Cosmic Ghosts: ಬ್ರಹ್ಮಾಂಡದಲ್ಲಿ ಕುಣಿಯುತ್ತಿರುವ ಈ ದೆವ್ವಗಳನ್ನು ನೀವೆಂದಾದರೂ ನೋಡಿದ್ದೀರಾ?
Dancing Cosmic Ghosts - ಈ ಆಕೃತಿಗಳನ್ನು ನೋಡಿದರೆ, ಆಗಸದಲ್ಲಿ ಎರಡು ದೆವ್ವಗಳು ಕುಣಿಯುತ್ತಿವೆಯೇ ಎಂಬಂತೆ ಭಾಸವಾಗುತ್ತದೆ. ತಾವು ಇತ್ತೀಚಿಗೆ ನಡೆಸಿರುವ ಒಂದು ಶೋಧದ ಭಾಗವಾಗಿ ವಿಜ್ಞಾನಿಗಳು ಇವುಗಳ ಮೇಲಿನ ತೆರೆ ಎತ್ತಿದ್ದಾರೆ.
ನವದೆಹಲಿ: Dancing Cosmic Ghosts - ವೆಸ್ಟರ್ನ್ ಸಿಡ್ನಿ ಯೂನಿವರ್ಸಿಟಿ (Western Sydney University) ಹಾಗೂ CSIRO ವಿಜ್ಞಾನಿಗಳು ಛಾಯಾಚಿತ್ರವೊಂದನ್ನು ಜಾರಿಗೊಳಿಸಿದ್ದು, ಈ ಚಿತ್ರವನ್ನು ನೋಡಿ ನೀವೂ ಕೂಡ ದಂಗಾಗುವಿರಿ. ಈ ಚಿತ್ರದಲ್ಲಿರುವ ಆಕೃತಿಗಳಿಗೆ Cosmic Ghosts ಎಂಬ ಹೆಸರನ್ನು ಇಡಲಾಗಿದೆ. ಏಕೆಂದರೆ, ಈ ಚಿತ್ರವನ್ನು ನೋಡಿದರೆ ಹಾಗೆ ಭಾಸವಾಗುವುದು ಸಹಜ. ಆದರೆ, ಚಿತ್ರದ ಹಿಂದಿನ ನಿಜಾಂಶ ಬೇರೆಯೇ ಆಗಿದೆ.
ಬ್ರಹ್ಮಾಂಡದಲ್ಲಿ 'Dancing Ghosts'
ವಾಸ್ತವದಲ್ಲಿ ವಿಜ್ಞಾನಿಗಳು ಮೋಡಗಳಿಗೆ ಡ್ಯಾನ್ಸಿಂಗ್ ಘೋಸ್ಟ್ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಆಕೃತಿಗಳನ್ನು ಗಮನಿಸಿದರೆ, ಆಗಸದಲ್ಲಿ ಎರಡು ದೆವ್ವಗಳು ನೃತ್ಯ ಮಾಡುತ್ತಿವೆ ಏನೋ ಎಂಬಂತೆ ಭಾಸವಾಗುತ್ತದೆ. ಇತ್ತೀಚಿಗೆ ನಡೆಸಿರುವ ಒಂದು ಶೋಧದ ಭಾಗವಾಗಿ ವಿಜ್ಞಾನಿಗಳು ಇವುಗಳ ಮೇಲಿನ ತೆರೆ ಎತ್ತಿದ್ದಾರೆ.
ಮೊದಲ ಡೀಪ್ ಸ್ಕೈ ಸರ್ಚ್
ಮೊದಲ ಡೀಪ್ ಸ್ಕೈ ಹುಡುಕಾಟದ ಭಾಗವಾಗಿ ವಿಜ್ಞಾನಿಗಳು ಈ ಎರಡು 'Dancing Ghosts'ಗಳನ್ನು ಪತ್ತೆಹಚ್ಚಿದ್ದಾರೆ. ಈ ಮೊದಲ ಡೀಪ್ ಸ್ಕೈ ಸರ್ಚ್ ಅನ್ನು CSIROನ ಟೆಲಿಸ್ಕೊಪ್ ಆಗಿರುವ Australian Square Kilometre Array Pathfinder (ASKAP) ಮೂಲಕ ನಿರ್ವಹಿಸಲಾಗಿದೆ.
