Traffic Challan New Rules : ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ. ಇದು ಅಪಘಾತದ ಸಂದರ್ಭದಲ್ಲಿ ಜೀವರಕ್ಷಕವಾಗಿ ಕೆಲಸ ಮಾಡುವುದರ ಜೊತೆಗೆ ಟ್ರಾಫಿಕ್ ಫೈನ್ ಬೀಳದಂತೆಯೂ ತಡೆಯುತ್ತದೆ. ಸಾಮಾನ್ಯವಾಗಿ ಹೆಲ್ಮೆಟ್ ಧರಿಸಿದ ಸವಾರನನ್ನು ತಡೆದು ನಿಲ್ಲಿಸಿ ಸಂಚಾರಿ ಪೊಲೀಸರು ದಂಡ ವಿಧಿಸುವುದು ಅಪರೂಪ. ಆದರೆ, ಈಗ ನಿಯಮ ಬದಲಾಗಿದೆ. ಕೇವಲ ಹೆಲ್ಮೆಟ್ ಧರಿಸಿದರೆ ಸಾಲದು. ಹೆಲ್ಮೆಟ್‌ಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೂಡಾ ಪಾಲಿಸಬೇಕು. ಈ ನಿಯಮಗಳನ್ನು ಅನುಸರಿಸದಿದ್ದರೆ ದಂಡ ತೆರಬೇಕಾಗುತ್ತದೆ.
ನಿಮ್ಮ ಹೆಲ್ಮೆಟ್ ಹೀಗಿರಬೇಕು :
1. ನಿಯಮಗಳ ಪ್ರಕಾರ, ಅಪಘಾತದ ಸಂದರ್ಭದಲ್ಲಿ ಗರಿಷ್ಠ ರಕ್ಷಣೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಮೆಟಿರಿಯಲ್ ಅನ್ನು ಬಳಸಿ ಹೆಲ್ಮೆಟ್ ತಯಾರಿಸಿರಬೇಕು, ಮಾತ್ರವಲ್ಲ ಅದರ ಆಕಾರ ಕೂಡಾ ಇಲ್ಲಿ ಬಹಳ ಮುಖ್ಯ.
2. ಹೆಲ್ಮೆಟ್ ಅನ್ನು ವಾಹನ ಸವಾರ ಧರಿಸಿದ್ದಾನೆ ಅನ್ನುವುದಕ್ಕಿಂತ ಯಾವ ರೀತಿ ಧರಿಸಿದ್ದಾನೆ ಎನ್ನುವುದು ಮುಖ್ಯ. ಸವಾರ ಹೆಲ್ಮೆಟ್ ಧರಿಸುವಾಗ ಅದರ ಸ್ಟ್ರಾಪ್ ಅನ್ನು ಸರಿಯಾಗಿ ಕಟ್ಟಿಕೊಂಡಿರಬೇಕು. ಸುಮ್ಮನೆ ಹೆಲ್ಮೆಟ್ ಇದೆ ಎನ್ನುವ ಕಾರಣಕ್ಕೆ ಹಾಗೆಯೇ ತಲೆಯ ಇಟ್ಟರೆ ಸಾಲದು.
ಇದನ್ನೂ ಓದಿ : ಮಿತ ವಿದ್ಯುತ್ ಬಿಲ್ ಜೊತೆಗೆ ತಂಪಾದ ಹವಾ ಆನಂದಿಸಲು ಇಂದೇ ಖರೀದಿಸಿ ಈ ಪೋರ್ಟಬಲ್ ಎಸಿ
ನಿಯಮಗಳ ಪ್ರಕಾರ, ಹೆಲ್ಮೆಟ್ ಹೀಗಿರಬೇಕು :
1. ಹೆಲ್ಮೆಟ್‌ನ ತೂಕ 1.2 ಕೆಜಿ ವರೆಗೆ ಇರಬೇಕು.
2. ಉತ್ತಮ ಗುಣಮಟ್ಟದ ಫೋಮ್ ಅನ್ನು ಬಳಸಬೇಕು ಮತ್ತು ಅದರ ಕನಿಷ್ಠ ದಪ್ಪವು 20-25 ಮಿಮೀ ಆಗಿರಬೇಕು.
3. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಕಾರ, ಹೆಲ್ಮೆಟ್‌ಗಳಿಗೆ ISI ಮಾರ್ಕ್ ಕಡ್ಡಾಯ. ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುವುದು ಮತ್ತು ಮಾರಾಟ ಎರಡೂ ಕಾನೂನುಬಾಹಿರ.
4. ಹೆಲ್ಮೆಟ್ ನಲ್ಲಿ ಕಣ್ಣುಗಳಿಗೆ ಪಾರದರ್ಶಕ ಕವರ್ ಬಳಸಬೇಕು.
5. ಹೆಲ್ಮೆಟ್‌ಗೆ ಬಿಐಎಸ್ ಸರ್ಟಿಫಿಕೇಟ್ ಪಡೆದಿರುವುದು ಬಹಳ ಮುಖ್ಯ.
6. ಕಾನೂನು ಬಾಹಿರ ಹೆಲ್ಮೆಟ್ ಬಳಸಿ ಸಿಕ್ಕಿಬಿದ್ದರೆ ಮತ್ತು ಯಾವುದೇ ಹೊಸ ರೂಲ್ಸ್ ಅನುಸರಿಸುವಲ್ಲಿ ವಿಫಲವಾದರೆ ಹೆಲ್ಮೆಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ದಂಡ ವಿಧಿಸಲಾಗಿದೆಯೇ ಚೆಕ್ ಮಾಡಿ :
ನಿಮಗೆ ದಂಡ ವಿಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಅಧಿಕೃತ ವೆಬ್‌ಸೈಟ್‌ಗೆ (https://echallan.parivahan.gov.in) ಭೇಟಿ ನೀಡಬಹುದು. ಇಲ್ಲಿ ನಿಮಗೆ ದಂಡ ವಿಧಿಸಲಾಗಿದೆಯೇ ? ಎಷ್ಟು ದಂಡ ವಿಧಿಸಲಾಗಿದೆ? ಯಾವಾಗ ವಿಧಿಸಲಾಗಿದೆ ಎನ್ನುವುದನ್ನು ಪರಿಶೀಲಿಸಬಹುದು. ಇಲ್ಲಿ ನೀಡಿರುವ ಆಯ್ಕೆಯಲ್ಲಿ ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ ಮತ್ತು ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಂತರ, ನಿಮ್ಮ ದಂಡದ ಸ್ಟೇಟಸ್ ಕಾಣಿಸುತ್ತದೆ.
ಇದನ್ನೂ ಓದಿ : ಅಡುಗೆ ಮಾಡಲು ಗ್ಯಾಸ್, ವಿದ್ಯುತ್ ಅಗತ್ಯವೇ ಇಲ್ಲ ! ಈ ವಿಶೇಷ ಸ್ಟೌವ್ ಇದ್ದರೆ ಸಾಕು ! ಸೌರ ಒಲೆಗಿಂತ ಸಂಪೂರ್ಣ ಭಿನ್ನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.