ತಿದ್ದಾರೆ. ಏರ್ ಕಂಡಿಷನರ್‌-ಎಸಿ ಖರೀದಿಸುವಾಗ ಫಿಲ್ಟರ್, ಕಂಡೆನ್ಸರ್ ಕಾಯಿಲ್, ಕಂಪ್ರೆಸರ್, ಫ್ಯಾನ್ ಮತ್ತು ಮೋಟಾರ್‌ನಂತಹ ಹಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ. ಮಾತ್ರವಲ್ಲ, ಎಸಿಯನ್ನು ಆಗಾಗ್ಗೆ ಸರ್ವಿಸ್ ಮಾಡಿಸುವುದು ಕೂಡ ಅತ್ಯಗತ್ಯ. ಇಲ್ಲದಿದ್ದರೆ, ಎಸಿಯಲ್ಲಿ ತಾಂತ್ರಿಕ ದೋಷ ಕಂಡು ಬರುವುದು ಮಾತ್ರವಲ್ಲ, ಅದು ನಮ್ಮ ಪ್ರಾಣಕ್ಕೂ ಕೂಡ ಕುತ್ತು ತರಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ಎಸಿಯನ್ನು ಬಳಸುವುದು ಮಾತ್ರವಲ್ಲ ವರ್ಷದಲ್ಲಿ ಒಂದೆರಡು ಬಾರಿ ಅದರ ಸರ್ವಿಸ್ ಮಾಡಿಸುವುದು ಕೂಡ ಬಹಳ ಅಗತ್ಯ. ವಾಸ್ತವವಾಗಿ, ಫ್ಯಾನ್ ನಲ್ಲಿ ಧೂಳು ಸಂಗ್ರವಾಗುವಂತೆ ಎಸಿಯಲ್ಲೂ ಕೂಡ ಧೂಳು ಸಂಗ್ರಹವಾಗುತ್ತದೆ. ಇದನ್ನು ಸ್ವಚ್ಛಗೊಳಿಸದೆ ಬಳಸುವುದರಿಂದ ಅದು ಎಸಿಯ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು. 


ಇದನ್ನೂ ಓದಿ- ಮಿತ ವಿದ್ಯುತ್ ಬಿಲ್ ಜೊತೆಗೆ ತಂಪಾದ ಹವಾ ಆನಂದಿಸಲು ಇಂದೇ ಖರೀದಿಸಿ ಈ ಪೋರ್ಟಬಲ್ ಎಸಿ


ಸರ್ವಿಸ್ ಮಾಡಿಸ್ದೆ ಎಸಿ ಬಳಸಿದ್ರೆ ಈ ಕೆಳಗಿನ ತೊಂದರೆಗಳು ಎದುರಾಗಬಹುದು:-
* ಕಾರ್ಯಕ್ಷಮತೆ ಮೇಲೆ ಪರಿಣಾಮ:

ನೀವು ಹವಾ ನಿಯಂತ್ರಣವನ್ನು ಆಗಾಗ್ಗೆ ಸರ್ವಿಸ್ ಮಾಡಿಸದೇ ಇದ್ದರೆ ಅದರ ಫಿಲ್ಟರ್, ಕಂಡೆನ್ಸರ್ ಕಾಯಿಲ್, ಕಂಪ್ರೆಸರ್, ಫ್ಯಾನ್ ಮತ್ತು ಮೋಟಾರ್‌ ಹಾಳಾಗುತ್ತದೆ. ಇದು ಅದರ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಆಗ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮಾತ್ರವಲ್ಲ, ವಿದ್ಯುತ್ ಕೂಡ ಅತಿಯಾಗಿ ವ್ಯಯವಾಗುತ್ತದೆ. 


* ಜೀವಿತಾವಧಿಯಲ್ಲಿ ಕಡಿತ: 
ಏರ್ ಕಂಡಿಷನರ್‌ ಅನ್ನು ನಿಯಮಿತವಾಗಿ ಸರ್ವಿಸ್ ಮಾಡಿಸದೇ ಹಾಗೆಯೇ ಬಳಸುವುದರಿಂದ ಅದರಲ್ಲಿ ಕೊಳಕು ಹೆಚ್ಚಾಗಿ ಸಂಗ್ರಹವಾಗಿ, ಅದರ ಭಾಗಗಳು ಹಾಳಾಗುತ್ತ್ವೆಲ್ ಇದರಿಂದ ಅದರ ಜೀವಿತಾವಧಿಯೂ ಕ್ಷೀಣಿಸುತ್ತದೆ. 


ಇದನ್ನೂ ಓದಿ- ದ್ವಿಚಕ್ರ ವಾಹನ ಸವಾರರೇ ಎಚ್ಚರ! ಹೊಸ ನಿಯಮದ ಪ್ರಕಾರ ಹೆಲ್ಮೆಟ್ ಧರಿಸಿದರೂ ಬೀಳುತ್ತದೆ ದಂಡ


* ಆರೋಗ್ಯ ಸಮಸ್ಯೆ:
ಎಸಿಯಲ್ಲಿ ಸಂಗ್ರಹವಾಗುವ ಧೂಳು, ಕೊಳಕನ್ನು ಆಗಾಗ್ಗೆ ಸ್ವಚ್ಛಗೊಳಿಸದೆ ಹಾಗೆಯೇ ಬಳಸುವುದರಿಂದ ಇದು ಕೆಮ್ಮು, ಅಸ್ತಮಾದಂತಹ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. 


* ಮಾರಣಾಂತಿಕ ಸಮಸ್ಯೆ: 
ಎಸಿಯನ್ನು ಸರ್ವಿಸ್ ಮಾಡಿಸದೇ ಹಾಗೆಯೇ ಬಳಸುವುದರಿಂದ ಅದು ಕಾರ್ಬನ್ ಮಾನಾಕ್ಸೈಡ್ ಎಂಬ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಇದು ಮಾರಣಾಂತಿಕ ಎಂತಲೂ ಸಾಬೀತುಪಡಿಸಬಹುದು. 


 https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.