Privacy ಧಕ್ಕೆಯ ಭಯ ಬಿಟ್ಟು ಇನ್ಮುಂದೆ ಫೋನ್ ನಂಬರ್ ಹಂಚಿಕೊಳ್ಳದೆ ಈ ರೀತಿ WhatsApp ಬಳಸಿ
WhatsApp Trick - WhatsApp ತನ್ನ ನೂತನ ಗೌಪ್ಯತಾ ನೀತಿ ಪ್ರಕಟಿಸಿದ ಬಳಿಕ ಹಲವರು ಈ ವೇದಿಕೆಯನ್ನು ತೊರೆಯುತ್ತಿದ್ದಾರೆ. ಬಳಕೆದಾರರಿಗೆ ಇದೀಗ WhatsApp ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯ ಭಯ ಸತಾಯಿಸುತ್ತಿದೆ.
WhatsApp Tricks - ನವದೆಹಲಿ: WhatsApp ತನ್ನ ನೂತನ ಗೌಪ್ಯತಾ ನೀತಿ ಪ್ರಕಟಿಸಿದ ಬಳಿಕ ಹಲವರು ಈ ವೇದಿಕೆಯನ್ನು ತೊರೆಯುತ್ತಿದ್ದಾರೆ. ಬಳಕೆದಾರರಿಗೆ ಇದೀಗ WhatsApp ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯ ಭಯ ಸತಾಯಿಸುತ್ತಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಒಂದು ಟ್ರಿಕ್ ಸಹಾಯದಿಂದ ನೀವು ನಿಮ್ಮ ವೈಯಕ್ತಿಕ ಮೊಬೈಲ್ ನಂಬರ್ ಹಂಚಿಕೊಳ್ಳದೆಯೇ WhatsApp ಅನ್ನು ಬಳಸಬಹುದು. ಇದಕ್ಕಾಗಿ ನಿಮಗೆ ಒಂದು ವರ್ಚ್ಯುವಲ್ ನಂಬರ್ ಅವಶ್ಯಕತೆ ಬೀಳಲಿದೆ. ಈ ವರ್ಚ್ಯುವಲ್ ನಂಬರ್ ಗಾಗಿ ನಿಮಗೆ TextNow ಅಪ್ಪ್ಲಿಕೆಶನ್ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿಂದ ನಂಬರ್ ಪಡೆಯಲು ನೀವು ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಸ್ಥಾಪಿಸಬೇಕು.
ಈ ರೀತಿ ತಯಾರಾಗಲಿದೆ ನಿಮ್ಮ ವರ್ಚ್ಯುವಲ್ ನಂಬರ್
ಇದಕ್ಕಾಗಿ ಮೊದಲು ನೀವು TextNow ಮೇಲೆ ಉಚಿತ ಅಕೌಂಟ್ ತೆರೆಯಬೇಕು. ಲಾಗಿನ್ ಮಾಡಿದ ಬಳಿಕ ನಿಮಗೆ US ಹಾಗೂ ಕೆನಡಾ ಮೂಲದ 5 ಉಚಿತ ವರ್ಚ್ಯುವಲ್ ನಂಬರ್ ಗಳ ಪಟ್ಟಿ ಸಿಗಲಿದೆ. ಇದರಿಂದ ನೀವು ಯಾವುದಾದರೊಂದು ನಂಬರ್ ಆಯ್ಕೆ ಮಾಡಬಹುದು. ಈ ನಂಬರ್ ಬಳಿಸಿ ನೀವು ಕರೆ ಕೂಡ ಮಾಡಬಹುದು ಹಾಗೂ ಸಂದೇಶ ಪಡೆಯ/ರವಾನಿಸಬಹುದು.
ಇದನ್ನು ಓದಿ- WhatsApp New Features: WhatsAppನಲ್ಲಿಯೂ ಸಹ ಸೇರ್ಪಡೆಯಾಗಿವೆ ಹೊಸ ವೈಶಿಷ್ಟ್ಯಗಳು
ವೈಯಕ್ತಿಕ ಫೋನ್ ನಂಬರ್ ಇಲ್ಲದೆ WhatsApp ಹೇಗೆ ಕಾರ್ಯನಿರ್ವಹಿಸುತ್ತದೆ?
ಈಗ ನೀವು ನಿಮ್ಮ ಫೋನ್ ನಲ್ಲಿ WhatsApp ಡೌನ್ ಲೋಡ್ ಮಾಡಿ. ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಮೊದಲೇ ವಾಟ್ಸ್ ಆಪ್ ಇದ್ದರೆ ಮೊದಲು ಅದನ್ನು ಅನ್ ಇನ್ಸ್ಟಾಲ್ ಮಾಡಬೇಕು. ಒಂದೊಮ್ಮೆ ಹೊಸದಾಗಿ ವಾಟ್ಸ್ ಆಪ್ ಡೌನ್ ಲೋಡ್ ಆದ ಮೇಲೆ ಹೊಸದಾಗಿ ರಿಜಿಸ್ಟ್ರೇಶನ್ ಮಾಡುವಾಗ ನೀವು ಆಯ್ಕೆ ಮಾಡಿರುವ ವರ್ಚ್ಯುವಲ್ ಆಧಾರದ ಮೇಲೆ ಭಾರತದ STD ಕೋಡ್ ಅನ್ನು ನೀವು US ಅಥವಾ ಕೆನಡಾಗೆ ಬದಲಾಗಿಸಬೇಕು. ಬಳಿಕ ವರ್ಚ್ಯುವಲ್ ನಂಬರ್ ನಮೂದಿಸಿ. ಈ ವೇಳೆ ಬ್ಯಾಗ್ರೌಂಡ್ ನಲ್ಲಿ TextNow ಆಪ್ ತೆರೆದಿಡುವುದನ್ನು ಮರಯಬೇಡಿ.
ಇದನ್ನು ಓದಿ- WhatsApp ಬಳಕೆದಾರರ ಮೇಲೆ Signal ಕಣ್ಣು ! ಏಕೆ ಈ ಪ್ರಶ್ನೆ?
ಈ ವರ್ಚ್ಯುವಲ್ ಫೋನ್ ನಂಬರ್ ಮೇಲೆ ನಿಮಗೆ OTP ಬರುವುದಿಲ್ಲ. OTP ಟೈಮಿಂಗ್ ಎಕ್ಷ್ಪೈರ್ ಆಗುವವರೆಗೆ ಕಾಯಿರಿ. ಬಳಿಕ OTP ಗಾಗಿ 'Call Me' ಆಯ್ಕೆಯನ್ನು ಬಳಸಿ. ಇದೀಗ ನಿಮಗೆ TextNow ಆಪ್ ಮೇಲೆ ಒಂದು ಮಿಸ್ಸಡ್ ಕಾಲ್ ಬರಲಿದೆ. ಇದೊಂದು ಆಡಿಯೋ ಮೆಸೇಜ್ ಆಗಿರಲಿದ್ದು, ಇದರಲ್ಲಿ ನಿಮಗೆ OTP ಹೇಳಲಾಗುತ್ತದೆ. ಈ OTP ಯನ್ನು ವಾಟ್ಸ್ ಆಪ್ ನಲ್ಲಿ ನಮೂದಿಸಿ ವಾಟ್ಸ್ ಬಳಕೆ ಆರಂಭಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.