WhatsApp New Update - ಕಾಲಕಾಲಕ್ಕೆ WhatsApp ತನ್ನ ಆಪ್ ನಲ್ಲಿ ನವೀಕರಣಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಪ್ರಸ್ತುತ ನವೀಕರಣದ ಅಡಿಯಲ್ಲಿ, WhatsApp ತನ್ನ Log Out ವೈಶಿಷ್ಟ್ಯ ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಂದೇಶ ಅಪ್ಲಿಕೇಶನ್ WhatsApp ಬಳಕೆ ತೀರಾ ಕಾಮನ್ ಆಗಿದೆ. ಹೆಚ್ಚಿನ ಜನರು ಇದನ್ನು ಅನೌಪಚಾರಿಕತೆಗೆ ಮಾತ್ರವಲ್ಲದೆ ಔಪಚಾರಿಕ ಸಂವಹನಕ್ಕೂ ಕೂಡ ಬಳಸುತ್ತಿದ್ದಾರೆ. ದಿನವಿಡೀ, ವಾಟ್ಸ್ ಆಪ್ ಸಂದೇಶಗಳಿಂದ ಹಲವು ಜನರಿಗೆ ಕಿರಿಕಿರಿ ಕೂಡ ಆಗುತ್ತದೆ.  ಆದರೆ, ಫೇಸ್‌ಬುಕ್-ಟ್ವಿಟರ್‌ನಂತಹ ಇತರ ಸಾಮಾಜಿಕ ತಾಣಗಳಂತೆ, ಇದರಲ್ಲಿ ಲಾಗ್ ಔಟ್ ಆಯ್ಕೆಯ ಕೊರತೆಯ ಕಾರಣ ಜನರು  ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೀಗ ಅಂತಹ ಜನರಿಗೆ ವಾಟ್ಸಾಪ್ನ ಲಾಗ್ ಔಟ್ ವೈಶಿಷ್ಟ್ಯ ತುಂಬಾ ಉಪಯೋಗಕ್ಕೆ ಬರಲಿದೆ. WABetaInfo ಪ್ರಕಾರ, ಈ ವೈಶಿಷ್ಟ್ಯವನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಮತ್ತು ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಪ್ರೊಗ್ರಾಮ್ ಅಡಿಯಲ್ಲಿ ನವೀಕರಿಸಲಾಗಿದೆ.


COMMERCIAL BREAK
SCROLL TO CONTINUE READING

ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಈ ಅಪ್ಡೇಟ್
ವಾಟ್ಸ್ ಆಪ್ (WhatsApp) ನ ಈ Log Out ವೈಶಿಷ್ಟ್ಯ ವರ್ಶನ್ 2.21.30.16ನಲ್ಲಿ ನೀಡಲಾಗಿದೆ. ಈಗಾಗಲೇ ಯಾವುದೇ ಓರ್ವ ಬಳಕೆದಾರರ ಮೊಬೈಲ್ ನಲ್ಲಿ ಈ ವರ್ಶನ್ ಇರಲೂ ಬಹುದು. ಆದರೆ ಆಪ್ ನಲ್ಲಿ ಲಾಗ್ ಔಟ್ ವೈಶಿಷ್ಟ್ಯ ನೀಡಲಾಗಿಲ್ಲ. ಯಾಕೆಂದರೆ, ಈ ವೈಶಿಷ್ಟ್ಯವನ್ನು ಇದುವರೆಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿಲ್ಲ. ಒಂದೊಮ್ಮೆ ಈ ಲಾಗ್ ಔಟ್ ವೈಶಿಷ್ಟ್ಯ ಪರಿಚಯಿಸಿದ ಬಳಿಕ ಡಿಲೀಟ್ ಅಕೌಂಟ್ ವೈಶಿಷ್ಟ್ಯ ಕಣ್ಮರೆಯಾಗಲಿದೆ ಎಂದೂ ಕೂಡ ಅಂದಾಜಿಸಲಾಗುತ್ತಿದೆ. 


ಇದನ್ನೂ ಓದಿ-WhatsApp ಬಳಕೆದಾರರ ಮೇಲೆ Signal ಕಣ್ಣು ! ಏಕೆ ಈ ಪ್ರಶ್ನೆ?


Web WhatsAppನಲ್ಲಿ ಮೊದಲಿನಿಂದಲೂ ಈ ವೈಶಿಷ್ಟ್ಯ ಇದೆ
ಪ್ರಸ್ತುತ ಸಾಮಾನ್ಯ ಬಳಕೆದಾರರಿಗೆ ಕೇವಲ WhatsAppನ ವೆಬ್ ವರ್ಶನ್ ನಲ್ಲಿ ಮಾತ್ರ Log Out ವೈಶಿಷ್ಟ್ಯ ನೀಡಲಾಗಿದೆ. ವೆಬ್ ವಾಟ್ಸ್ ಆಪ್ ಗೆ ಲಾಗಿನ್ ಆಗಲು https://web.whatsapp.com/ ಗೆ ಭೇಟಿ ನೀಡಿ ನಿಮ್ಮ ಸ್ಮಾರ್ಟ್ ಫೋನ್ ನಿಂದ QR Code ಸ್ಕ್ಯಾನ್ ಮಾಡಬೇಕು. ಇದಾದ ಬಳಿಕ ಲಾಗ್ ಔಟ್ ಆಗಲು ಈ ಸ್ಟೆಪ್ ಗಳನ್ನು ಫಾಲೋ ಮಾಡಬೇಕು.


ಇದನ್ನೂ ಓದಿ- WhatsApp New Features: WhatsAppನಲ್ಲಿಯೂ ಸಹ ಸೇರ್ಪಡೆಯಾಗಿವೆ ಹೊಸ ವೈಶಿಷ್ಟ್ಯಗಳು


- ಚಾಟ್ಸ್ ಗಳ ಎಡಭಾಗದಲ್ಲಿ ನೀಡಲಾಗಿರುವ ಮೂರು ವರ್ಟಿಕಲ್ ಡಾಟ್ (:) ಗಳ ಮೇಲೆ ಕ್ಲಿಕ್ಕಿಸಿ.
- ಈಗ ನಿಮ್ಮ ಮುಂದೆ ಒಂದು ಮೇನ್ಯೂ ತೆರೆದುಕೊಳ್ಳಲಿದೆ.


ಇದಲ್ಲದೆ ನೀವು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಕೂಡ ವೆಬ್ ವಾಟ್ಸ್ ಆಪ್ ಮೇಲೆ ಲಾಗ್ ಔಟ್ ಆಗಬಹುದು.
- ಅಂಡ್ರಾಯಿಡ್ ಬಳಕೆದಾರರು ನಿಮ್ಮ ವಾಟ್ಸ್ ಆಪ್ ನ ಮೇಲ್ಭಾಗದಲ್ಲಿರುವ ಮೂರು ವರ್ಟಿಕಲ್ ಡಾಟ್ (:)ಗಳ ಮೇಲೆ ಕ್ಲಿಕ್ಕಿಸಿ. ಬಳಿಕ ವಾಟ್ಸ್ ಆಪ್ ವೆಬ್ ಆಯ್ಕೆಯನ್ನು ಆಯ್ದುಕೊಳ್ಳಿ. 
- iOS ಬಳಕೆದಾರರು ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ವಾಟ್ಸ್ ಆಪ್ / ಡೆಸ್ಕ್ ಟಾಪ್ ಮೇಲೆ ಕ್ಲಿಕ್ಕಿಸಬೇಕು.


ಇದನ್ನೂ ಓದಿ- WhatsApp-Signal ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ Telegram App


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.