ವಿಜ್ಞಾನಿಗಳು (Astronomers) ಹೇಳುವ ಪ್ರಕಾರ ಎರಡು ಸಕ್ರೀಯ supermassive black holes ಗಳಿಂದ ಬರುವ ಗಾಳಿಯಿಂದ ಈ ಸ್ಥಿತಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಇವೆರಡರ ನಡುವಿನ ಅಂತರ ಕೋಟ್ಯಾಂತರ ಪ್ರಕಾಶವರ್ಷಗಳಷ್ಟಾಗಿದೆ. ಇವುಗಳನ್ನು ಗಮನಿಸಿದರೆ ಡಾನ್ಸಿಂಗ್ 'cosmic ghosts' ಎಂಬಂತೆ ಭಾಸವಾಗುತ್ತದೆ. ಇವುಗಳಿಗೆ ವೈಜ್ಞಾನಿಕವಾಗಿ PKS 2130-538 ಎಂದು ಹೆಸರನ್ನಿಡಲಾಗಿದೆ. ಆದರೆ, ಇವುಗಳ ಬಗ್ಗೆ ಇದುವರೆಗೆ ಯಾವುದೇ ವಿಸ್ತೃತ ಮಾಹಿತಿ ಲಭ್ಯವಾಗಿಲ್ಲ.
Galaxy) ಅವುಗಳ ಹುಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಇವುಗಳನ್ನು ಈ ಮೊದಲು ಕೂಡ ಗಮನಿಸಲಾಗಿದೆ, ಆದರೆ ಅವುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇದುವರೆಗೂ ಕಲೆಹಾಕಲಾಗಿಲ್ಲ.
ಈ ವಿಜ್ಞಾನದ ಸಂಶೋಧನೆಯ ನಿಷ್ಕರ್ಷಗಳನ್ನು ಪ್ರಕಟಿಸಲು Australian Astronomical Society's publications ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಸಾಕಷ್ಟು ಆಳವಾದ ಅಧ್ಯಯನದ ನಂತರವೇ ಅಧ್ಯಯನದ ಲಭ್ಯತೆಯನ್ನು ಖಚಿತಪಡಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!
ಈ ಕುರಿತು ಹೇಳಿಕೆ ನೀಡಿರುವ ವೆಸ್ಟರ್ನ್ ಸಿಡ್ನಿ ಯೂನಿವರ್ಸಿಟಿ ಹಾಗೂ CSIRO ಅಧ್ಯಯನದ ಪ್ರಮುಖ ಲೇಖಕ Ray Norris, ಸಂಪೂರ್ಣ EMU ತಂಡಕ್ಕೆ ಇದೊಂದು ಸರ್ಪ್ರೈಸ್ ಆಗಿದೆ. ಆಕಾಶ ಗಂಗೆಯ ಮಧ್ಯಭಾಗದಲ್ಲಿ ಸಕ್ರೀಯವಾಗಿರುವ supermassive black holesಗಳು ಅತ್ಯಂತ ಪ್ರಚಲಿತದಲ್ಲಿರುವ ರೇಡಿಯೋಗಳ ಸೋರ್ಸ್ ಆಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA
ಮೆಟೀರಿಯಲ್ ಮ್ಯಾಗ್ನೆಟಿಕ್ ಫೀಲ್ಡ್ ಲೈನ್ಸ್ ಗಳ ಮೂಲಕ ಇವೆಂಟ್ ಹಾರಿಜನ್ ಗಳ ಪೆರಿಮೀಟರ್ ಬಳಿ ಇದು ಚಾನಲ್ದ್ ಆಗುತ್ತದೆ ಹಾಗೂ ಪೊಲಸ್ ಮೂಲಕ ಇವು radio-loud jets ರೂಪದಲ್ಲಿ ಸಿಡಿಯುತ್ತಿರುವ ಕಾರಣ ಈ ರೀತಿ ಸಂಭವಿಸುತ್ತದೆ ಎಂಬುದು ವಿಜ್ಞಾನಿಗಳ ಅನಿಸಿಕೆ. ಕಪ್ಪು ಕುಳಿಗಳು ಇತರೆ ಸಂಗತಿಗಳನ್ನು ನುಂಗಿಹಾಕುತ್ತಿರುವಂತೆ ಇದು ಭಾಸವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