BSNL 4G Service :BSNL ತನ್ನ 4G ಸೇವೆಯನ್ನು ಹಲವು ರಾಜ್ಯಗಳಲ್ಲಿ ಪ್ರಾರಂಭಿಸಿದೆ.ಕಂಪನಿಯು ಈಗ ದೇಶಾದ್ಯಂತ ಅತ್ಯಂತ ವೇಗದ ಇಂಟರ್ನೆಟ್ ಒದಗಿಸಲು ತಯಾರಿ ನಡೆಸುತ್ತಿದೆ.BSNL ದೇಶಾದ್ಯಂತ 4G ಸೇವೆಯನ್ನು ವಿಸ್ತರಿಸುತ್ತಿದೆ.ಇನ್ನು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು 5G ತಂತ್ರಜ್ಞಾನದ ಟೆಸ್ಟಿಂಗ್ ಕೂಡಾ ಪ್ರಾರಂಭಿಸಿದೆ.ಇದಲ್ಲದೆ,BSNL ಈಗ ಬಳಕೆದಾರರಿಗೆ 5G ಸಿಮ್ ಕಾರ್ಡ್‌ಗಳನ್ನು ಸಹ ನೀಡುತ್ತಿದೆ.ಈ ಮೂಲಕ  BSNL ಭಾರೀ ದೊಡ್ಡ ಯಶಸ್ಸನ್ನು ಸಾಧಿಸಿದೆ.ಈಗ ಬಿಎಸ್ಎನ್ಎಲ್ ನ 15 ಸಾವಿರಕ್ಕೂ ಹೆಚ್ಚು 4G ಟವರ್‌ಗಳು ಕಾರ್ಯನಿರ್ವಹಿಸುತ್ತಿವೆ.


COMMERCIAL BREAK
SCROLL TO CONTINUE READING

15 ಸಾವಿರಗಳಷ್ಟಾಗಿದೆ 4G ಟವರ್ :
ಈ ಟವರ್‌ಗಳನ್ನು 'ಆತ್ಮನಿರ್ಭರ್ ಭಾರತ್'ಯೋಜನೆಯಡಿ ನಿರ್ಮಿಸಲಾಗಿದ್ದು,  ದೇಶದಾದ್ಯಂತ ನಿರಂತರ ಇಂಟರ್ನೆಟ್ ಅನ್ನು ಒದಗಿಸಲಿದೆ ಎಂದು ಕಂಪನಿ ಹೇಳಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ BSNLನ 4G ನೆಟ್‌ವರ್ಕ್ ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದೆ.ಈ ಮೊಬೈಲ್ ಟವರ್‌ಗಳಲ್ಲಿ ಅಳವಡಿಸಲಾಗಿರುವ ಎಲ್ಲಾ ಉಪಕರಣಗಳು ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ.


ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ? ಈ ರೀತಿ ಪತ್ತೆ ಹಚ್ಚಿ!


BSNL 4G ರೋಲ್‌ಔಟ್ ಟೈಮ್‌ಲೈನ್ : 
ಅಕ್ಟೋಬರ್ ಅಂತ್ಯದೊಳಗೆ 80,000 ಟವರ್‌ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಮುಂದಿನ ವರ್ಷದ ಮಾರ್ಚ್‌ನೊಳಗೆ ಉಳಿದ 21,000 ಟವರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಹೇಳಿದ್ದಾರೆ. ಅಂದರೆ, ಮಾರ್ಚ್ 2025ರ ವೇಳೆಗೆ ಒಟ್ಟು ಒಂದು ಲಕ್ಷ ಟವರ್‌ಗಳು 4G ನೆಟ್‌ವರ್ಕ್‌ಗೆ ಸಿದ್ಧವಾಗಲಿದೆ.


BSNL 5G ರೋಲ್ಔಟ್ : 
4G ಸೇವೆಯನ್ನು ಪ್ರಾರಂಭಿಸುವುದರ ಜೊತೆಗೆ, BSNL 5G ಟೆಸ್ಟಿಂಗ್ ಕೂಡಾ ಪ್ರಾರಂಭಿಸಿದೆ.ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇತ್ತೀಚೆಗೆ ಭಾರತೀಯ ತಂತ್ರಜ್ಞಾನದ ಆಧಾರದ ಮೇಲೆ BSNL ನ 5G ನೆಟ್‌ವರ್ಕ್ ಅನ್ನು ಬಳಸಿಕೊಂಡು ವೀಡಿಯೊ ಕರೆ ಮಾಡಿದ್ದರು.ಈ ಕಾರಣದಿಂದಾಗಿ,BSNL ನ ಮುಂಬರುವ 5G ಸೇವೆಯ ಬಗ್ಗೆಯೂ ಜನರ ಕುತೂಹಲ ಬಹಳಷ್ಟು ಹೆಚ್ಚಾಗಿದೆ.


ಇದನ್ನೂ ಓದಿ : jio ಹೊರ ತಂದಿದೆ ಹೊಸ ಪ್ಲಾನ್ !ಮೂರು ತಿಂಗಳವರೆಗೆ ರೀಚಾರ್ಜ್ ಮಾಡಬೇಕಿಲ್ಲ, ಸಿಗುವುದು ಅನ್ಲಿಮಿಟೆಡ್ ಡೇಟಾ !


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.