WhatsApp Feature: ವಾಟ್ಸಾಪ್ನಲ್ಲಿರುವ ಕೆಲವು ಸೀಕ್ರೆಟ್ ವೈಶಿಷ್ಟ್ಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಇದರಿಂದ ನೀವು ಇಷ್ಟಪಡುವ ವ್ಯಕ್ತಿ ದಿನವಿಡೀ ಯಾರೊಂದಿಗೆ ಹೆಚ್ಚು ಮಾತನಾಡುತ್ತಾರೆ ಎಂಬ ರಹಸ್ಯವನ್ನು ಕೂಡ ಪತ್ತೆ ಮಾಡಬಹುದು.
ಬೆಂಗಳೂರು: ವಾಟ್ಸಾಪ್ ಹಲವು ಗುಪ್ತ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ ಕೆಲವು ಸೆಟ್ಟಿಂಗ್ಸ್ ಬದಲಾಯಿಸುವ ಮೂಲಕ ನೀವು ಕ್ಷಣಾರ್ಧದಲ್ಲಿ ನಿಮ್ಮ ಸಂಗಾತಿಯ ಚಾಟ್ ರಹಸ್ಯವನ್ನು ತಿಳಿಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಸಂಗಾತಿ ದಿನವಿಡೀ ಯಾರೊಂದಿಗೆ ಚಾಟ್ ಮಾಡುತ್ತಾರೆ ಎಂಬ ಕುತೂಹಲ ನಿಮಗೂ ಇದ್ಯಾ? ವಾಟ್ಸಾಪ್ನಲ್ಲಿರುವ ಕೆಲವು ಫೀಚರ್ಗಳನ್ನು ಬಳಸಿ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು.
ವಾಸ್ತವವಾಗಿ ಈ ತಂತ್ರಜ್ಞಾನ ಯುಗದಲ್ಲಿ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಆದರೆ, ನಾವಿಷ್ಟ ಪಡುವವರು ನಮ್ಮ ಚಾಟ್ಗಳನ್ನು ನಿರ್ಲಕ್ಷಿಸಿದಾಗ ಮನಸ್ಸು ಕಸಿವಿಸಿಗೊಳ್ಳುತ್ತದೆ.
ವಾಟ್ಸಾಪ್ನಲ್ಲಿ ಅಂತಹ ಹಲವು ವೈಶಿಷ್ಟ್ಯಗಳಿದ್ದು ಇದರ ಸಹಾಯದಿಂದ ನೀವು ನಿಮ್ಮ ಪ್ರೀತಿಪಾತ್ರರು ವಾಟ್ಸಾಪ್ ಚಾಟ್ನಲ್ಲಿ ಯಾರೊಂದಿಗೆ ಹೆಚ್ಚು ಬ್ಯುಸಿ ಆಗಿರುತ್ತಾರೆ ಎಂದು ತಿಳಿಯಬಹುದು.
ಇದಕ್ಕಾಗಿ ಮೊದಲು ನಿಮ್ಮ ಸಂಗಾತಿಯ ವಾಟ್ಸಾಪ್ ತೆರೆದು ಅಲ್ಲಿ ಬಲಭಾಗದ ಮೂಲೆಯಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ವಾಟ್ಸಾಪ್ನಲ್ಲಿ ಸೆಟ್ಟಿಂಗ್ಗಳನ್ನು ತೆರೆದ ನಂತರ ಇದರಲ್ಲಿರುವ ಸಂಗ್ರಹಣಾ ಡೇಟಾ ಆಯ್ಕೆಯನ್ನು ಆರಿಸಿ, ಇದರಲ್ಲಿ ಸಂಗ್ರಹಣೆಯನ್ನು ಆರಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಇದರಲ್ಲಿ ಚಾಟ್ನ ಎಲ್ಲಾ ವಿವರಗಳನ್ನು ಪಡೆಯುತ್ತೀರಿ.
ವಾಟ್ಸಾಪ್ ಸೆಟ್ಟಿಂಗ್ಸ್ ನಲ್ಲಿ ಇರುವ ಮ್ಯಾನೇಜ್ ಸ್ಟೋರೇಜ್ನಲ್ಲಿ ಸಂಪರ್ಕಗಳ ಪಟ್ಟಿಯನ್ನು ಕಾಣಬಹುದು. ಇದರಲ್ಲಿ ನಿಮ್ಮ ಸಂಗಾತಿ ಹೆಚ್ಚು ಯಾರೊಂದಿಗೆ ಮಾತನಾಡುತ್ತಾರೆ ಆ ಸಂಖ್ಯೆಗಳ ಪಟ್ಟಿ, ಅವರು ಯಾರಿಗೆ ಹೆಚ್ಚು ಫೋಟೋ, ವಿಡಿಯೋಗಳನ್ನು ಕಳುಹಿಸುತ್ತಾರೆ ಎಂಬ ವಿವರ ಗೋಚರಿಸುತ್ತದೆ.